ಬ್ರೇಕಿಂಗ್ ನ್ಯೂಸ್
16-08-23 10:46 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 16: ಮಗನ ಸಾವಿನಿಂದ ಮನನೊಂದು ಸಮುದ್ರಕ್ಕೆ ಹಾರಿ ಮೃತಪಟ್ಟ ಕಾಸರಗೋಡು ಜಿಲ್ಲೆಯ ಕುಂಬಳೆ ಬಂಬ್ರಾಣ ನಿವಾಸಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಸಾವಿಗೆ ಪತ್ನಿಯ ಅನೈತಿಕ ಸಂಬಂಧ ಪ್ರಕರಣವೇ ಕಾರಣ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಮೃತ ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ದೂರು ನೀಡಿರುವುದು ಮತ್ತು ಇವರ ಅಣ್ಣ ಸುಧಾಕರ ಉಳ್ಳಾಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಂಬಳೆಯ ಬಂಬ್ರಾಣ ನಿವಾಸಿಯಾಗಿದ್ದ ಲೋಕೇಶ್ ತನ್ನ ಪತ್ನಿ ಪ್ರಭಾವತಿ ಮತ್ತು ಆಕೆಯ ಪ್ರಿಯಕರ ಎನ್ನಲಾದ ಸಂದೀಪ್ ಆರಿಕ್ಕಾಡಿ ಎಂಬಾತನ ವಿರುದ್ಧ ಕಾಸರಗೋಡು ಎಸ್ಪಿ ಕಚೇರಿಗೆ ಆಗಸ್ಟ್ 11ರಂದು ದೂರು ನೀಡಿದ್ದಾರೆ. ತನ್ನ ಮಗ ರಾಜೇಶ್ ಸಾವಿಗೆ ಇವರ ಅಕ್ರಮ ಸಂಬಂಧ ಮತ್ತು ಅದರ ವಿಚಾರದಲ್ಲಿ ನಡೆದಿದ್ದ ಗಲಾಟೆಯೇ ಕಾರಣ. ತಾಯಿ ಜೊತೆಗೆ ಸಂದೀಪ್ ಅಕ್ರಮ ಸಂಬಂಧ ಹೊಂದಿರುವುದನ್ನು ರಾಜೇಶ್ ಆಕ್ಷೇಪಿಸಿದ್ದು, ಅದಕ್ಕೆ ಪ್ರತಿಯಾಗಿ ಸಂದೀಪ್ ಬೆದರಿಕೆ ಹಾಕಿದ್ದ. ಇದರಿಂದ ನೊಂದು ರಾಜೇಶ್ ಉಳ್ಳಾಲಕ್ಕೆ ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿದ್ದ. ಈ ಬಗ್ಗೆ ಪ್ರಭಾವತಿ ಮತ್ತು ಆಕೆಯ ತಂಗಿ ಬೇಬಿ ಹಾಗೂ ಪ್ರಿಯಕರ ಸಂದೀಪ್ ಆರಿಕ್ಕಾಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ನೀಡಿದ್ದ ದೂರಿನಲ್ಲಿ ಒತ್ತಾಯಿಸಿದ್ದರು.
ಜುಲೈ 10ರಂದು ಲೋಕೇಶ್(51) ಅವರ ಮಗ ರಾಜೇಶ್(26) ಉಳ್ಳಾಲ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಶವದ ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆ ಬಳಿಕ ಪ್ರಭಾವತಿ ಗಂಡನ ಮನೆ ತೊರೆದು ತನ್ನ ತಂಗಿಯ ಮನೆಯಲ್ಲಿ ಸೇರಿದ್ದರೆ, ಇತ್ತ ಲೋಕೇಶ್ ತನ್ನ ಸೋದರ ಸುಧಾಕರ್ ಅವರ ತೊಕ್ಕೊಟ್ಟಿನ ಮನೆಯಲ್ಲಿ ವಾಸ ಮಾಡಲಾರಂಭಿಸಿದ್ದರು. ತನ್ನ ಮಗನ ಸಾವಿನಿಂದ ತೀವ್ರ ನೊಂದುಕೊಂಡಿದ್ದ ಲೋಕೇಶ್, ತನ್ನ ಗೆಳೆಯರಿಗೆ ಪತ್ನಿಯ ಕಿರುಕುಳ, ಕೆಟ್ಟ ನಡತೆಯ ಬಗ್ಗೆ ಹೇಳಿಕೊಂಡಿದ್ದರು. ಮೊನ್ನೆ ಆಗಸ್ಟ್ 14ರಂದು ಇಷ್ಟೆಲ್ಲ ಆದಮೇಲೆ ಅಂತಹ ಪತ್ನಿಯೊಂದಿಗೆ ವಾಸ ಮಾಡಲು ಸಾಧ್ಯವಾಗದು. ಆಕೆಯ ಮುಖವನ್ನೂ ನೋಡುವುದಿಲ್ಲ. ನನ್ನ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಸಿಗಬಹುದು ಎಂದು ತನ್ನ ಗೆಳೆಯರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಫೋನನ್ನು ಸೋದರನ ತೊಕ್ಕೊಟ್ಟಿನ ಮನೆಯಲ್ಲಿಟ್ಟು ತೆರಳಿದ್ದರು. ವಾಯ್ಸ್ ಕೇಳಿದ ಗೆಳೆಯರು ಕೂಡಲೇ ಫೋನ್ ಮಾಡಿದ್ದು, ಫೋನನ್ನು ಮನೆಯಲ್ಲಿ ಬಿಟ್ಟು ಲೋಕೇಶ್ ತೆರಳಿರುವುದು ಗೊತ್ತಾಗಿತ್ತು.
ಇತ್ತ ಗೆಳೆಯರು ಮತ್ತು ಸೋದರ ಉಳ್ಳಾಲದಲ್ಲಿ ಹುಡುಕಾಡುತ್ತಿದ್ದಂತೆ, ಅದೇ ದಿನವೇ ಲೋಕೇಶ್ ಮೃತದೇಹ ಉಳ್ಳಾಲ ಸಮುದ್ರದಲ್ಲಿ ಪತ್ತೆಯಾಗಿತ್ತು. ಮೃತರ ಸೋದರ ಸುಧಾಕರ ಮತ್ತು ಲೋಕೇಶ್ ಅವರ ಇನ್ನೊಬ್ಬ ಮಗ ಶುಭಂ ತಂದೆಯದ್ದೇ ಶವ ಎಂದು ಗುರುತಿಸಿದ್ದಾರೆ. ಸುಧಾಕರ ಅವರು ಉಳ್ಳಾಲ ಠಾಣೆಗೆ ನೀಡಿರುವ ದೂರಿನಲ್ಲಿ ಪ್ರಭಾವತಿ, ಸಂದೀಪ್ ಆರಿಕ್ಕಾಡಿ, ಶುಭಂ, ಬೇಬಿ ಎಂಬವರ ಹೆಸರನ್ನು ಉಲ್ಲೇಖಿಸಿದ್ದು ಇವರ ಚಿತಾವಣೆಯಿಂದಲೇ ನನ್ನ ತಮ್ಮ ಲೋಕೇಶ್ ಸಾವಿಗೆ ಶರಣಾಗಿದ್ದಾರೆಂದು ತಿಳಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ತಿಂಗಳ ಹಿಂದೆ ಸಮುದ್ರಕ್ಕೆ ಹಾರಿ ಪುತ್ರ ಆತ್ಮಹತ್ಯೆ ; ಪುತ್ರ ಶೋಕದಲ್ಲಿದ್ದ ತಂದೆಯೂ ಸಮುದ್ರಕ್ಕೆ ಹಾರಿ ಆತ್ಮಹತ್ಯೆ !
Suicide case Kasargod Kumble, Body of man found at Ullal beach, Wife affair reason for suicide. Initially it was said that he committed suicide Because his son recently commited suicide but the case has got twist it is alleged that he died of Wife affair with somone else.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm