ಬ್ರೇಕಿಂಗ್ ನ್ಯೂಸ್
26-08-23 08:00 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 26: ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ವತಿಯಿಂದ ನಗರದ ಬಿಜೈನಲ್ಲಿ ರೋಹನ್ ಸಿಟಿ ಹೆಸರಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದ್ದು, ಇದರ ಬುಕ್ಕಿಂಗ್ ಭರದಿಂದ ನಡೆದಿದೆ. ಇದೇ ವೇಳೆ ಸೆಪ್ಟಂಬರ್ 5ರ ಶಿಕ್ಷಕರ ದಿನದ ಅಂಗವಾಗಿ ಸಮಾಜದ ಆಯ್ದ ಸೇವಾ ನಿರತ ವ್ಯಕ್ತಿಗಳಿಗಾಗಿ ವಿಶೇಷ ಯೋಜನೆಯನ್ನು ಪ್ರಕಟಿಸಲಾಗಿದೆ.
ಶಿಕ್ಷಕರು, ಪೊಲೀಸರು, ಯೋಧರು ಮತ್ತು ಪತ್ರಕರ್ತರಿಗೆ ಫ್ಲ್ಯಾಟುಗಳ ಬೆಲೆಗಳ ಮೇಲೆ ಹತ್ತು ಶೇಕಡಾ ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಯೋಜನೆಯು ಸೆಪ್ಟಂಬರ್ 1ರಿಂದ 30ರ ವರೆಗೆ ಸೀಮಿತ ಅವಧಿಗೆ ಮಾತ್ರ ಇರಲಿದೆ. ಈಗಾಗಲೇ 70 ಶೇಕಡಾದಷ್ಟು ಬುಕ್ಕಿಂಗ್ ಆಗಿದ್ದು, 30 ಶೇಕಡಾ ಅಷ್ಟೇ ಉಳಿದಿದೆ. ಆಯ್ದ ವೃತ್ತಿ ನಿರತರಿಗೆ ವಸತಿಗಳ ಬೆಲೆಯಲ್ಲಿ ಹತ್ತು ಶೇಕಡಾ ರಿಯಾಯಿತಿ ನೀಡಲಾಗುವುದು ಎಂದು ರೋಹನ್ ಕಾರ್ಪೊರೇಶನ್ ಸಂಸ್ಥೆಯ ಮುಖ್ಯಸ್ಥ ರೋಹನ್ ಮೊಂತೇರೊ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.


ರೋಹನ್ ಸಿಟಿಯಲ್ಲಿ 6 ಲಕ್ಷ ಚದರಡಿ ವ್ಯಾಪ್ತಿಯಲ್ಲಿ ವಸತಿ ಪ್ರದೇಶ ಇರಲಿದ್ದು ಒಟ್ಟು 546 ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿದೆ. ಡ್ಯುಪ್ಲೆಕ್ಸ್ ಮಾದರಿಯ ಫ್ಲಾಟ್, 6 ಬಿಎಚ್ ಕೆ, 4 ಬಿಎಚ್ ಕೆ, 1405ರಿಂದ 1900 ಚದರಡಿಯ 3 ಬಿಎಚ್ ಕೆ, 1075ರಿಂದ 1135 ಚದರಡಿಯ 2 ಬಿಎಚ್ ಕೆ ಮತ್ತು 700ರಿಂದ 815 ಚದರಡಿಯ 1 ಬಿಎಚ್ ಕೆ ಫ್ಲ್ಯಾಟ್ಗಳಿವೆ. ವಸತಿ ಪ್ರದೇಶದ ಜೊತೆಗೆ 284 ಪ್ರತ್ಯೇಕ ವಾಣಿಜ್ಯ ಘಟಕಗಳಿದ್ದು, 2 ಲಕ್ಷ ಚದರಡಿ ವ್ಯಾಪ್ತಿಯಲ್ಲಿ ಮಳಿಗೆ ಇರಲಿದೆ. ಆಧುನಿಕ ರೀತಿಯ ಪಾರ್ಕಿಂಗ್ ವ್ಯವಸ್ಥೆ, ಉತ್ಕೃಷ್ಟ ಮಾದರಿಯ ವ್ಯವಸ್ಥೆಗಳು ಇರಲಿವೆ.
ರೋಹನ್ ಸಿಟಿ ವೈಶಿಷ್ಟ್ಯಗಳು ;
ರೋಹನ್ ಸಿಟಿ ಸಂಕೀರ್ಣದಲ್ಲಿ ಎರಡು ಹಂತಗಳಲ್ಲಿ 35 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಹೈಪರ್ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ, ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ವ್ಯವಸ್ಥೆ, ಘನ ತ್ಯಾಜ್ಯ ಸಂಸ್ಕರಣಾ ಘಟಕ, ಸೌರಶಕ್ತಿ ಸಂಗ್ರಹ ಘಟಕ, ಲೈಟಿಂಗ್ ಆಟೊಮೇಶನ್ ವ್ಯವಸ್ಥೆ ಇರಲಿದೆ.
ಅಂತಾರಾಷ್ಟ್ರೀಯ ಮಟ್ಟದ ಸಿಟಿ ಕ್ಲಬ್ ಇರಲಿದ್ದು ಸಂಪೂರ್ಣ ಹವಾನಿಯಂತ್ರಿತ ಫ್ಯಾಮಿಲಿ ರೆಸ್ಟೋರೆಂಟ್, ಕಾಫಿ ಶಾಪ್, ಒಳಾಂಗಣ ಕ್ರೀಡೆ, ಬಾಸ್ಕೆಟ್ ಬಾಲ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟ್, ಸುಸಜ್ಜಿತ ಜಿಮ್, ಸ್ಪಾ, ಯುನಿಸೆಕ್ಸ್ ಸೆಲೂನ್, ಆಯುರ್ವೇದಿಕ್ ವೆಲ್ ನೆಸ್ ಸೆಂಟರ್, 3ಡಿ ಥಿಯೇಟರ್, ಮಲ್ಟಿ ಪರ್ಪಸ್ ಹಾಲ್, ಸ್ವಿಮ್ಮಿಂಗ್ ಪೂಲ್, ಮೂರು ಎಕರೆ ವ್ಯಾಪ್ತಿಯ ಸಂಕೀರ್ಣದಲ್ಲಿ ಜಾಗಿಂಗ್ ಟ್ರ್ಯಾಕ್, ಸೀನಿಯರ್ ಸಿಟಿಜನ್ ಪಾರ್ಕ್, ಚಿಣ್ಣರ ಆಟದ ವಲಯ, ಸುಸಜ್ಜಿತ ಗ್ರಂಥಾಲಯ ಇರಲಿದೆ. ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಕಚೇರಿ ದೂರವಾಣಿ 9845490100, 9045607725, 9045607724, 9036392627 ಸಂಪರ್ಕ ಮಾಡಬಹುದು. ಸುದ್ದಿಗೋಷ್ಟಿಯಲ್ಲಿ ಡಿಯೋನ್ ಮೊಂತೇರೊ, ಶಮೀನಾ, ಲೆಸ್ಲೀ ಮೊಂತೇರೊ ಇದ್ದರು.
The construction of the grand 'Rohan City' Bejai, undertaken by Rohan Corporation, is progressing well. On September 5, on the occasion of Teachers' Day celebration, a special scheme has been introduced for individuals dedicated to societal service.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm