ಬ್ರೇಕಿಂಗ್ ನ್ಯೂಸ್
27-07-23 03:24 pm Mangalore Correspondent ಕರಾವಳಿ
ಮಂಗಳೂರು, ಜುಲೈ 27: ವಿಡಿಯೋ ಪ್ರಕರಣ ಮಕ್ಕಳಾಟಿಕೆ ವಿಷಯವೆಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಮುಸ್ಲಿಂ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡ್ತಿದ್ರೆ ಕಾಂಗ್ರೆಸ್ ನವರು ತುದಿ ಕಾಲಲ್ಲಿ ನಿಲ್ಲುತ್ತಿದ್ದರು. ಇಷ್ಟರ ಒಳಗೆ ಎಲ್ಲರ ಮನೆ ಹೊಕ್ಕುತ್ತಿದ್ದರು, ಅರೆಸ್ಟ್ ಮಾಡುತ್ತಿದ್ದರು. ಈಗ ಹಿಂದೂಗಳು ಎಂಬ ಕಾರಣಕ್ಕೆ ಪ್ರಕರಣ ಮುಚ್ಚಿಹಾಕಲು ನೋಡುತ್ತಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಕಿಡಿಕಾರಿದ್ದಾರೆ.
ಉಡುಪಿ ವಿಡಿಯೋ ಪ್ರಕರಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿದೆ. ಮೊಬೈಲ್ ನ್ನು ಫಾರೆನ್ಸಿಕ್ ಗೆ ಕಳಿಸಿ ತನಿಖೆ ಮಾಡುವ ಮೊದಲೇ ತರಾತುರಿಯಲ್ಲಿ ಯಾವುದೇ ಏನು ಸಾಕ್ಷಿಗಳು ಇಲ್ಲ ಎಂದಿದ್ದರು. ಈಗ ಅವರೇ ಎಫ್.ಐ.ಆರ್ ದಾಖಲಿಸಿದ್ದಾರೆ. ಮೊಬೈಲನ್ನು ಫಾರೆನ್ಸಿಕ್ ಕಳಿಸಿದ್ದಾರೆ. ನಾವು ಮಾಡಿದ್ದೇ ಸರಿ ಎಂದು ಸಾಧಿಸಲು ಹೊರಟರೆ ಕಷ್ಟವಿದೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಪ್ರಕರಣದಲ್ಲಿ ಪೊಲೀಸರ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಬೇಕು. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಮಾಡಿದ್ರೆ ಅದಕ್ಕೊಂದು ಅರ್ಥವಿದೆ. ಈ ಹಿಂದೆಯೂ ಇಂತಹದ್ದೇ ಕೆಲಸ ಮಾಡುತ್ತಿದ್ದರೇ ಎಂಬ ಬಗ್ಗೆ ತನಿಖೆ ಆಗಬೇಕಿದೆ.
ಕೆಲವು ವರ್ಷಗಳಿಂದ ಈ ರೀತಿಯ ಕೃತ್ಯ ನಡೆಯುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿದೆ. ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುವಂತದ್ದು ಸಹ ನಡೆದಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಹೀಗಾಗಿ ಈ ಘಟನೆಯನ್ನು ಕ್ಷುಲ್ಲಕ, ಹಾಸ್ಯಾಸ್ಪದ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ, ಈ ಮೂವರು ವಿದ್ಯಾರ್ಥಿನಿಯರು ಕೇರಳದವರಾಗಿದ್ದು ಅವರ ಹಿಂದೆ ಯಾರಿದ್ದಾರೆ ಅನ್ನುವ ಬಗ್ಗೆ ತನಿಖೆ ಆಗಬೇಕಿದೆ. ಇದರ ಹಿಂದಿರುವ ಕೈವಾಡ ಯಾರದ್ದು ಎಂಬ ಬಗ್ಗೆ ತನಿಖೆ ಮಾಡಬೇಕು.
ಜಾತಿ ಮತ ಬಿಟ್ಟು ತನಿಖೆ ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕು. ವಿಡಿಯೋ ರೆಕಾರ್ಡ್ ಮಾಡಿ ಸಿಕ್ಕಿ ಬೀಳದಿದ್ರೆ ಈ ವಿಡಿಯೋವನ್ನು ಏನು ಮಾಡುತ್ತಿದ್ದರು. ಸಾಕಷ್ಟು ಸಂಶಯ ಇರುವ ಕಾರಣ ಈ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಆದ್ರೆ ಕಾಂಗ್ರೆಸ್ ನವರು ಕಾಂಪಿಟೇಶನ್ ನಲ್ಲಿ ಟ್ವೀಟ್ ಹಾಕ್ತಿರೋದನ್ನು ನೋಡಿದರೆ, ಮುಚ್ಚಿ ಹಾಕುವ ಯತ್ನ ಕಾಣ್ತಿದೆ. ಯಾಕಂದ್ರೆ ಇವರಿಗೆ ಹಿಂದೂಗಳಂದ್ರೆ ತಾತ್ಸಾರ ಎಂಬ ಭಾವನೆ ಇದೆ. ಚುನಾವಣೆ ಬರುತ್ತೆ, ಹೋಗುತ್ತೆ ಆದ್ರೆ ನಾವು ಹಿಂದುತ್ವ ಪರವಾಗಿ ನಿಂತೇ ನಿಲ್ಲುತ್ತೇವೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
Udupi Camera in Toilet, Video is shot by Kerala students, probe should be conducted says MLA Bharath Shetty
22-05-25 11:09 pm
HK News Desk
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm