ಬ್ರೇಕಿಂಗ್ ನ್ಯೂಸ್
06-10-23 02:43 pm Mangalore Correspondent ಕರಾವಳಿ
ಪುತ್ತೂರು, ಅ.6: ಗಣೇಶೋತ್ಸವ, ನವರಾತ್ರಿ ರೀತಿಯ ನಮ್ಮ ಧಾರ್ಮಿಕ ಆಚರಣೆ, ಮೆರವಣಿಗೆಗಳಲ್ಲಿ ದೈವಾರಾಧನೆ ತೋರಿಸುವ ನರ್ತನ, ಪ್ರದರ್ಶನ ಮಾಡುವುದು ಸರಿಯಲ್ಲ. ಈ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ದೈವಾರಾಧನಾ ಸಮಿತಿಯ ಪದಾಧಿಕಾರಿಗಳು ಹೇಳಿದ್ದಾರೆ.
ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ, ದೈವಗಳ ನರ್ತನ ದೈವದ ಕೊಡಿಯಡಿಯಲ್ಲೇ ನಡೆಯಬೇಕು ಹೊರತು ಹಾದಿಬೀದಿಯಲ್ಲಿ ನಡೆಯಬಾರದು. ಅದಕ್ಕೊಂದು ಕಟ್ಟುಕಟ್ಟಳೆ, ನಿಯಮವಿದೆ. ಗಣೇಶೋತ್ಸವ, ಶಾರದೋತ್ಸವ, ನವರಾತ್ರಿ ಉತ್ಸವದಂತಹ ಮೆರವಣಿಗೆಗಳಲ್ಲಿ ದೈವದ ಪ್ರದರ್ಶನ ಮಾಡುವುದರಿಂದ ದೈವಾರಾಧನೆ ಮಾಡುವ ಜನರ ಭಾವನೆಗೆ ಘಾಸಿಯಾಗುತ್ತದೆ. ದೈವಾರಾಧನೆ ಯಾವತ್ತು ಅಪಭ್ರಂಶ ಆಗಬಾರದು ಎಂದರು.
ದೈವಾರಾಧನೆಯ ಬಗ್ಗೆ ಕೆಲವರಿಗೆ ಸ್ಪಷ್ಟ ಅರಿವಿಲ್ಲ. ತುಳುನಾಡಿನಲ್ಲಿ ದೈವಾರಾಧನೆ ಮಾಡುವಾಗ ಅದಕ್ಕೆ 16 ಕಟ್ಟಲೆ ಎನ್ನುವ ನಿಯಮವಿದೆ, ದೈವಾಧನೆಯನ್ನು ಪ್ರದರ್ಶನ ಮಾಡುವ ಪದ್ಧತಿಯಿಲ್ಲ. ಸಿಕ್ಕ ಸಿಕ್ಕವರು ದೈವ ನರ್ತನ ಮಾಡುವ ಕ್ರಮವಿಲ್ಲ. ಪರವ, ಪಂಬದ ಹಾಗೂ ನಲಿಕೆ ಜನಾಂಗದವರು ಮಾತ್ರ ದೈವಾರಾಧನೆಯ ನರ್ತನ ಸೇವೆಯನ್ನು ಮಾಡಬೇಕು ಎಂದವರು ಹೇಳಿದರು.
ತುಳುನಾಡಿನಲ್ಲಿ ದೈವಾರಾಧನೆಗೆ ಅದರದ್ದೇ ಆದ ನಂಬಿಕೆ, ನಡವಳಿಕೆಗಳಿವೆ. ಅದಕ್ಕೆ ಅಪಚಾರ ಮಾಡಲಾಗುತ್ತಿದೆ. ಇತ್ತೀಚೆಗೆ ಮೆರವಣಿಗೆಯೊಂದರಲ್ಲಿ ಗುಳಿಗ ವೇಷ ಹಾಕಿಕೊಂಡು ರಸ್ತೆಯಲ್ಲಿ ಹೊರಳಾಡುವುದು, ಆವೇಶ ಬಂದಂತೆ ನಟಿಸುವುದು ಕಂಡುಬಂದಿದೆ. ಆವೇಶ ತನ್ನಷ್ಟಕ್ಕೆ ತಾನು ಬರುವುದಿಲ್ಲ. ಅದಕ್ಕೆ ಒಂದು ಕ್ರಮ ಇದೆ. ದೈವದ ಕೊಡಿಯಡಿಯಲ್ಲಿ ಎಲ್ಲರೂ ಅಕ್ಷತೆ ಹಿಡಿದು ಪ್ರಾರ್ಥನೆ ಮಾಡಿ ಅಭಯದ ನುಡಿ ಕೊಡಬೇಕು ಎಂದು ಪ್ರಾರ್ಥಿಸಿದ ಬಳಿಕವೇ ದೈವಕ್ಕೆ ಆವೇಶ ಬರುವುದು. ದೈವಕ್ಕೆ ಕಟ್ಟುವವರು ಭಕ್ತಿಶ್ರದ್ಧೆಯಿಂದ ನಿಯಮ ಪಾಲಿಸಬೇಕು ಎಂದು ಮಾಹಿತಿ ನೀಡಿದರು.
ತುಳುನಾಡಿನಲ್ಲಿ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಮ್, ಕ್ರೈಸ್ತ ಜನಾಂಗದವರೂ ದೈವಾರಾಧನೆ ಮಾಡುತ್ತಾರೆ. ದೈವಾರಾಧನೆಯನ್ನು ಯಾರೂ ವಿರೋಧಿಸುವುದಿಲ್ಲ, ನಾವು ನಂಬಿಕೊಂಡು ಬಂದ ವ್ಯವಸ್ಥೆಗೆ ಅಪಹಾಸ್ಯ ಮಾಡಿದಂತಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ ಹಿನ್ನೆಯಲ್ಲಿ ಅವರು ಆ ರೀತಿಯ ಪ್ರದರ್ಶನ ಮಾಡಬಾರದು ಎನ್ನುವ ಆದೆಶ ನೀಡಿದ್ದರೂ ಕೆಲವರೂ ಇನ್ನೂ ಅಪಹಾಸ್ಯ ಮಾಡುತ್ತಿದ್ದಾರೆ. ಅಪಹಾಸ್ಯ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆ ಇದೆ. ಹಾಗಾಗಿ ತುಳುನಾಡಿನ ಈ ಶ್ರೇಷ್ಠ ಆಚರಣೆಯನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಬಾರದು ಎಂದು ಮನವಿ ಮಾಡಿದರು.
Puttur Bhutaradhana dance performance in processions is not right, there is a rule: Daivaradhana Samiti objects. Daivaradhana Committee of Nalike Samaj Seva Sangh has objected that it is not right that the dance performance of Deity worship is going on everywhere. Kadaba taluk president of the committee, Kittu Kallugudde, held a press conference and spoke about this, saying that such developments have hurt the hearts of people who worship gods. He said that people should be made aware of this.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm