ಬ್ರೇಕಿಂಗ್ ನ್ಯೂಸ್
01-08-23 02:45 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 1: ಎರಡನೇ ಬಾರಿಗೆ ಸಿಎಂ ಆದಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಲು ಮಹಿಳಾ ನಾಯಕಿಯರು ಪೈಪೋಟಿ ನಡೆಸಿದ್ದು ಇಬ್ಬರು ಕಿತ್ತಾಡಿಕೊಂಡ ಘಟನೆ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ತನ್ನ ಬೆಂಬಲಿಗರ ಜೊತೆ ಜೈಕಾರ ಹಾಕುತ್ತಾ ಹೂಗುಚ್ಛ ನೀಡಲು ಮುಂದೆ ಬಂದಿದ್ದಾರೆ. ಈ ವೇಳೆ, ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಅಡ್ಡ ಬಂದಿದ್ದು ಶಾಲೆಟ್ ಹತ್ತಿರ ಹೋಗದಂತೆ ತಡೆದಿದ್ದಾರೆ. ಶಾಲೆಟ್ ಪಿಂಟೋ ಹೂವಿನ ಮಾಲೆ ಹಾಕಲು ಬಂದಾಗ ಕವಿತಾ ಸನಿಲ್ ದೂಡಿದ್ದು ಇಬ್ಬರ ಕಿತ್ತಾಟಕ್ಕೆ ಸಾಕ್ಷಿಯಾಯಿತು.
ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮಹಿಳಾ ನಾಯಕಿಯರು ಹೂಮಾಲೆ ಹಾಕಲು ಮುಂದೆ ಬಂದಿದ್ದರು. ಈ ವೇಳೆ, ಸಿದ್ದರಾಮಯ್ಯ ಕಾರಿಗೆ ಕವಿತಾ ಸನಿಲ್ ಅಡ್ಡ ಬಂದಿರುವುದು, ಕಾರು ಹೋದ ಬಳಿಕ ಕವಿತಾ ಮತ್ತು ಶಾಲೆಟ್ ಪಿಂಟೋ ಕಿತ್ತಾಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇಬ್ಬರು ನಾಯಕಿಯರ ಜಡೆ ಕಿತ್ತಾಟ ನೋಡಿದ ಕಾಂಗ್ರೆಸ್ ನಾಯಕರು ಮುಸಿ ಮುಸಿ ನಕ್ಕಿದ್ದಾರೆ.
ಸಿದ್ದರಾಮಯ್ಯ ವಿಮಾನ ನಿಲ್ದಾಣದ ಒಳಗಿರುವಾಗಲೇ ಶಾಲೆಟ್ ಪಿಂಟೋಗೆ ಒಳಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಹೊರಗಡೆ ಇದ್ದೇ ಆಚೀಚೆ ಅಡ್ಡಾಡುತ್ತಿದ್ದರು. ಆನಂತರ, ಸಿದ್ದರಾಮಯ್ಯ ಹೊರಬಂದು ಮಾಧ್ಯಮಕ್ಕೆ ಮಾತನಾಡಿದ ಸಂದರ್ಭದಲ್ಲಿಯೂ ಕವಿತಾ ಸನಿಲ್ ಇತರೇ ಕಾಂಗ್ರೆಸ್ ನಾಯಕರನ್ನು ಬದಿಗೊತ್ತಿ ಸಿದ್ದರಾಮಯ್ಯ ಹತ್ತಿರ ನಿಂತುಕೊಳ್ಳಲು ಯಶಸ್ವಿಯಾಗಿದ್ದರು. ಕೊನೆಗೆ, ಜೈಕಾರ ಕೂಗಿ ಹೂಮಾಲೆ ಹಾಕುವ ಸಂದರ್ಭದಲ್ಲಿಯೂ ಸಿದ್ದರಾಮಯ್ಯಗೆ ಕವಿತಾ ಸನಿಲ್ ತಡೆ ಹಾಕಿದ್ದು ಇತರೇ ನಾಯಕಿಯರನ್ನು ಸಿಟ್ಟಾಗಿಸಿತ್ತು.
CM siddaramaiah in Mangalore, Congress members Kavitha Sanil andnl Sharlet Pinto fight to give garlands and bouquet.
15-09-25 04:45 pm
Bangalore Correspondent
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm