ಬ್ರೇಕಿಂಗ್ ನ್ಯೂಸ್
04-10-23 02:45 pm Mangalore Correspondent ಕರಾವಳಿ
ಮಂಗಳೂರು, ಅ.4: ವಿಶ್ವ ಹಿಂದು ಪರಿಷತ್ ಸ್ಥಾಪನೆಗೊಂಡು 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿದ್ದು, ಅ.9ರಂದು ಮಂಗಳೂರಿಗೆ ಆಗಮಿಸಲಿದೆ. ಇದರ ಪ್ರಚಾರಾರ್ಥ ಮಂಗಳೂರಿನಲ್ಲಿ ಮತ್ತೊಂದು ಉಪ ರಥ ರಚಿಸಲಾಗಿದ್ದು ನಗರದ ಬಂಟ್ಸ್ ಹಾಸ್ಟೆಲಿನ ಕಾರ್ಯಾಲಯದಲ್ಲಿ ಚಾಲನೆ ನೀಡಲಾಗಿದೆ.
ಆರೆಸ್ಸೆಸ್ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್. ರಥಕ್ಕೆ ಚಾಲನೆ ನೀಡಿ, ವಿಶ್ವ ಹಿಂದು ಪರಿಷತ್ತಿನ 60ನೇ ವರ್ಷದ ಪ್ರಯುಕ್ತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇಶದ ಶೌರ್ಯದ ಇತಿಹಾಸವನ್ನು ಜನರಿಗೆ ತಿಳಿಸುವುದಕ್ಕಾಗಿಯೇ ಈ ಯಾತ್ರೆ ನಡೆಸಲಾಗುತ್ತಿದೆ. ನಮ್ಮ ದೇಶದಲ್ಲಿ ಸಾವಿರಾರು ವೀರರು ಜನ್ಮ ತಾಳಿದ್ದಾರೆ. ಅವರ ಇತಿಹಾಸವನ್ನು ನೆನಪಿಸಿಕೊಂಡು ಮತ್ತೆ ಹಿಂದುತ್ವದ ಪರಂಪರೆ ಶೌರ್ಯ ಬೆಳೆಸಿಕೊಳ್ಳುವಂತೆ ಮಾಡುವುದೇ ಇದರ ಉದ್ದೇಶ ಎಂದರು.

ವಿಹಿಂಪ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಮಾತನಾಡಿ, ನಮ್ಮ ದೇಶವನ್ನು ಹಾವಾಡಿಗರ ದೇಶವೆಂದು ಪಾಶ್ಚಿಮಾತ್ಯರು ಹೇಳುತ್ತಿದ್ದರು. ಅದಲ್ಲದೆ, ನಮ್ಮ ದೇಶದ ಶೌರ್ಯದ ಇತಿಹಾಸವನ್ನೂ ಮರೆ ಮಾಚಿದ್ದಾರೆ. ಶಿವಾಜಿ, ರಾಣಾ ಪ್ರತಾಪ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವೀರರಾಣಿ ಅಬ್ಬಕ್ಕ ಹೀಗೆ ನಮ್ಮ ನಾಡು ನುಡಿಗಾಗಿ ಸಾವಿರಾರು ಮಂದಿ ಶೌರ್ಯದ ಇತಿಹಾಸ ದಾಖಲಿಸಿದ್ದಾರೆ. ಇಂಥ ವೀರ ಪರಂಪರೆ, ಇತಿಹಾಸ ನಮ್ಮ ದೇಶದ ಮೂಲೆ ಮೂಲೆಗಳಲ್ಲೂ ಸಿಗುತ್ತವೆ. ಇವನ್ನು ನಮ್ಮ ಇಂದಿನ ಯುವ ಜನಾಂಗ ಮರೆಯಬಾರದು. ನಮ್ಮ ಶಿಕ್ಷಣದಲ್ಲಿ ಇಂಥ ಇತಿಹಾಸಗಳು ಕಲಿಯುವುದಕ್ಕೆ ಸಿಗಲ್ಲ. ಅವನ್ನು ತಿಳಿಸುವುದಕ್ಕಾಗಿಯೇ ರಾಷ್ಟ್ರೀಯತೆ ಜಾಗೃತಿಗೊಳಿಸುವ ಉದ್ದೇಶದೊಂದಿಗೆ ಶೌರ್ಯ ಜಾಗರಣ ರಥಯಾತ್ರೆ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಗಿರಿಧರ್ ಶೆಟ್ಟಿ ಸೇರಿದಂತೆ ಬಜರಂಗದಳ ಮುಖಂಡರು ಉಪಸ್ಥಿತರಿದ್ದರು. ಉಪ ರಥವು ಮಂಗಳೂರು, ಮೂಲ್ಕಿ, ಮೂಡುಬಿದ್ರೆಯಲ್ಲಿ ಸಂಚರಿಸಲಿದ್ದು, ಅ.9ರಂದು ಕದ್ರಿ ಮೈದಾನ ಸೇರಲಿದೆ. ಅಂದು ಬೃಹತ್ ಸಮಾವೇಶ ನಡೆಯಲಿದ್ದು, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
The Vishwa Hindu Parishad (VHP) will mark the 60th anniversary of its founding in the state. To promote this, another sub-ratha has been formed in Mangaluru and launched at the office of Bunts Hostel in the city.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm