ಬ್ರೇಕಿಂಗ್ ನ್ಯೂಸ್
03-10-23 07:34 pm Mangalore Correspondent ಕರಾವಳಿ
ಮಂಗಳೂರು, ಅ.3: ನಗರದ ಕದ್ರಿ ಕಂಬ್ಳದ ಬಳಿಯ ಚಂದ್ರಿಕಾ ಬಡಾವಣೆಯಲ್ಲಿ ಒಂದೇ ಮನೆಯಲ್ಲಿ ವಾಸವಿದ್ದ ವೃದ್ಧ ಅಕ್ಕ, ತಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಲತಾ ಭಂಡಾರಿ(70) ಮತ್ತು ಅವರ ಅಕ್ಕ ಸುಂದರಿ ಶೆಟ್ಟಿ(80) ಮೃತ ಸೋದರಿಯರು. ಲತಾ ಭಂಡಾರಿ ಅವರ ಪತಿ ಜಗನ್ನಾಥ ಭಂಡಾರಿ ಮಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಮಂಗಳವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ 4.30ರ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಬಂದ್ ಆಗಿತ್ತು. ಕಿಟಕಿಯಿಂದ ನೋಡಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಇವರಿಗೆ ಇಬ್ಬರು ಮಕ್ಕಳಿದ್ದು ಮಗ ದುಬೈನಲ್ಲಿ ಉದ್ಯೋಗದಲ್ಲಿದ್ದು ಈಗ ರಜೆಯಲ್ಲಿ ಊರಿಗೆ ಬಂದು ಪ್ರತ್ಯೇಕ ಮನೆ ಮಾಡಿಕೊಂಡು ಇದ್ದಾನೆ. ಮಗಳು ಮತ್ತು ಅಳಿಯ ಮುಂಬೈನಲ್ಲಿದ್ದು ತಂದೆ ತಾಯಿ ಇದ್ದ ಮನೆ ಅವರಿಗೆ ಸೇರಿತ್ತು. ಮಗಳು, ಅಳಿಯ ಈಗ ಊರಿಗೆ ಬಂದಿದ್ದು ಇವತ್ತು ಯಾವುದೋ ಕೇಸಿಗೆ ಸಂಬಂಧಿಸಿ ಕೋರ್ಟಿಗೆ ಹೋಗಿದ್ದರು. ಮಗ ಮಾತ್ರ ಊರಿಗೆ ಬಂದರೂ ತಂದೆ, ತಾಯಿ ನೋಡಲು ಮನೆಗೆ ಬಂದಿರಲಿಲ್ಲ. ಇವರ ನಡುವೆ ಏನೋ ಮನಸ್ತಾಪ ಇತ್ತೆಂದು ಹೇಳಲಾಗುತ್ತಿದೆ. ಮಕ್ಕಳ ಬಗ್ಗೆ ಮನನೊಂದು ತಾಯಿ ಮತ್ತು ದೊಡ್ಡಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಕ್ಕಳು ಉದ್ಯೋಗದಲ್ಲಿದ್ದರಿಂದ ಸಾಕಷ್ಟು ಸ್ಥಿತಿವಂತರೇ ಆಗಿದ್ದರು. ಆದರೂ ವೃದ್ಧ ತಂದೆ ಮನೆಯಲ್ಲಿ ಕುಳಿತು ಬೋರ್ ಆಗುತ್ತೆ ಎಂದು ಕೆಲಸಕ್ಕೆ ಹೋಗುತ್ತಿದ್ದರಂತೆ. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ, ತನಿಖೆ ನಡೆಸಿದ್ದಾರೆ.
Mangalore, elderly sisters commit suicide at Kadri kambala in Mangalore.
24-07-25 10:52 pm
HK News Desk
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
Lokayukta Raid, IAS Vasanthi: ಐಎಎಸ್ ಅಧಿಕಾರಿ ಮ...
24-07-25 07:29 pm
ಜಿಎಸ್ಟಿ ಬಾಕಿ ಪಾವತಿ ನೋಟಿಸ್ ವಾಪಸ್ ; ಆತಂಕಗೊಂಡಿದ...
24-07-25 05:01 pm
ಕೆಂಪುಕಲ್ಲು ಗಣಿಗಾರಿಕೆಗೆ ಅಧಿಕೃತ ಪರವಾನಿಗೆ ನೀಡಲು...
23-07-25 08:03 pm
24-07-25 09:06 pm
HK News Desk
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
24-07-25 10:26 pm
Mangalore Correspondent
Dharmasthala Case, Investigation, Advocate,...
24-07-25 05:27 pm
Mangalore Indiana Hospital: ಮಂಗಳೂರಿನಲ್ಲಿ ಪ್ರಥ...
24-07-25 11:30 am
ಕರಾವಳಿ ಜಿಲ್ಲೆಗಳಿಗೆ ಜುಲೈ 26ರ ವರೆಗೆ ಭಾರೀ ಮಳೆಯ ರ...
23-07-25 10:49 pm
Mangalore Extortion Jail, Sudheer Kumar Reddy...
23-07-25 10:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am