ಬ್ರೇಕಿಂಗ್ ನ್ಯೂಸ್
25-07-23 10:08 pm Mangalore Correspondent ಕರಾವಳಿ
ಮಂಗಳೂರು, ಜುಲೈ 25: ಮಂಗಳೂರಿನ ಹೆಸರಾಂತ ಉದ್ಯಮಿ ಅರ್ಜುನ್ ಮೊರಾಸ್ ಮತ್ತೊಂದು ಲಕ್ಸುರಿ ಕಾರನ್ನು ಖರೀದಿಸಿದ್ದಾರೆ. ಸ್ಪೋರ್ಟ್ಸ್ ಕಾರು, ಲಕ್ಸುರಿ ಕಾರುಗಳನ್ನು ಖರೀದಿಸುವ ಕ್ರೇಜ್ ಬೆಳೆಸಿಕೊಂಡಿರುವ ಅರ್ಜುನ್ ಮೊರಾಸ್ ಈ ಬಾರಿ ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಮಾಡೆಲ್ ಕಾರನ್ನು ಖರೀದಿಸಿ ಮಂಗಳೂರಿಗೆ ಹೆಸರು ತಂದಿದ್ದಾರೆ.
ಅಂದಹಾಗೆ, ಈ ದುಬಾರಿ ಕಾರಿನ ಬೆಲೆ 7.6 ಕೋಟಿ ರೂ. ಆಗಿದ್ದು, ಭಾರತದಲ್ಲಿ ಖರೀದಿಯಾದ ಈ ಮಾಡೆಲಿನ ಎರಡನೇ ಕಾರು ಇದಾಗಿದೆ. ಮೊದಲ ಕಾರನ್ನು ಭೀಮಾ ಜುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ, ಮುಂಬೈ ಮೂಲದ ಗೋವಿಂದನ್ ಖರೀದಿಸಿದ್ದಾರೆ ಎಂದು ಗೂಗಲ್ ಮಾಹಿತಿ ನೀಡುತ್ತದೆ. ಅರ್ಜುನ್ ಮೊರಾಸ್ ಈ ಹಿಂದೆಯೂ ಅತಿ ದುಬಾರಿ ಲಕ್ಸುರಿ ಕಾರುಗಳನ್ನು ಖರೀದಿಸಿ ಗಮನ ಸೆಳೆದಿದ್ದರು. ಆಡಿ, ಬಿಎಂಡಬ್ಲ್ಯು, ಆಸ್ಟಿನ್ ಮಾದರಿಯ ಕಾರುಗಳನ್ನು ಮೊದಲ ಬಾರಿಗೆ ಮಂಗಳೂರಿಗೆ ತಂದಿದ್ದ ಹೆಗ್ಗಳಿಕೆ ಅರ್ಜುನ್ ಮೊರಾಸ್ ಅವರಿಗೆ ಸಲ್ಲುತ್ತದೆ.
2018ರಲ್ಲಿ ಆಸ್ಟನ್ ಮಾರ್ಟಿನ್ ವ್ಯಾಂಕ್ವಿಶ್ ಎನ್ನುವ ಹೆಸರಿನ ದುಬಾರಿ ಕಾರನ್ನು ಮೊರಾಸ್ ಖರೀದಿಸಿದ್ದರು. ಅದರ ಬೆಲೆ 7.18 ಕೋಟಿ ಆಗಿತ್ತು. ಆಸ್ಟನ್ ಮಾರ್ಟಿನ್ ಸರಣಿಗಳು ಇಂಗ್ಲೆಂಡ್ ನಲ್ಲಿ ತಯಾರಾಗುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದೆನಿಸಿದೆ. ದುಬಾರಿ ಮತ್ತು ಆಕರ್ಷಕ ಕಾರುಗಳನ್ನು ಕೊಳ್ಳುವ ಕ್ರೇಜ್ ಬೆಳೆಸಿಕೊಂಡಿರುವ ಅರ್ಜುನ್ ಮೊರಾಸ್, ಜಗತ್ತಿನ ಮುಂಚೂಣಿ ಕಾರುಗಳನ್ನು ತನ್ನದಾಗಿಸಿಕೊಳ್ಳುತ್ತಿರುವುದು ಮಂಗಳೂರಿನ ಹೆಸರನ್ನು ಜಗತ್ತಿನಲ್ಲಿ ದೊಡ್ಡ ಸ್ಥಾನಕ್ಕೇರಿಸಿದೆ. ಅಲ್ಲದೆ, ಆ ಕಾರುಗಳಿಗೆ ಮಂಗಳೂರಿನಲ್ಲೇ ರಿಜಿಸ್ಟರ್ ಮಾಡಿಸಿ ನಂಬರ್ ಹಾಕಿಸಿಕೊಳ್ಳುವುದು ಮೊರಾಸ್ ಹೆಗ್ಗಳಿಕೆ. ಇದೇ ಕಾರಣಕ್ಕೆ ದುಬಾರಿ ಕಾರುಗಳ ಕ್ರೇಜ್ ಮುಂಬೈ ಬಿಟ್ಟರೆ, ಸಣ್ಣ ಸಿಟಿಯಾದರೂ ಮಂಗಳೂರನ್ನು ಜಗತ್ತಿನೆತ್ತರಕ್ಕೆ ತಂದು ನಿಲ್ಲಿಸಿದೆ. ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಅತ್ಯಂತ ದುಬಾರಿ ಮತ್ತು ಕಾರಿನ ಕ್ರೇಜ್ ಇರುವ ಸಿಟಿಗಳಲ್ಲಿ ಮಂಗಳೂರಿಗೆ ಮೊದಲ ಸ್ಥಾನವನ್ನು ಸಮೀಕ್ಷೆಯೊಂದು ನೀಡಿತ್ತು.
Mangalore Entrepreneur Arjun Moraes is now the proud owner of an Aston Martin 707 DBX, the first in South India and the second in India. Arjun Moraes is the proud owner of the car, which was manufactured in the UK. In 2018, he was the proud owner of the Aston Martin Vanquish, which costs a cool Rs 7.18 crore. Arjun Moraes has a lot of interest in luxury cars, and he already owns several cars manufactured in different countries. He happens to be the first person from the city to buy Audi, BMW, and Aston cars. He makes it a point to register his cars in the city itself.
04-01-25 06:49 pm
Bangalore Correspondent
Gadag Car accident; ಹೈಸ್ಕೂಲ್ ವಿದ್ಯಾರ್ಥಿಗಳು ಚಲ...
04-01-25 01:28 pm
BJP MLC Dhananjaya Sarji: ಹೊಸ ವರ್ಷಕ್ಕೆ ಬಿಜೆಪಿ...
03-01-25 10:47 pm
ಮಂಗಳೂರು, ಶಿವಮೊಗ್ಗ ಸೇರಿ ಆರು ಸ್ಮಾರ್ಟ್ ಸಿಟಿ ಯೋಜ...
03-01-25 08:33 pm
ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಂದ ಹಣ ವಸೂಲಿ...
03-01-25 02:02 pm
04-01-25 06:01 pm
HK News Desk
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
03-01-25 10:14 pm
Mangalore Correspondent
Mangalore Kambala: ಕಂಬಳದಲ್ಲಿ ಅನಗತ್ಯ ವಿಳಂಬ ತಪ್...
03-01-25 05:40 pm
BJP, Pralhad Joshi, Mangalore: ರಾಹುಲ್ ಹೇಳಿದಂತ...
02-01-25 09:26 pm
Anil Lobo, MCC Bank, Robert Rosario, Mangalor...
02-01-25 03:16 pm
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
04-01-25 11:31 am
Mangalore Correspondent
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm
Mangalore crime, Kankandy Police: ಹಾಡಹಗಲೇ ಚೂರ...
02-01-25 10:12 pm