ಬ್ರೇಕಿಂಗ್ ನ್ಯೂಸ್
02-10-23 10:38 pm Mangalore Correspondent ಕರಾವಳಿ
ಮಂಗಳೂರು, ಅ.2: ಶಿವಮೊಗ್ಗದಲ್ಲಿ ಈದ್ ಮಿಲಾದ್ ಹೆಸರಲ್ಲಿ ಗಲಾಟೆ ನಡೆಸಿದ್ದರ ಹಿಂದೆ ನಿಗೂಢ ಸಂಚು ಅಡಗಿತ್ತು ಅನ್ನುವ ಆರೋಪ ಕೇಳಿಬರುತ್ತಿದ್ದಂತೆಯೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಮಂಗಳೂರಿನ ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿಯೂ ಅದೇ ರೀತಿ ವರ್ತಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ. ಸೆ.28ರಂದು ಈದ್ ಮಿಲಾದ್ ಹೆಸರಲ್ಲಿ ನಡೆದ ಮೆರವಣಿಗೆಯಲ್ಲಿ ಯುವಕರು ಪ್ರಚೋದನಕಾರಿ ವರ್ತಿಸಿದ್ದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈದ್ ಮಿಲಾದ್ ವಾಹನ ಜಾಥಾ ನೆಪದಲ್ಲಿ ಉಳ್ಳಾಲದಲ್ಲಿ ಜಾಥಾ ನಡೆಸಿದ್ದ ಮುಸ್ಲಿಂ ಯುವಕರು ನಿಷೇಧಿತ ಸೈಲೆನ್ಸರ್ ಮತ್ತು ಹಾರ್ನ್ ಗಳನ್ನ ಬಳಸಿ ಇಡೀ ರಸ್ತೆಯನ್ನು ಬಂದ್ ಮಾಡಿದ್ದರು. ಅಲ್ಲದೆ, ಉಳ್ಳಾಲದ ಅಬ್ಬಕ್ಕ ರಾಣಿಯ ಸರ್ಕಲ್ ಮೇಲೇರಿ ಹಸಿರು ಬಾವುಟ ಹಾರಿಸುತ್ತ ಅತಿರೇಕದಿಂದ ವರ್ತಿಸಿದ್ದರು. ಪೊಲೀಸರ ಎದುರಲ್ಲೇ ನಡೆದಿದ್ದ ಆ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ, ಅಂದಿನ ವಿಡಿಯೋ ವೈರಲ್ ಆಗಿತ್ತು.
ಎಂದಿನಂತೆ ಈ ಬಾರಿಯೂ ಈದ್ ಮಿಲಾದ್ ಹಬ್ಬವನ್ನ ಉಳ್ಳಾಲ ದರ್ಗಾದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಬೆಳಗ್ಗಿನ ಹೊತ್ತಿಗೆ ಕೋಟೆಪುರದಿಂದ ಉಳ್ಳಾಲ ದರ್ಗಾದ ವರೆಗೆ ಪ್ರತೀ ವರ್ಷದಂತೆ ಬೃಹತ್ ವಾಹನ ಜಾಥಾ ಶಿಸ್ತು, ಸಂಯಮದಿಂದ ಸಾಗಿ ಬಂದಿತ್ತು. ಆದರೆ ಮದ್ಯಾಹ್ನದ ವೇಳೆ ಕುತ್ತಾರು, ದೇರಳಕಟ್ಟೆ, ಕೋಟೆಕಾರು, ಮಡ್ಯಾರಿನಿಂದ ಕಾರು, ದ್ವಿಚಕ್ರ ವಾಹನಗಳಲ್ಲಿ ಗುಂಪಾಗಿ ಬಂದಿದ್ದ ಯುವಕರು ಅತಿರೇಕದಿಂದ ವರ್ತಿಸಿದ್ದರು. ಸಾರ್ವಜನಿಕರಿಗೆ ಕಿರಿ, ಕಿರಿ ಉಂಟು ಮಾಡಿದ್ದರು. ಇದರಿಂದ ರಸ್ತೆ ಸಂಚಾರದಲ್ಲೂ ಎಡವಟ್ಟು ಆಗಿತ್ತು.
ಈ ಬಗ್ಗೆ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದನ್ನು ಹೆಡ್ ಲೈನ್ ಕರ್ನಾಟಕ ವೆಬ್ ಪೋರ್ಟಲ್ ಸುದ್ದಿ ಬಿತ್ತರಿಸಿತ್ತು. ಇದೀಗ ಉಳ್ಳಾಲ ಪೊಲೀಸರು ಅಲರ್ಟ್ ಆಗಿದ್ದು ವಾಹನಗಳ ನಂಬರ್ ಪ್ಲೇಟ್ ಆಧಾರದಲ್ಲಿ ಕಿಡಿಗೇಡಿಗಳನ್ನು ಪತ್ತೆಹಚ್ಚಿದ್ದು ಠಾಣೆಗೆ ಕರೆದು ವಾರ್ನಿಂಗ್ ಮಾಡುವ ಕೆಲಸ ಆರಂಭಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಈ ಜಾಥಾದಲ್ಲಿ ಕೇರಳದ ಕಾಸರಗೋಡು ಕಡೆಯಿಂದ ಬಂದಿದ್ದ ಯುವಕರೂ ಇದ್ದರು ಎನ್ನಲಾಗುತ್ತಿದೆ.
ಪೊಲೀಸರು ಅಧಿಕೃತವಾಗಿ ನೀಡಿರುವ ಮಾಹಿತಿ ಪ್ರಕಾರ, ಜಾಥಾದಲ್ಲಿ ಪಾಲ್ಗೊಂಡವರು ಬಂಟ್ವಾಳ, ಮಂಜನಾಡಿ, ಕೋಟೆಕಾರು, ಬೆಳ್ತಂಗಡಿ, ದೇರಳಕಟ್ಟೆ, ಕೋಣಾಜೆ, ಉಳ್ಳಾಲ ಭಾಗದ ನಿವಾಸಿಗಳಿದ್ದರು. ತೊಕ್ಕೊಟ್ಟು ಪೇಟೆಯಲ್ಲಿ ರಸ್ತೆ ಬ್ಲಾಕ್ ಆಗಿದ್ದಾಗಿನ ಸಿಸಿಟಿವಿ ಸಂಗ್ರಹಿಸಿದರೆ, ಅತಿರೇಕವಾಗಿ ವರ್ತಿಸಿದ್ದ ಯುವಕರ ಗುರುತು ಪತ್ತೆ ಸಾಧ್ಯ ಅನ್ನುವ ಮಾಹಿತಿಯನ್ನು ಅಲ್ಲಿನ ಮಂದಿ ಹೇಳುತ್ತಾರೆ.
Ullal Police book sumoto case after Mulsim youths create public nuisance on Abbakka Circle on Eid in Mangalore. The video of this had gone viral on social media and a report was made by Headline Karnataka after which the police became alert.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm