ಬ್ರೇಕಿಂಗ್ ನ್ಯೂಸ್
11-07-23 10:54 pm Mangalore Correspondent ಕರಾವಳಿ
ಮಂಗಳೂರು, ಜುಲೈ 11: ಹಿರಿಯ ವಕೀಲ, ನಗರದ ಬಿಜೈ ಕುಂಟಿಕಾನ ನಿವಾಸಿ ಬಿ.ಹರೀಶ್ ಆಚಾರ್ಯ (65) ತನ್ನ ಮನೆಯ ಮೆಟ್ಟಿಲಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುಂಟಿಕಾನ ಕೆಎಸ್ಸಾರ್ಟಿಸಿ ಡಿಪೋ ಹಿಂಭಾಗದಲ್ಲಿರುವ ಹಳೆಕಾಲದ ಮಹಡಿಯ ಮನೆಯಲ್ಲಿ ಹರೀಶ್ ಆಚಾರ್ಯ ಒಬ್ಬಂಟಿಯಾಗಿ ವಾಸವಿದ್ದರು. ದಿನವೂ ಕೋರ್ಟಿಗೆ ಬರುತ್ತಿದ್ದ ಅವರು ಸಿವಿಲ್ ವಕೀಲರಾಗಿ ಪ್ರಸಿದ್ಧಿ ಪಡೆದಿದ್ದರು. ಅಲ್ಲದೆ, ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಶುಕ್ರವಾರ ಎಂದಿನಂತೆ ಕೋರ್ಟಿಗೆ ಬಂದು ತೆರಳಿದ್ದ ಅವರು ಸೋಮವಾರ ಕೋರ್ಟಿಗೆ ಬಂದಿರಲಿಲ್ಲ. ಫೋನ್ ಮಾಡಿದಾಗ, ಸ್ವೀಕರಿಸುತ್ತಿರಲಿಲ್ಲ. ಮಂಗಳವಾರ ಬೆಳಗ್ಗೆಯೂ ಓರಗೆಯವರು ಕರೆ ಮಾಡಿದ್ದಾರೆ. ಫೋನ್ ಸ್ವೀಕರಿಸದೇ ಇದ್ದುದರಿಂದ ಮನೆಗೆ ತೆರಳಿ ನೋಡಿದ್ದಾರೆ.
ಮನೆಯ ಹೊರಗಡೆ ಗೇಟಿನಲ್ಲೇ ಎರಡು ದಿನಗಳ ಪತ್ರಿಕೆ ಇತ್ತು. ಮನೆಗೆ ಒಳಗಿನಿಂದ ಬೀಗ ಹಾಕಿತ್ತು. ಹೊರಗಡೆ ನಿಲ್ಲಿಸಿದ್ದ ಕಾರು ಹಾಗೆಯೇ ಇತ್ತು. ಹರೀಶ್ ಆಚಾರ್ಯರು ಮನೆಯ ಒಳಗೇ ಇರಬೇಕೆಂದು ವಕೀಲ ಗೆಳೆಯರು ಉರ್ವಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಮನೆಯ ಬಾಗಿಲು ಒಡೆದು ನೋಡಿದಾಗ, ಟಿವಿ ಚಾಲೂ ಸ್ಥಿತಿಯಲ್ಲಿತ್ತು. ಹರೀಶ್ ಆಚಾರ್ಯ ಮನೆಯ ಒಳಗಿಂದ ಮೇಲೆ ಹೋಗುವ ಮೆಟ್ಟಲಲ್ಲಿ ಕುಳಿತ ಸ್ಥಿತಿಯಲ್ಲೇ ಸಾವನ್ನಪ್ಪಿದ್ದರು. ದೇಹ ಕೊಳೆತು ವಾಸನೆ ಬರುತ್ತಿದ್ದುದರಿಂದ ಎರಡು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹರೀಶ್ ಆಚಾರ್ಯ ಅವರ ತಂದೆಯೂ ಮಂಗಳೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಮನೆಯಲ್ಲಿ ಮಗನ ಜೊತೆಗೇ ವಾಸವಿದ್ದರು. ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ತಂದೆ ತೀರಿಕೊಂಡಿದ್ದರು. ಹರೀಶ್ ಅವರಿಗೆ ಮದುವೆಯಾಗಿದ್ದು, ತುಂಬ ವರ್ಷಗಳ ಹಿಂದೆಯೇ ಪತ್ನಿಯಿಂದ ದೂರವಿದ್ದು ಮನೆಯಲ್ಲಿ ಒಬ್ಬಂಟಿಯಾಗಿಯೇ ಇದ್ದರು. ಊಟ, ತಿಂಡಿ ಎಲ್ಲವೂ ಹೊರಗಿನಿಂದಲೇ ಮಾಡುತ್ತಿದ್ದರು. ಕೋರ್ಟಿನಲ್ಲಿ ತನ್ನ ಓರಗೆಯವರ ಜೊತೆಗೆ ಚಹಾ ಕುಡಿಯುತ್ತಿದ್ದರು. ಹೀಗಾಗಿ ಹರೀಶಣ್ಣ ಯಾಕೆ ಬಂದಿಲ್ಲ ಎಂದು ಸಹವರ್ತಿಗಳು ಸೋಮವಾರ ತಲೆಕೆಡಿಸಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ಹರೀಶಣ್ಣ ಅನಾಥರಾಗಿ ಸಾವನ್ನಪ್ಪಿದ ವಿಚಾರ ತಿಳಿದ ಇತರೇ ವಕೀಲರು ಮನೆಗೆ ತೆರಳಿ ನೋಡಿದ್ದಾರೆ.
ಸದ್ಯ, ಪೊಲೀಸರು ಅವರ ಶವವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಅಲ್ಲದೆ, ಅವರಿಗೆ ಸಂಬಂಧಪಟ್ಟ ವಾರೀಸುದಾರರು ಇದ್ದರೆ ಶವ ಕೊಂಡೊಯ್ಯಬಹುದು ಎಂದು ಪ್ರಕಟಣೆ ನೀಡಿದ್ದಾರೆ. ಹರೀಶ್ ಆಚಾರ್ಯ ಮೊದಲಿನಿಂದಲೂ ಮಂಗಳೂರಿನ ಕುಂಟಿಕಾನದಲ್ಲಿಯೇ ಇದ್ದವರಾಗಿದ್ದು, ಅದೇ ಪರಿಸರದಲ್ಲಿ ಹಳೆ ತಲೆಮಾರಿನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮನೆ, ಜಾಗ ಇದೆ. ಆದರೆ, ಯಾರಾದರೂ ಸಂಬಂಧಿಕರು ಇದ್ದಾರೆಯೇ ಅನ್ನುವುದು ತಿಳಿದಿಲ್ಲ. ಯಾರೂ ಬರದೇ ಇದ್ದಲ್ಲಿ ನಾವು ವಕೀಲರ ಸಂಘದಿಂದ ಅಂತ್ಯ ಸಂಸ್ಕಾರ ನಡೆಸುತ್ತೇವೆ ಎಂದು ವಕೀಲರ ಸಂಘದ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ತಿಳಿಸಿದ್ದಾರೆ.
Mangalore senior Lawyer Harish B Acharaya (60) found dead in House, found after two days. Harish was said to be alone and was unmarried. It is suspected that he has died out of heart attack.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am