ಬ್ರೇಕಿಂಗ್ ನ್ಯೂಸ್
06-10-23 07:09 pm Mangalore Correspondent ಕರಾವಳಿ
ಬೆಳ್ತಂಗಡಿ, ಅ.6: ಧರ್ಮಸ್ಥಳದಲ್ಲಿ ಮತ್ತೊಂದು ಅಸಹಜ ಸಾವು ಆಗಿರುವ ಬಗ್ಗೆ ಜಾಲತಾಣದಲ್ಲಿ ಭಾರೀ ಚರ್ಚೆ ಆಗಿದೆ. ಕಳೆದ ಸೆಪ್ಟಂಬರ್ 3ರಂದು ಕೃಷ್ಣ ಸಫಲ್ಯ(60) ಎಂಬ ವ್ಯಕ್ತಿಯೊಬ್ಬರು ನೀರು ತುಂಬಿದ್ದ ದೊಡ್ಡ ಗಾತ್ರದ ಪಾತ್ರೆಯಲ್ಲಿ ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದರ ಫೋಟೋ ಈಗ ವೈರಲ್ ಆಗಿದ್ದು, ಈ ರೀತಿಯೂ ವ್ಯಕ್ತಿ ಸಾಯೋಕೆ ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಜನರು ಮುಂದಿಟ್ಟಿದ್ದಾರೆ.
ಕೃಷ್ಣ ಸಫಲ್ಯ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಚಂದ್ರನಾಥ ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಉದ್ಯೋಗಿಯಾಗಿದ್ದು, ಅವರ ಪತ್ನಿ, ಮಕ್ಕಳು ಧರ್ಮಸ್ಥಳ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸೆ.3ರಂದು ಬೆಳಗ್ಗೆ ಕೃಷ್ಣ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಮರಳಿ ಮನೆಗೆ ಬಂದಿರಲಿಲ್ಲ. ಅದೇ ದಿನ ಸಂಜೆ ದೇವಸ್ಥಾನದ ಉಗ್ರಾಣದ ಮ್ಯಾನೇಜರ್ ಶ್ರೀಧರ ಹೆಗ್ಡೆ ಎಂಬವರು ಕೃಷ್ಣ ಸಪಲ್ಯರ ಮನೆಗೆ ಬಂದು ನೀರು ತುಂಬಿಸಿಟ್ಟಿರುವ ದೊಡ್ಡ ಗಾತ್ರದ ಪಾತ್ರೆಯಲ್ಲಿ ಬಿದ್ದು ಕೃಷ್ಣ ಸಪಲ್ಯ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಕೃಷ್ಣ ಸಪಲ್ಯರ ಮಗ ವಿನಯಕುಮಾರ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ತಾನು ಸ್ಥಳಕ್ಕೆ ತೆರಳಿ ನೋಡಿದಾಗ, ಸ್ಟೀಲ್ ಪಾತ್ರೆಯ ಮೇಲ್ಭಾಗವನ್ನು ಅರ್ಧದಷ್ಟು ಸಿಮೆಂಟ್ ಶೀಟ್ ನಲ್ಲಿ ಮುಚ್ಚಿದಂತಿತ್ತು. ನೀರು ತುಂಬಿದ್ದ ಪಾತ್ರೆಯಲ್ಲಿ ಶವ ಪತ್ತೆಯಾಗಿತ್ತು ಎಂಬುದಾಗಿದೆ.
ಒಂದು ತಿಂಗಳ ಹಿಂದೆ ಘಟನೆ ನಡೆದಿದ್ದು ನೀರು ತುಂಬಿದ್ದ ದೊಡ್ಡ ಗಾತ್ರದ ಪಾತ್ರೆಯಲ್ಲಿ ಶವ ತೇಲುತ್ತಿರುವ ಫೋಟೋ ವೈರಲ್ ಆಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅಸಹಜ ಸಾವೆಂದು ಪ್ರಕರಣ ದಾಖಲಾಗಿದೆ. ಈ ರೀತಿಯ ಸಾವು ಹೇಗಾಯ್ತು. ಪಾತ್ರೆಯಲ್ಲಿ ಶವ ಸಿಕ್ಕಿದ್ದು ಹೌದೇ ಎಂಬ ಬಗ್ಗೆ ಧರ್ಮಸ್ಥಳ ಠಾಣೆ ಪೊಲೀಸರಲ್ಲಿ ಕೇಳಿದರೆ, ಪಾತ್ರೆಯಲ್ಲಿ ಶವ ಸಿಕ್ಕಿದ್ದು ಹೌದು. ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
Mangalore Dharmasthala, body of man found in water vessel in suspicious way, photo goes viral. It is said the incident took place a month ago but now it has became viral on social media where people are questioning how can a old man die in such a manner.
24-07-25 10:52 pm
HK News Desk
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
Lokayukta Raid, IAS Vasanthi: ಐಎಎಸ್ ಅಧಿಕಾರಿ ಮ...
24-07-25 07:29 pm
ಜಿಎಸ್ಟಿ ಬಾಕಿ ಪಾವತಿ ನೋಟಿಸ್ ವಾಪಸ್ ; ಆತಂಕಗೊಂಡಿದ...
24-07-25 05:01 pm
ಕೆಂಪುಕಲ್ಲು ಗಣಿಗಾರಿಕೆಗೆ ಅಧಿಕೃತ ಪರವಾನಿಗೆ ನೀಡಲು...
23-07-25 08:03 pm
24-07-25 09:06 pm
HK News Desk
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
24-07-25 10:26 pm
Mangalore Correspondent
Dharmasthala Case, Investigation, Advocate,...
24-07-25 05:27 pm
Mangalore Indiana Hospital: ಮಂಗಳೂರಿನಲ್ಲಿ ಪ್ರಥ...
24-07-25 11:30 am
ಕರಾವಳಿ ಜಿಲ್ಲೆಗಳಿಗೆ ಜುಲೈ 26ರ ವರೆಗೆ ಭಾರೀ ಮಳೆಯ ರ...
23-07-25 10:49 pm
Mangalore Extortion Jail, Sudheer Kumar Reddy...
23-07-25 10:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am