ಬ್ರೇಕಿಂಗ್ ನ್ಯೂಸ್
16-09-23 12:17 pm Mangalore Correspondent ಕರಾವಳಿ
ಮಂಗಳೂರು, ಸೆ.16: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ಸ್ನಾತಕೋತ್ತರ ತರಗತಿಗಳಿಗೆ ಆಯಾ ಕ್ಷೇತ್ರಗಳ ಸಾಧಕರು, ತಜ್ಞರು ಪಾಠ ಮಾಡಲಿದ್ದಾರೆ. ಹೀಗೊಂದು ಬದಲಾವಣೆಗೆ ವಿ.ವಿ.ಯ ಆಡಳಿತ ಮುನ್ನುಡಿ ಬರೆದಿದೆ. ಉನ್ನತ ಶಿಕ್ಷಣದಲ್ಲಿ ಪುಸ್ತಕದ ಪಾಠ ಒಂದೇ ಆಧಾರವಾಗಬಾರದು; ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಜ್ಞರ ಅನುಭವ ಪಾಠವೂ ವಿದ್ಯಾರ್ಥಿಗಳಿಗೆ ಲಭಿಸಲಿ ಎಂಬ ಉದ್ದೇಶ ಇಟ್ಟುಕೊಂಡು ಹೊಸ ಪರಿಕಲ್ಪನೆ ಜಾರಿಗೆ ತರಲಾಗಿದೆ.
ಮೊದಲಿಗೆ ಸ್ನಾತ ಕೋತ್ತರ ವಿಭಾಗದಲ್ಲಿ ಪರಿಚಯಿಸುತ್ತಿದ್ದು, ಮುಂದೆ ಪದವಿಯಲ್ಲೂ ಜಾರಿಗೊಳಿಸುತ್ತೇವೆ. ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿಯೂ ಅಳವಡಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ “ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಎಂದು ಕರೆಯಲಾಗುತ್ತದೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ.ಜಯರಾಜ ಅಮೀನ್ ತಿಳಿಸಿದ್ದಾರೆ.
ಇಂತಹ ಬೋಧಕ ವಿಷಯ ತಜ್ಞರಿಗೆ ಮಂಗಳೂರು ವಿ.ವಿ. ಅಥವಾ ಇತರ ಮೂಲದಿಂದ ಸಂಭಾವನೆ ನೀಡಲು ಅವಕಾಶವಿದೆ. ಜತೆಗೆ ಕೈಗಾರಿಕೆ ಸಹಿತ ವಿವಿಧ ಕ್ಷೇತ್ರದ ಸಾಧಕರು ವಿದ್ಯಾರ್ಥಿಗಳಿಗೆ ಸ್ವಂತ ಆಸಕ್ತಿಯಿಂದಲೇ ಪ್ರಾಯೋಗಿಕ ಮಾಹಿತಿ ನೀಡಬಹುದು. ಸೀಮಿತ ಅವಧಿಯ ಸೇವೆ ಇದಾಗಿದ್ದು ವಾರದಲ್ಲಿ ಒಂದು ಬಾರಿ ವಿಶೇಷ ತರಗತಿ ತೆಗೆದುಕೊಳ್ಳಲಿದ್ದಾರೆ.
ಎಂಜಿನಿಯರ್, ವಿಜ್ಞಾನಿ, ತಂತ್ರಜ್ಞ, ಉದ್ಯಮಿ, ಆಡಳಿತಾತ್ಮಕ ನಿರ್ವಹಣೆ, ಲೆಕ್ಕ ಪರಿಶೋಧಕರು, ವಾಣಿಜ್ಯ, ಸಮಾಜ ವಿಜ್ಞಾನ, ಪತ್ರಿಕೋದ್ಯಮಿ, ಸಾಹಿತಿ, ಕಲೆ, ನಾಗರಿಕ ಸೇವೆ, ಸೈನಿಕರು, ವಕೀಲರು ಹೀಗೆ ವಿವಿಧ ಕ್ಷೇತ್ರದ ಅನುಭವಿಗಳಿಂದ ಬೋಧನೆಗೆ ಅವಕಾಶವಿದೆ. ಇದರಿಂದ ವಿದ್ಯಾರ್ಥಿಗಳು ಪುಸ್ತಕದಿಂದ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಆ ಕ್ಷೇತ್ರದ ಸಾಧಕರ ಅನುಭವಗಳನ್ನು ಕೇಳಿ ಹೊಸ ತಿಳಿವಳಿಕೆ ಪಡೆಯಲಿದ್ದಾರೆ.
ಕ್ಷೇತ್ರಗಳ ಸಾಧಕರು ವೃತ್ತಿಪರ ಬೋಧಕರಲ್ಲದಿದ್ದರೂ, ಪಿಎಚ್‌ಡಿ ಇತ್ಯಾದಿ ಪದವಿ ಇಲ್ಲದಿದ್ದರೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನುಭವ ಹೊಂದಿರುತ್ತಾರೆ. ಅಂಥವರನ್ನು ಮಂಗಳೂರು ವಿ.ವಿ.ಯೇ ಆಯ್ಕೆ ಮಾಡಿ ವಿದ್ಯಾರ್ಥಿಗಳಿಗೆ ಅವರ ಅನುಭವ ಕಥನವನ್ನು ತಿಳಿಸುವುದಕ್ಕಾಗಿ “ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಎನ್ನುವ ಹೆಸರಲ್ಲಿ ಹೊಸ ಪರಿಕಲ್ಪನೆ ಜಾರಿಗೆ ತಂದಿದೆ.
Mangalore University now to have Professors of Practice. A Professor of Practice is an expert or a professional from the industry who will teach the students based on his or her expertise.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm