ಬ್ರೇಕಿಂಗ್ ನ್ಯೂಸ್
29-09-23 05:01 pm Mangalore Correspondent ಕರಾವಳಿ
ಪುತ್ತೂರು, ಸೆ.29: ಕಾಂಗ್ರೆಸ್ ಮುಖಂಡ ಕುದ್ಕಾಡಿ ಗುರುಪ್ರಸಾದ್ ರೈ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಆರು ಮಂದಿಯನ್ನು ಬಂಧಿಸಿದ್ದಾರೆ. ಘಟನೆ ನಡೆಯೋದಕ್ಕೂ ಕೆಲವು ದಿನಗಳ ಹಿಂದೆ ಸಂಬಂಧಿಕರನ್ನು ಕರೆತಂದಿದ್ದ ಕಾರು ಚಾಲಕನೇ ಕೃತ್ಯದ ಸೂತ್ರಧಾರಿ ಎನ್ನುವ ಮಾಹಿತಿ ಲಭಿಸಿದೆ.
ಸೆ.7ರಂದು ತಡರಾತ್ರಿಯಲ್ಲಿ ಪಡುವನ್ನೂರು ಗ್ರಾಮದ ಕುದ್ಕಾಡಿಯ ಮನೆಗೆ ನುಗ್ಗಿದ್ದ ದರೋಡೆಕೋರರು ಮನೆಯಲ್ಲಿದ್ದ ಗುರುಪ್ರಸಾದ್ ರೈ ಮತ್ತು ಅವರ ತಾಯಿಯನ್ನು ಕಟ್ಟಿ ಹಾಕಿ, ತಲವಾರು ತೋರಿಸಿ ಬೆದರಿಸಿ ಕಪಾಟಿನಲ್ಲಿರಿಸಿದ್ದ ನಾಲ್ಕು ಚಿನ್ನದ ಬಳೆ, 30 ಸಾವಿರ ನಗದು ಮತ್ತು ತಾಯಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದರು. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ತನಿಖೆಯಲ್ಲಿ ಕೇರಳ ಕಡೆಯಿಂದ ಬಂದಿದ್ದವರು ಕೃತ್ಯ ಎಸಗಿದ್ದರು ಎಂದು ತಿಳಿದುಬಂದಿತ್ತು. ಇದೀಗ ಪ್ರಕರಣದ ಸೂತ್ರಧಾರಿ ವಿಟ್ಲ ಪೆರುವಾಯಿ ನಿವಾಸಿ, ಕಾರು ಚಾಲಕ ಸುಧೀರ್ ಮಣಿಯಾಣಿ, ಇಚ್ಲಂಗೋಡು ಗ್ರಾಮದ ರವಿ, ಪೈವಳಿಕೆ ಸಮೀಪದ ಅಟ್ಟೆಗೋಳಿ ನಿವಾಸಿ ಕಿರಣ್, ಸೀತಾಂಗೋಳಿ ಬಳಿಯ ಬಾಡೂರು ನಿವಾಸಿ ವಸಂತ್, ಫೈಜಲ್ ಮತ್ತು ಕಾಸರಗೋಡು ಎಡನಾಡು ಗ್ರಾಮದ ಅಬ್ದುಲ್ ನಿಸಾರ್ ಆರೋಪಿಗಳೆಂದು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲ ಕ್ರಿಮಿನಲ್ ಹಿನ್ನೆಲೆಯವರು ಎಂಬ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ.
ಈ ಹಿಂದೆ ಕುದ್ಕಾಡಿಯ ಮನೆಯಲ್ಲಿ ನಡೆದ ಕಾರ್ಯಕ್ರಮ ಒಂದಕ್ಕೆ ಕಾಸರಗೋಡು ಭಾಗದ ಸಂಬಂಧಿಕರು ಕಾರಿನಲ್ಲಿ ಆಗಮಿಸಿದ್ದರು. ಕಾರು ಚಾಲಕನಾಗಿ ಸುಧೀರ್ ಮಣಿಯಾಣಿ ಆಗಮಿಸಿದ್ದು ಆ ಸಂದರ್ಭದಲ್ಲಿ ಕುದ್ಕಾಡಿಯ ಮನೆ ಒಬ್ಬಂಟಿಯಾಗಿರುವುದು ಮತ್ತು ಮನೆಯಲ್ಲಿ ಯಾರೂ ಹೆಚ್ಚು ಜನ ಇಲ್ಲದಿರುವುದನ್ನು ಗಮನಿಸಿದ್ದ. ಗುರುಪ್ರಸಾದ್ ರೈ ಹೆಚ್ಚಾಗಿ ಒಬ್ಬರೇ ಇರುತ್ತಿದ್ದರು. ಕೆಲವೊಮ್ಮೆ ಕೂಲಿ ಕೆಲಸಗಾರರು ಉಳಿದುಕೊಳ್ಳುತ್ತಿದ್ದರು.
ಕೃತ್ಯ ನಡೆಯುವ ಎರಡು ದಿನಗಳ ಹಿಂದೆ ತಾಯಿ ಕಸ್ತೂರಿ ರೈ ಮನೆಗೆ ಬಂದಿದ್ದರು. ಅಂದು ನಡುರಾತ್ರಿ 12 ಗಂಟೆ ವೇಳೆಗೆ ಹೊಕ್ಕಿದ್ದ ಆಗಂತುಕರು 4 ಗಂಟೆಯ ವರೆಗೂ ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಗುಂಡಿಯಲ್ಲಿರುವ ಮನೆಗೆ ಒಂದೇ ರಸ್ತೆ ಇರುವುದರಿಂದ ಬಂದವರು ತಮ್ಮ ವಾಹನವನ್ನೂ ಮೇಲೆಯೇ ನಿಲ್ಲಿಸಿ ನಡೆದುಕೊಂಡೇ ಬಂದಿದ್ದರು. ಮುಖಕ್ಕೆ ಮುಸುಕು ಹಾಕ್ಕೊಂಡಿದ್ದರು. ಕೃತ್ಯದ ಬಳಿಕ ಗುರುಪ್ರಸಾದ್ ಅವರ ಮೊಬೈಲನ್ನು ನೀರಿಗೆ ಹಾಕಿ ತೆರಳಿದ್ದರು. ಸುಳಿವು ಆಧರಿಸಿ ಪೊಲೀಸರು ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.
Police arrested six people in connection with robbery of a house at Kudkadi Thotadamoole of Paduvannur village in the night on September 7 in which the house members were tied, cash and golden ornaments were looted. The arrested accused are identified as Sudhir Peruvayi, and residents of Kasargod district in Kerala Pacchambala Ravi, Kiran, Vasanta, Fasal and Nisar. All the six have criminal background.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm