ಬ್ರೇಕಿಂಗ್ ನ್ಯೂಸ್
09-09-23 10:53 pm Mangalore Correspondent ಕರಾವಳಿ
ಮಂಗಳೂರು, ಸೆ.9: ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದ ಯವತಿಯೊಬ್ಬಳನ್ನು ಕದ್ರಿ ಪೊಲೀಸರು ಠಾಣೆಯಲ್ಲಿ ಹಿಡಿದಿಡಲು ಹರಸಾಹಸ ಪಟ್ಟ ವಿಡಿಯೋ ವೈರಲ್ ಆಗಿದ್ದು ಪೊಲೀಸ್ ಕಮಿಷನರ್ ಈ ಬಗ್ಗೆ ಅರೆಬರೆ ಸ್ಪಷ್ಟನೆ ನೀಡಿದ್ದಾರೆ.
ಸೆ.1 ರಂದು ಬೆಳಗ್ಗೆ 6.45ಕ್ಕೆ ಪಂಪ್ವೆಲ್ ನಲ್ಲಿ ಮೆಡಿಕಲ್ ಒಂದಕ್ಕೆ ಯುವತಿ ಬಂದಿದ್ದು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಳು. ರೌಂಡ್ಸ್ ನಲ್ಲಿದ್ದ ಅಬಕಾರಿ ಇಲಾಖೆಯವರು ಆಕೆಯನ್ನು ಹಿಡಿದು ಆಸ್ಪತ್ರೆಗೆ ಒಯ್ಯಲು ಯತ್ನಿಸಿದಾಗ, ಅಲ್ಲಿಯೂ ಆಕೆ ದಾಳಿಗೆ ಮುಂದಾಗಿದ್ದಾಳೆ. ಇದರಿಂದ ಬೇಸತ್ತು ಯುವತಿಯನ್ನು ಕದ್ರಿ ಠಾಣೆಗೆ ತಂದಿದ್ದರು. ಆದರೆ ಯುವತಿಯನ್ನು ಅಲ್ಲಿಯೂ ಹಿಡಿದಿಡಲು ಮಹಿಳಾ ಸಿಬಂದಿ ಹರಸಾಹಸ ಪಟ್ಟಿದ್ದಾರೆ.

ಬಳಿಕ ಕಾಲಿಗೆ ಕೋಳ ತೊಡಿಸಿ ಕೈಕಾಲು ಕಟ್ಟಿ ಆಸ್ಪತ್ರೆಗೆ ಒಯ್ದಿದ್ದು ತಪಾಸಣೆ ಮಾಡಿದ್ದಾರೆ. ಡ್ರಗ್ಸ್ ವ್ಯಸನದಿಂದ ಆಕೆ ಈ ರೀತಿ ವರ್ತಿಸುತ್ತಿದ್ದಾಳೆಂಬ ಸಂಶಯದಿಂದ ಚೆಕ್ ಮಾಡಿದಾಗ, ನೆಗೆಟಿವ್ ಬಂದಿದೆ. ಪೋಷಕರ ಬಗ್ಗೆ ಕೇಳಿದಾಗಲೂ ಮಾಹಿತಿ ನೀಡುತ್ತಿರಲಿಲ್ಲ. ಒಮ್ಮೆ ಹಿಂದಿ, ಇನ್ನೊಮ್ಮೆ ಇಂಗ್ಲಿಷ್ ಮಾತಾಡುತ್ತಿದ್ದಳು. ಮಾನಸಿಕ ತಜ್ಞರಲ್ಲಿ ತೋರಿಸಬೇಕೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಕಡೆಗೆ ಪೊಲೀಸರು ಒಯ್ಯುತ್ತಿದ್ದಾಗ, ಆಕೆ ತನ್ನ ಮನೆ ಇಲ್ಲೇ ಇದೆಯೆಂದು ಹೇಳಿದ್ದಾಳೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ, ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಆಕೆಗೆ ಮಾನಸಿಕ ಸಮಸ್ಯೆಯಂತೆ. ಹಾಗಾಗಿ ಮನೆಯಲ್ಲೇ ಇಟ್ಟು ಚಿಕಿತ್ಸೆ ನೀಡುತ್ತಿದ್ದರಂತೆ. ಆದರೆ, ಈ ಕುರಿತು ಸರಿಯಾದ ಮಾಹಿತಿ ಪೊಲೀಸರಲ್ಲಿ ಇಲ್ಲ. ಡ್ರಗ್ಸ್ ವ್ಯಸನಕ್ಕೆ ಬಲಿಯಾದವರು ಡ್ರಗ್ ಸಿಗದೇ ಇದ್ದಾಗ ಈ ರೀತಿ ವ್ಯಗ್ರವಾಗಿ ವರ್ತಿಸುತ್ತಾರೆ. ಯುವತಿಗೆ ಹಾಗೆ ಆಗಿರಬಹುದೇ ಎಂದು ಪೊಲೀಸರಲ್ಲಿ ಕೇಳಿದರೆ, ಇಲ್ಲ ಎನ್ನುತ್ತಾರೆ. ಆಕೆಯ ಸಮಸ್ಯೆ ಏನು ? ಯಾಕಾಗಿ ಅವಳು ಒಬ್ಬಂಟಿಯಾಗಿ ಅಂದು ಬೆಳಗ್ಗೆ ಪಂಪ್ವೆಲ್ ಬಂದಿದ್ದಳು. ಚಿಕಿತ್ಸೆಯಲ್ಲಿದ್ದರೆ, ಬೆಳ್ಳಂಬೆಳಗ್ಗೆ ಮೆಡಿಕಲ್ ಬಂದಿದ್ದು ಹೇಗೆ.. ವಿದ್ಯಾರ್ಥಿನಿಯೇ ಎಂದು ಕೇಳಿದರೆ, ಅದಕ್ಕೂ ಪೊಲೀಸರಲ್ಲಿ ಮಾಹಿತಿಯಿಲ್ಲ.
Mangalore Girl taken into custody by Kadri women Police station thinking as Drug addict, video goes viral. Later police have came to know that she was mentally challenged girl and later was sent to home.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am