ಬ್ರೇಕಿಂಗ್ ನ್ಯೂಸ್
06-07-23 03:17 pm Mangalore Correspondent ಕರಾವಳಿ
ಉಳ್ಳಾಲ, ಜು.6: ದೇವಿ ಜಾತ್ರೆ ನಡೆಸುವ ನೆಪದಲ್ಲಿ ಅಪರಿಚಿತ ಯುವಕರ ತಂಡವೊಂದು ಕೇಸರಿ ಬಟ್ಟೆ ತೊಟ್ಟು ಮಂಗಳೂರಿನಲ್ಲಿ ರಾತ್ರಿ ವೇಳೆಯೂ ಭಿಕ್ಷಾಟನೆಯಲ್ಲಿ ತೊಡಗಿದ್ದು, ಅನುಮಾನಸ್ಪದ ಯುವಕನನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತೊಕ್ಕೊಟ್ಟು ಕಾಪಿಕಾಡಿನ ರಾಜ್ ಕೇಟರರ್ಸ್ ಕಚೇರಿಗೆ ನಿನ್ನೆ ರಾತ್ರಿ 8 ಗಂಟೆಗೆ ಖಾವಿ ತೊಟ್ಟಿದ್ದ ಯುವಕನೋರ್ವ ಪ್ರವೇಶಿಸಿ ನಮ್ಮೂರಿನ ದೇವಿ ಜಾತ್ರೆಗೆ ಚಂದಾ ನೀಡುವಂತೆ ಕೇಟರಿಂಗ್ ಮಾಲಕ ರಾಜೇಶ್ ಕಾಪಿಕಾಡು ಅವರಲ್ಲಿ ಕೇಳಿದ್ದಾನೆ. ರಾತ್ರಿ ವೇಳೆ ಬಂದಿದ್ದ ಖಾವಿಧಾರಿ ವ್ಯಕ್ತಿ ಸೊಂಟಕ್ಕೆ ಪ್ಲಾಸ್ಟಿಕ್ ಕೊಡದ ಹುಂಡಿ, ದೇವಿಯ ಫೋಟೊ ಅಳವಡಿಸಿದ್ದನ್ನ ಕಂಡು ಅನುಮಾನದಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಕ್ಕಾಬಿಕ್ಕಿಯಾದ ಯುವಕ ತನ್ನ ಹೆಸರು ಮುತ್ತಪ್ಪ, ಹೈದರಾಬಾದ್ ಮೂಲದವನೆಂದು ಹೇಳಿದ್ದ. ಅಲ್ಲದೆ, ಮೂವತ್ತು ಜನ ಮಂಗಳೂರು ನಗರದಲ್ಲಿ ಇದೇ ರೀತಿ ಕಲೆಕ್ಷನ್ ಮಾಡುತ್ತಿರುವುದಾಗಿ ಕನ್ನಡ ಭಾಷೆಯಲ್ಲಿ ಹೇಳಿದ್ದಾನೆ. ಯುವಕನ ಬಳಿ ಮೊಬೈಲ್ ಆಗಲಿ,ಯಾವುದೇ ಗುರುತಿನ ಚೀಟಿ ಇಲ್ಲದನ್ನ ಗಮನಿಸಿದ ರಾಜೇಶ್ ಅವರು ಸ್ಥಳಕ್ಕೆ ಉಳ್ಳಾಲ ಪೊಲೀಸರನ್ನ ಕರೆಸಿದ್ದಾರೆ.
ಹೊರ ಜಿಲ್ಲೆಯ ಖಾವಿಧಾರಿ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಯುವಕ ತಾನು ಜಮಖಂಡಿ ಜಿಲ್ಲೆಯವನೆಂದು ಧ್ವಂದ್ವ ಹೇಳಿಕೆ ನೀಡಿದ್ದಾನೆ. ಹೊರ ಜಿಲ್ಲೆಯ ನಿರುದ್ಯೋಗಿ ಯುವಕರು ಖಾವಿ ವೇಷ ತೊಟ್ಟು ರಾತ್ರಿ ವೇಳೆ ಚಂದಾ ಎತ್ತುವ ಸೋಗಲ್ಲಿ ದರೋಡೆ ಮಾಡಲು ಯೋಜನೆ ರೂಪಿಸಿದ್ದಾರೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ. ಪೊಲೀಸರು ಸಮರ್ಪಕ ತನಿಖೆ ನಡೆಸಿದರೆ ಅಸಲಿಯತ್ತು ಬೆಳಕಿಗೆ ಬರಬಹುದು. ಇಂತಹ ಖಾವಿಧಾರಿಗಳು ಮನೆಗೆ ಬಂದಲ್ಲಿ ಸಾರ್ವಜನಿಕರು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Ullal police arrest youths dressed in kesari begging for money at night in suspicious way in Mangalore.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm