ಬ್ರೇಕಿಂಗ್ ನ್ಯೂಸ್
11-09-23 09:53 pm Mangalore Correspondent ಕರಾವಳಿ
ಮಂಗಳೂರು, ಸೆ.11: ಸಿಎಂ ಸಿದ್ದರಾಮಯ್ಯ ಬಗ್ಗೆ ಕಟು ವಾಗ್ದಾಳಿ ನಡೆಸಿರುವ ಬಿ.ಕೆ.ಹರಿಪ್ರಸಾದ್ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೌಂಟರ್ ಹೇಳಿಕೆ ನೀಡಿದ್ದಾರೆ. ಹರಿಪ್ರಸಾದ್ ಯಾರ ಬಗ್ಗೆ ಟೀಕೆ ಮಾಡ್ತಾರೆ, ಯಾಕೆ ಮಾಡ್ತಾರೆ ಅರ್ಥವಾಗ್ತಿಲ್ಲ. ಈಗಾಗಲೇ ಹೈಕಮಾಂಡ್ ಅವರಿಗೆ ಏನೂ ಮಾತನಾಡಬೇಡಿ ಅಂತ ಹೇಳಿದೆ. ಹಿರಿಯರಾಗಿ ಅವರು ಹಾಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಅವರಲ್ಲಿರುವ ಅಸಮಾಧಾನ ಯಾಕೆ ಗೊತ್ತಿಲ್ಲ, ಆದರೆ ಪ್ರಮುಖ ರಾಜಕಾರಣಿಯೊಬ್ಬರು ಈ ರೀತಿ ಮಾತನಾಡಬಾರದು. ನಾವೆಲ್ಲರೂ ಪಕ್ಷದಲ್ಲಿದ್ದೇವೆ, ಒಮ್ಮೆ ಸ್ಥಾನ ಸಿಗುತ್ತದೆ ಮತ್ತು ಹೋಗುತ್ತದೆ. ಪಕ್ಷದಲ್ಲಿ ಅಸಮಾಧಾನ ಇದೆಯೆಂದು ಸಾರ್ವಜನಿಕ ವೇದಿಕೆಯಲ್ಲಿ ಆ ರೀತಿ ಮಾತನಾಡುವುದು ಸರಿಯಲ್ಲ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ, ಅವರಿಗೇ ಡ್ಯಾಮೇಜ್ ಆಗ್ತಿದೆ ಎಂದರು. ಈಡಿಗ- ಬಿಲ್ಲವರಿಗೆ ಅನ್ಯಾಯವಾಗಿದೆ ಅಂತಾರಲ್ಲಾ ಎಂಬ ಪ್ರಶ್ನೆಗೆ, ನಮ್ಮ ಪಕ್ಷ ಯಾರಿಗೂ ಭೇದ ಭಾವ ಮಾಡಿಲ್ಲ, ಅಂಥದ್ದೂ ಮಾಡಿಯೂ ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ವಿಚಾರದಲ್ಲಿ ವಿವಾದ ಉಂಟಾಗಿರುವ ಬಗ್ಗೆ ಕೇಳಿದ್ದಕ್ಕೆ, ಮಂಗಳೂರು ವಿವಿ ಬಿ ಗ್ರೇಡ್ ಗೆ ಹೋಗಿದೆ, ಅದರ ಗುಣಮಟ್ಟವನ್ನು ಹೆಚ್ಚಿಸಲು ಯೋಚನೆ ಮಾಡಬೇಕಿದೆ. ಎ ಗ್ರೇಡ್ ಮಾಡುವ ಬಗ್ಗೆ ನಾವು ಮೊದಲು ಯೋಚನೆ ಮಾಡಬೇಕು. ಅಲ್ಲಿನ ಬೇರೆಲ್ಲ ವಿಚಾರಗಳಿಗೆ ಒತ್ತು ಕೊಡಬೇಕಿಲ್ಲ. ವಿವಿ ಅನ್ನುವುದು ಸ್ವಾಯತ್ತ ಸಂಸ್ಥೆ, ಅದರಲ್ಲಿ ಹೊರಗಿನ ಯಾರೂ ಹಸ್ತಕ್ಷೇಪ ಮಾಡೋದು ಸರಿಯಲ್ಲ. ಹೊರಗಿನವರು ಏನು ಹೇಳ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದರ ವಿಸಿ ಹಾಗೂ ರಾಜ್ಯಪಾಲರು ಅಲ್ಲಿ ಏನಾಗಬೇಕೆಂದು ತೀರ್ಮಾನ ಮಾಡ್ತಾರೆ.
ಪ್ರಭಾಕರ ಭಟ್ ಏನ್ ಹೇಳ್ತಾರೆ ಅನ್ನೋದು ಮುಖ್ಯ ಅಲ್ಲ !
ಪ್ರಭಾಕರ ಭಟ್ ಏನ್ ಮಾತನಾಡ್ತಾರೆ ಅನ್ನೋದು ನಮಗೆ ಸಂಬಂಧಿಸಿದ್ದಲ್ಲ. ಅವರೇನು ಹೇಳ್ತಾರೋ ಆ ಬಗ್ಗೆ ನಾವೇನು ಹೇಳಬೇಕಾಗಿಲ್ಲ. ವಿಶ್ವವಿದ್ಯಾನಿಲಯ ಚೆನ್ನಾಗಿ ಅಭಿವೃದ್ಧಿಯಾಗಬೇಕು, ಅದರ ಬಗ್ಗೆ ಚರ್ಚೆಯಾಗಲಿ. ಪ್ರಭಾಕರ ಭಟ್ ಏನ್ ಹೇಳ್ತಾರೆ ಅನ್ನೋದು ಮುಖ್ಯ ಅಲ್ಲ. ವಿವಿಯ ಅನವಶ್ಯಕ ವಿಚಾರಕ್ಕೆ ಹೊರಗಿನವರು ಯಾಕೆ ಕೈ ಹಾಕಬೇಕು. ನಾವು ಇದರಲ್ಲಿ ಹಸ್ತಕ್ಷೇಪ ಮಾಡಲ್ಲ, ಅದಕ್ಕೆ ಕುಲಪತಿ ಇದಾರೆ.
ಅಲ್ಲಿ 40 ವರ್ಷಗಳಿಂದ ಗಣೇಶೋತ್ಸವ ಆಚರಿಸ್ತಾ ಇದಾರೆ. ಈಗ ಯಾಕೆ ವಿವಾದ ಮಾಡ್ತಾ ಇದಾರೆ ಅಂತ ಅರ್ಥ ಆಗ್ತಿಲ್ಲ. ವಿವಿಯ ಹಣ ಸಾರ್ವಜನಿಕರ ಹಣ, ಅದು ಶಿಕ್ಷಣಕ್ಕೆ ಬಳಕೆ ಆಗಬೇಕು. ಅಲ್ಲಿ ಕೆಲವರಿಗೆ ಸಂಬಳ, ಪೆನ್ಶನ್ ಕೊಟ್ಟಿಲ್ಲ, ಅದು ಮೊದಲು ಸರಿ ಆಗಲಿ. ಗಣೇಶನ ಹಬ್ಬದ ಆಚರಣೆ ಮಾಡೋದು ವಿವಿಯ ವಿವೇಚನೆಗೆ ಬಿಟ್ಟ ವಿಚಾರ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ತೀರ್ಮಾನ ಮಾಡ್ತಾರೆ. ಅದರ ಬಗ್ಗೆ ಗೊಂದಲ ನಿರ್ಮಾಣ ಮಾಡೋದು ಸರಿಯಲ್ಲ. ಶಾಂತಿ ಸಾಮರಸ್ಯ ಮುಖ್ಯ, ಚುನಾವಣೆ ಹತ್ತಿರ ಬರುವಾಗ ಅಶಾಂತಿ ಸೃಷ್ಟಿಸೋದು ಸರಿಯಲ್ಲ. ಇದನ್ನೆಲ್ಲ ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸ್ತಾರೆ ಎಂದು ಭಾವಿಸುತ್ತೇನೆ ಎಂದರು ದಿನೇಶ್ ಗುಂಡೂರಾವ್.
Minister for Health and Family Welfare and DK District-in-Charge Minister Dinesh Gundu Rao expressed his disapproval of MLC B K Hariprasad's recent statement. Rao emphasized that Hariprasad, a seasoned politician, should not have made a public statement that individuals wearing a Hublot watch and khaki shorts underneath their dhoti are not true socialists. He pointed out that this statement has ultimately harmed Hariprasad's own reputation.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm