ಬ್ರೇಕಿಂಗ್ ನ್ಯೂಸ್
23-07-23 05:20 pm Mangalore Correspondent ಕರಾವಳಿ
ಮಂಗಳೂರು, ಜುಲೈ 23: ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಕುಮಾರಧಾರಾ, ನೇತ್ರಾವತಿ ನದಿಗಳು ಕಡೆಗೂ ತುಂಬಿ ಹರಿದಿವೆ. ಕುಕ್ಕೆ ಸುಬ್ರಹ್ಮಣ್ಯ ಬಳಿ ಹರಿಯುವ ಕುಮಾರಧಾರ ನದಿಯಲ್ಲಿ ನೆರೆ ಬಂದಿದ್ದು, ದೇವಸ್ಥಾನ ಮಹಾದ್ವಾರದ ಬಳಿಯ ಸ್ನಾನಘಟ್ಟ ಭಾನುವಾರ ಬೆಳಗ್ಗೆಯೇ ಮುಳುಗಡೆಯಾಗಿದೆ.
ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯೂ ತುಂಬಿ ಹರಿದಿದ್ದು, ಸ್ನಾನಘಟ್ಟ ಮುಳುಗಡೆಯಾಗಿದ್ದರಿಂದ ಜನರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಪಶ್ಚಿಮ ಘಟ್ಟದಲ್ಲಿ ಮಳೆ ಕೊರತೆಯಾಗಿದ್ದರಿಂದ ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿ ತಡವಾಗಿಯಾದರೂ ಕುಮಾರಧಾರ ಮತ್ತು ನೇತ್ರಾವತಿ ನದಿ ತುಂಬಿಕೊಂಡಿದೆ. ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಈ ಭಾಗದ ಸಣ್ಣ ಸಣ್ಣ ಹೊಳೆಗಳು ಉಕ್ಕಿ ಹರಿದಿವೆ.



2019ರಲ್ಲಿ ಬೆಟ್ಟಗಳ ನಡುವೆ ಸ್ಫೋಟಗೊಂಡು ಉಕ್ಕಿ ಹರಿದಿದ್ದ ಹರಿಹರ ಮತ್ತು ಕಡಮಕಲ್ ಎಸ್ಟೇಟ್ ಬಳಿಯ ಹೊಳೆಯಲ್ಲಿಯೂ ಭಾರೀ ನೀರು ಬಂದಿದ್ದು, ಈ ಭಾಗದ ನಿವಾಸಿಗಳು ಹಿಂದಿನ ರೀತಿಯಲ್ಲೇ ಬೆಟ್ಟ ಸ್ಫೋಟಗೊಳ್ಳುತ್ತಾ ಅನ್ನುವ ಆತಂಕದಲ್ಲಿದ್ದಾರೆ. ಸುಳ್ಯದ ಪಯಸ್ವಿನಿ ನದಿಯೂ ತುಂಬಿಕೊಂಡಿದ್ದು, ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಬೆಳ್ತಂಗಡಿಯಲ್ಲಿ ಭಾರೀ ಮಳೆಯಾಗಿದ್ದರಿಂದ ನೇತ್ರಾವತಿ ನದಿ ಬಂಟ್ವಾಳದ ಪಾಣೆಮಂಗಳೂರು, ಆಲಡ್ಕ ಪರಿಸರದಲ್ಲಿ ಪ್ರವಾಹ ಸೃಷ್ಟಿಸಿದೆ. ಆಲಡ್ಕ ಪರಿಸರದಲ್ಲಿ ನೇತ್ರಾವತಿ ನದಿ ನೀರು ಮನೆಗಳಿಗೆ ನುಗ್ಗಿದ್ದು, ಅಲ್ಲಿನ ನಿವಾಸಿಗಳನ್ನು ಗಂಜಿಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.



ಬಂಟ್ವಾಳ, ಮಂಗಳೂರಿನಲ್ಲಿ ಭಾನುವಾರ ಮಳೆ ಕಡಿಮೆಯಾಗಿದ್ದು, ಬೆಳ್ತಂಗಡಿ, ಧರ್ಮಸ್ಥಳ, ಚಾರ್ಮಾಡಿ, ಸುಳ್ಯ ತಾಲೂಕಿನ ಬ್ರಹ್ಮಗಿರಿ, ಕೊಡಗಿನ ಭಾಗದಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ನದಿಗಳು ಭೋರ್ಗರೆಯುತ್ತ ಹರಿದಿದೆ. ಇದೇ ರೀತಿ ಮಳೆಯಾದಲ್ಲಿ ಸೋಮವಾರದ ಹೊತ್ತಿಗೆ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆಯಿದೆ. ಭಾನುವಾರ ಸಂಜೆಯ ವೇಳೆಗೆ ಬಂಟ್ವಾಳದಲ್ಲಿ ಏಳುವರೆ ಮೀಟರ್ ಎತ್ತರದಲ್ಲಿ ಹರಿದಿದ್ದು, ಅಪಾಯದ ಮಟ್ಟ 9 ಮೀಟರ್ ಆಗಿದೆ. ಈಗಲೇ ಹಲವು ಕಡೆ ನದಿ ದಡಗಳಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿದೆ.



ಲೇಡಿಹಿಲ್ ನಲ್ಲಿ ಧರಗುರುಳಿದ ಬೃಹತ್ ಮರ
ಮಂಗಳೂರು ನಗರದ ಲೇಡಿಹಿಲ್ ವೃತ್ತದಲ್ಲಿ ನಿನ್ನೆ ರಾತ್ರಿ ಗಾಳಿ ಮಳೆಗೆ ಬೃಹತ್ ಗಾತ್ರದ ಆಲದ ಮರ ಬುಡ ಸಮೇತ ಉರುಳಿ ಬಿದ್ದಿದೆ. ರಸ್ತೆಗಡ್ಡಲಾಗಿ ಬಿದ್ದ ಮರವನ್ನು ಕತ್ತರಿಸಿ ತೆರವು ಮಾಡುವ ಕಾರ್ಯ ರಾತ್ರಿಯೇ ನಡೆದಿತ್ತು. ತೆರವು ಕಾರ್ಯ ಆಗಿರಲಿಲ್ಲ. ಬೆಳಗ್ಗೆ ಒಂದು ಭಾಗದಲ್ಲಿ ಮರವನ್ನು ಕಡಿದು ರಸ್ತೆಯನ್ನು ಸಂಚಾರಕ್ಕೆ ಬಿಟ್ಟುಕೊಟ್ಟಿದ್ದರು. ಭಾರೀ ಗಾತ್ರದ ಮರವಾಗಿದ್ದರಿಂದ ಪೂರ್ತಿ ತೆರವು ಪ್ರಕ್ರಿಯೆ ಸಾಧ್ಯವಾಗಲಿಲ್ಲ. ರಸ್ತೆ ಕಾಂಕ್ರೀಟ್ ಆದ ಸಂದರ್ಭದಲ್ಲಿ ಮರದ ಸುತ್ತಲೂ ಸಿಮೆಂಟಿನಿಂದ ಮುಚ್ಚಿದ್ದರಿಂದಲೋ ಏನೋ, ಬೇರುಗಳು ಒಣಗಿ ಬುಡಸಮೇತ ಮರ ಉರುಳಿ ಬಿದ್ದಿದೆ.
Heavy rains lash coastal districts Mangalore and Udupi, IMD issues Orange alert, bathing ghat in Subrahmanya submerged in floodwaters. With the Kumaradhara river in spate because of heavy rains across coastal-Malnad Karnataka, the district administration has urged devotees to not visit Kukke Subrahmanya for the time being. The bathing ghat at Kukke Subrahmanya on the banks of the Kumaradhara river was submerged in the floodwaters.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm