ಬ್ರೇಕಿಂಗ್ ನ್ಯೂಸ್
30-08-23 09:55 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 30: ಹಾಳೆ ತಟ್ಟೆ ಅಂದರೆ ನಮಗೆಲ್ಲ ಬರೀ ಬಳಸಿ ಎಸೆಯೋ ಮಾಮೂಲಿ ಪ್ಲೇಟ್ ಅಷ್ಟೇ.. ಆದರೆ ಇಲ್ಲೊಬ್ಬ ಅಮೆರಿಕ ಮೂಲದ ವ್ಯಕ್ತಿ ನಮ್ಮ ಅಡಿಕೆ ಮರದ ಉತ್ಪನ್ನ ಹಾಳೆ ತಟ್ಟೆಯನ್ನೇ ಅಮೆರಿಕದಲ್ಲಿ ದೊಡ್ಡ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಅಚ್ಚರಿ ಎನ್ನುವ ರೀತಿ ಅಮೆರಿಕದಲ್ಲಿ ಮಾರುಕಟ್ಟೆ ಸಾಧಿಸಿರುವ ಮೈಕಲ್ ಡೈವರ್ಟ್ ತನ್ನ ಸಾಧನೆಯನ್ನು ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಹಂಚಿಕೊಂಡಿದ್ದಾರೆ.
ಮೈಕಲ್ 2006ರಲ್ಲಿ ಮೊದಲ ಬಾರಿಗೆ ಕರಾವಳಿಯ ಹಾಳೆ ತಟ್ಟೆಗಳನ್ನು ನೋಡಿ ಆಕರ್ಷಣೆಗೆ ಒಳಗಾಗಿದ್ದರು. ಅಷ್ಟೇ ಅಲ್ಲ, ಈ ಹಾಳೆ ತಟ್ಟೆಯನ್ನು ನವೀನ ಮಾದರಿಯಲ್ಲಿ ರೂಪಿಸಿ, ಆಧುನಿಕ ಮಾರುಕಟ್ಟೆಗೆ ನುಗ್ಗಿಸುವ ಕೆಲಸಕ್ಕೆ ಇಳಿದಿದ್ದರು. ಹಾಳೆ ತಟ್ಟೆಗಳ ಬಗ್ಗೆ ಕರಾವಳಿಯ ಜನರೇ ಮಾರುಕಟ್ಟೆ ಸಾಧಿಸದೇ ಇದ್ದ 2006ರ ಕಾಲದಲ್ಲಿ ಮೊದಲ ಬಾರಿಗೆ ಶಿವಮೊಗ್ಗದ ಗಾಳಿಕೊಪ್ಪದಲ್ಲಿ ಫ್ಯಾಕ್ಟರಿ ಸ್ಥಾಪಿಸಿದ್ದರು. ಅಲ್ಲದೆ, ಹಾಳೆ ತಟ್ಟೆಗಳನ್ನು ಆಧುನಿಕ ರೀತಿಯಲ್ಲಿ ತಯಾರಿಸುತ್ತ ಇನ್ನೊಂದೆಡೆ ಅವುಗಳಿಗೆ ಅಮೆರಿಕದಲ್ಲಿ ಮಾರುಕಟ್ಟೆ ಸೃಷ್ಟಿಸುವ ಕೆಲಸ ಮಾಡಿದ್ದರು. ಆನಂತರ, ಅಡಿಕೆಯ ಹಾಳೆಗಳ ಸಂಗ್ರಹವೇ ಅವರಿಗೆ ದೊಡ್ಡ ಸವಾಲಾಗಿತ್ತು. ಅದರ ನಡುವೆಯೇ ಸ್ಥಳೀಯರನ್ನು ಒಟ್ಟುಗೂಡಿಸಿ ಉತ್ಪಾದನೆ ಜೊತೆಗೆ ಮಾರುಕಟ್ಟೆಯನ್ನು ವಿಸ್ತರಿಸಿದ್ದರು.
ಮೈಕಲ್ ಕೈಹಿಡಿದ ಸಾಫ್ಟವೇರ್ ಯುವಕರು
ಕೊರೊನಾ ಸಂದರ್ಭದಲ್ಲಿ ಊರಿಗೆ ಬಂದಿದ್ದ ಬೆಳ್ತಂಗಡಿ ಮೂಲದ ಮೂವರು ಯುವಕರು ಅಮೆರಿಕದ ಮೈಕಲ್ ಡಿವರ್ಟ್ ಸಾಧಿಸಿದ್ದ ಹಾಳೆತಟ್ಟೆಯ ಮಾರುಕಟ್ಟೆ ಬಗ್ಗೆ ತಿಳಿದು ಅವರೊಂದಿಗೆ ಕೈಜೋಡಿಸಿದ್ದರು. ಅತಿಶಯ್, ಅವಿನಾಶ್ ಮತ್ತು ರಾಘ್ನೇಶ್ ಎಂಬ ಮೂವರು ಯುವಕರು ಧರ್ಮಸ್ಥಳ ಬಳಿಯ ನಿಡ್ಲೆಯಲ್ಲಿ ಹಾಳೆತಟ್ಟೆ ಫ್ಯಾಕ್ಟರಿ ಸ್ಥಾಪಿಸಿದ್ದಾರೆ. ಅಗ್ರಿ ಲೀಫ್ ಹೆಸರಲ್ಲಿ ಕಂಪನಿ ಮಾಡಿಕೊಂಡಿರುವ ಈ ಯುವಕರು ಮೂರು ವರ್ಷಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಇದೀಗ ಮೈಕಲ್ ಜೊತೆ ಸೇರಿ ಅಮೆರಿಕದಲ್ಲಿ ಹಾಳೆತಟ್ಟೆ ಪೂರೈಸುವ ಮಾರುಕಟ್ಟೆ ಸಾಧಿಸಿದ್ದಾರೆ. ಅಮೆರಿಕ ಮತ್ತು ಯುಕೆಯಲ್ಲಿದ್ದ ಸಾಫ್ಟ್ ವೇರ್ ಕಂಪನಿಯ ಕೆಲಸ ಕೈಬಿಟ್ಟು ಇದನ್ನೇ ವೃತ್ತಿ ಮಾಡಿಕೊಂಡಿದ್ದಾರೆ.
ಸದ್ಯಕ್ಕೆ ಅಗ್ರಿ ಲೀಫ್ ಕಂಪನಿ ದಿನವೊಂದಕ್ಕೆ ಒಂದು ಲಕ್ಷದಷ್ಟು ಹಾಳೆ ತಟ್ಟೆಗಳನ್ನು ವಿವಿಧ ಮಾದರಿಗಳಲ್ಲಿ ರೂಪಿಸುವಷ್ಟು ಬೆಳೆದಿದೆ. ಆದರೆ ಹಾಳೆಗಳ ಕಚ್ಚಾವಸ್ತು ಸಾಕಷ್ಟು ಸಿಗುತ್ತಿಲ್ಲ. ಹೀಗಾಗಿ ಯಾವುದೇ ಕಡೆಯಿಂದ ಕಚ್ಚಾ ಹಾಳೆಗಳನ್ನು ಪೂರೈಸಿದರೆ ಅದಕ್ಕೆ ಸೂಕ್ತ ದರ ಕೊಟ್ಟು ಖರೀದಿಸುವುದಕ್ಕೆ ರೆಡಿ ಇದ್ದಾರೆ. ಮೈಕಲ್ ಡಿವರ್ಟ್, ಅಮೆರಿಕಕ್ಕೆ ಕಂಟೇನರ್ ಶಿಪ್ ಗಳಲ್ಲಿ ಬೃಹತ್ ಮಟ್ಟದಲ್ಲಿ ಹಾಳೆ ತಟ್ಟೆಗಳನ್ನು ಪೂರೈಸಲು ಬೇಡಿಕೆ ಇರಿಸಿದ್ದಾರೆ. ಆದರೆ ಅಷ್ಟು ಅಗಾಧ ಪ್ರಮಾಣದಲ್ಲಿ ಹಾಳೆ ತಟ್ಟೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ, ಅಗ್ರಿ ಲೀಫ್ ಕಂಪನಿಯ ಅವಿನಾಶ್.
ಅಂದಹಾಗೆ, ಪರಿಸರಕ್ಕೆ ಪೂರಕವಾಗಿರುವ ಈ ಹಾಳೆ ತಟ್ಟೆಗಳು ನಮ್ಮ ಕರ್ನಾಟಕದ ಕರಾವಳಿಯಲ್ಲಿ ಮಾತ್ರ ಸಿಗುವಂಥದ್ದು. ಉಳಿದಂತೆ, ಅಲ್ಪ ಪ್ರಮಾಣದಲ್ಲಿ ಭೂತಾನ್, ಬರ್ಮಾ ದೇಶದಲ್ಲಿ ಅಡಿಕೆ ಕೃಷಿ ಇದ್ದರೂ ನಮ್ಮಲ್ಲಿ ಸಿಗುವಷ್ಟು ಗುಣಮಟ್ಟದ ಹಾಳೆಗಳು ಸಿಗಲಾರವು. ಹಾಗಾಗಿ ನಮ್ಮ ದೇಸೀ ಚೌಕಟ್ಟಿನ ಹಾಳೆ ತಟ್ಟೆಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದ್ದಲ್ಲದೆ, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದಲ್ಲಿ ಸಿರಿವಂತರೂ ಬಳಸುವಂತಾಗಿರುವುದು ಅಡಿಕೆಗೆ ಸಿಕ್ಕ ಹೆಚ್ಚುಗಾರಿಕೆ.
Forgeigner manufactures areca plates in Mangalore, says highly demanded in abroad. Mr Michel from America shares his success story with media friends in Mangalore.
23-05-25 02:35 pm
Bangalore Correspondent
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
23-05-25 01:25 pm
HK News Desk
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm