ಬ್ರೇಕಿಂಗ್ ನ್ಯೂಸ್
19-08-23 05:36 pm Mangalore Correspondent ಕರಾವಳಿ
ಉಳ್ಳಾಲ, ಆ.19: ತಲಪಾಡಿ ಅಲಂಕಾರಗುಡ್ಡೆಯಲ್ಲಿ ಸುಮಾರು 25 ನಾಯಿಗಳು ಮತ್ತು ಹಸುವೊಂದನ್ನ ವಿಷವಿಕ್ಕಿ ಕೊಂದಿರುವುದಲ್ಲದೆ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆಂದು ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ತಾನು ತಪ್ಪು ಮಾಡಿಲ್ಲ ಎಂದು ಯಾವುದೇ ದೈವಸ್ಥಾನಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಘಟನೆಯ ಆರೋಪಿಯೆಂದು ಹೇಳಲಾಗುತ್ತಿರುವ ಅಬ್ದುಲ್ ಖಾದರ್ ಮಕ್ಯಾರ್ ಹೇಳಿದ್ದಾರೆ.
ಅಲಂಕಾರ ಗುಡ್ಡೆಯಲ್ಲಿ ಆಹಾರದಲ್ಲಿ ನಿರಂತರ ವಿಷಪ್ರಾಷಣ ನಡೆಸಿ ಸುಮಾರು 25 ನಾಯಿಗಳನ್ನ ಕೊಲ್ಲಲಾಗಿತ್ತು. ಮೊನ್ನೆ ಆ.17 ರಂದು ಸ್ಥಳೀಯ ನಿವಾಸಿ ಸತ್ಯೇಂದ್ರ ಎಂಬವರು ಸಾಕುತ್ತಿದ್ದ 8 ತಿಂಗಳ ಹಸುವೊಂದು ವಿಷಾಹಾರ ಸೇವಿಸಿ ಸಾವನ್ನಪ್ಪಿತ್ತು. ಸ್ಥಳೀಯ ನಿವಾಸಿ ಖಾದರ್ ಎಂಬಾತನೇ ಇಂತಹ ಪೈಶಾಚಿಕ ಕೃತ್ಯಗೈದಿದ್ದಾನೆ ಎಂದು ಸತ್ಯೇಂದ್ರ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಇಂದು ಮಾಧ್ಯಮಗಳ ಮುಂದೆ ಬಂದ ಆರೋಪಿ ಖಾದರ್, ನನ್ನ ಮೇಲೆ ಸ್ಥಳೀಯ ಕೆಲವೇ ಮಂದಿ ಸುಳ್ಳು ಆರೋಪ ಹೊರಿಸಿದ್ದಾರೆ. ನಾನು 62 ವರುಷಗಳಿಂದ ಬಾಳಿದ ಪ್ರದೇಶದ ಅಕ್ಕ, ತಂಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಆರೋಪಿಸಿದವರು ಯಾರಿಗೆ ನಾನು ಕಿರುಕುಳ ನೀಡಿದ್ದೇನೆ ಎಂದು ಹೇಳಲಿ. ವಿದೇಶದಲ್ಲಿರುವ ನನ್ನ ಮಗನೂ ಇದರಿಂದ ಸಾಕಷ್ಟು ನೊಂದಿದ್ದು ನನ್ನ ಇಷ್ಟ ಮಿತ್ರರೂ ನನ್ನಲ್ಲಿ ಪ್ರಶ್ನಿಸುತ್ತಿದ್ದಾರೆಂದರು. 25 ನಾಯಿಗಳನ್ನ ಕೊಂದಿದ್ದೇನೆ ಅಂತ ಹೇಳುತ್ತಾರೆ, ಪಂಚಾಯತ್ ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.
ದನ ಮೇಯಿಸುವ ಮಹಿಳೆಯರ ಜೊತೆಗೆ ಖಾದರ್ ತಮ್ಮ ವಾಹನ ನಿಲ್ಲಿಸಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸತ್ತ ಹಸುವಿನ ಮಾಲಕಿ ಆರೋಪಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಖಾದರ್ ಮಹಿಳೆಯರು ಸಿಕ್ಕಾಗ ವಾಹನವನ್ನ ನಾನು ನಿಲ್ಲಿಸೋಲ್ಲ. ಸ್ಲೋ ಮಾಡ್ತೇನಷ್ಟೆ. ಮಹಿಳೆಯರ ಕೈಯಲ್ಲಿ ದನದ ಹಗ್ಗ ಇರುತ್ತೆ. ಹಗ್ಗ ವಾಹನಕ್ಕೆ ಸುತ್ತಿ ಕೆಳಗೆ ಬೀಳಬಾರದೆಂಬ ಕಾಳಜಿಯಿಂದ ಗಾಡಿಯನ್ನ ಸ್ಲೋ ಮಾಡ್ತೇನಷ್ಟೆ ಎಂದಾಗ ಖಾದರ್ ಹಿಂದೆ ನಿಂತಿದ್ದ ಬೆಂಬಲಿಗರು ಮುಸಿ, ಮುಸಿ ನಕ್ಕಿದ್ದು ಮಾತ್ರ ಖಾದರ್ ಅವರನ್ನೇ ಅಣಕ ಮಾಡಿದಂತಿತ್ತು.
Ullal 25 dogs killed of poisoning, Mulsim man says ready to promise in any temples of not killing dogs in Mangalore.
22-05-25 11:09 pm
HK News Desk
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm