ನಿರಂತರ ಮಳೆ: ಕರಾವಳಿಯಲ್ಲಿ ಅಪಾಯದ ಮಟ್ಟದಲ್ಲಿ ನದಿಗಳು

06-08-20 07:52 am       Mangalore Reporter   ಕರಾವಳಿ

ಕರಾವಳಿ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ನೇತ್ರಾವತಿ ನದಿಯು ಅಪಾಯದ ಮಟ್ಟ ತಲುಪುತ್ತಿದೆ.

ಮಂಗಳೂರು: ಕರಾವಳಿ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ನೇತ್ರಾವತಿ ನದಿಯು ಅಪಾಯದ ಮಟ್ಟ ತಲುಪುತ್ತಿದೆ.

ಇನ್ನು ತುಂಬೆ ಡ್ಯಾಂನಲ್ಲೂ ನೀರಿನ ಪ್ರಮಾಣ 6.40 ಮೀ. ಗೆ ಏರಿಕೆಯಾಗಿದ್ದು, 30 ಗೇಟ್‌ಗಳನ್ನು ಕೂಡಾ ತೆರೆಯಲಾಗಿದೆ.

ಗುಂಡ್ಯ ನದಿಯಲ್ಲಿ ಅಪಾಯದ ಮಟ್ಟ 5 ಮೀ. ಆಗಿದ್ದು ಪ್ರಸ್ತುತ ನೀರಿನ ಪ್ರಮಾಣ 4.7 ಮೀ. ಗೆ ಏರಿಕೆಯಾಗಿದೆ. ನೇತ್ರಾವತಿ ನದಿ ಬಂಟ್ವಾಳ ಭಾಗದಲ್ಲಿ 7.6 ಮೀ. ನೀರಿನ ಪ್ರಮಾಣವಿದೆ. ನೇತ್ರಾವತಿ ಉಪ್ಪಿನಂಗಡಿ ಭಾಗದಲ್ಲಿ 29.0 ಮೀ. ನೀರಿನ ಪ್ರಮಾಣವಿದ್ದು 31.5 ಮೀ. ಅಪಾಯದ ಮಟ್ಟವಾಗಿದೆ. ಇನ್ನು ಕಡಬದ ದಿಶಾ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ 4.7 ಮೀಟರ್‌ಗೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧರ್ಮಸ್ಥಳ ಸ್ನಾನಘಟ್ಟ ಮುಳುಗಡೆಯಾಗುವ ಭೀತಿಯೂ ಕೂಡಾ ಉಂಟಾಗಿದೆ. ಕುಮಾರಧಾರ ನದಿಯಲ್ಲೂ ನೀರಿನ ಮಟ್ಟ ಹೆಚ್ಚಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ.