ಬ್ರೇಕಿಂಗ್ ನ್ಯೂಸ್
09-10-23 10:50 pm Mangalore Correspondent ಕರಾವಳಿ
ಮಂಗಳೂರು, ಅ.9: ಅಮೆರಿಕದಲ್ಲಿ ಅಮೆರಿಕನ್ನರು, ಜಪಾನಲ್ಲಿ ಜಪಾನೀಯರ ನಿಂದನೆ, ಅಪಮಾನ ಆಗಲು ಸಾಧ್ಯವಿದೆಯಾ.. ನಮ್ಮ ಹಿಂದುಸ್ಥಾನದಲ್ಲಿ ಮಾತ್ರ ಹಿಂದುಗಳ ಅಪಮಾನ ಸಹಿಸಿಕೊಂಡಿದ್ದೇವೆ. ಮುಂದೆಂದೂ ಇಂಥಹ ಅಪಮಾನ ಸಹಿಸುವುದಿಲ್ಲ. ಯಾವುದೇ ಬಲಿದಾನ ವ್ಯರ್ಥ ಆಗೋದಕ್ಕೂ ಬಿಡಲ್ಲ. ಯಾರದೇ ಬಲಿದಾನಕ್ಕೂ ಪ್ರತೀಕಾರ ತೀರಿಸುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ಬಜರಂಗದಳ – ವಿಶ್ವ ಹಿಂದು ಪರಿಷತ್ತಿನ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಶರಣ್ ಮಾತನಾಡಿದರು. ಔರಂಗಜೇಬ ಖಡ್ಗ ಹಿಡಿದ ಫ್ಲೆಕ್ಸ್ ಹಾಕಿ ಹಿಂದುಗಳನ್ನು ಹೆದರಿಸಲು ಮುಂದಾಗಿದ್ದಾರೆ. ಆ ಘಟನೆ ಶಿವಮೊಗ್ಗದಲ್ಲಿ ಆಗಿದ್ದರಿಂದ ಉಳಿದಿದ್ದೀರಿ. ಮಂಗಳೂರಿನಲ್ಲಿ ಆಗುತ್ತಿದ್ದರೆ ನಿಮ್ಮ ನೂರು ದಂಗೆಕೋರರ ಮನೆಗಳು ಹುಡಿಯಾಗುತ್ತಿದ್ದವು. ನಾವು ಯಾವತ್ತೂ ಪ್ರತೀಕಾರ ತೀರಿಸುವುದರಲ್ಲಿ ಹಿಂದೆ ಬೀಳಲ್ಲ. ಅದು ಬಜರಂಗದಳದ ತಾಕತ್ತು ಎಂದು ಹೇಳಿದರು.



ಮಹಾಭಾರತದಲ್ಲಿಯೇ ಕೃಷ್ಣ ಹೇಳಿದ್ದಾನೆ, ಅಧರ್ಮ ಮಾಡಿದವರನ್ನು ನಾಶಪಡಿಸು ಎಂದು. ಅಧರ್ಮದ ಹಾದಿಯಲ್ಲಿ ಹೋದ ಯಾರಿಗೂ ಉಳಿಗಾಲ ಇರೋದಿಲ್ಲ. ಕೃಷ್ಣನ ಮಾತನ್ನು ಅನುಸರಿಸಿದರೆ ಇಸ್ಲಾಂ ಜಗತ್ತಿನಲ್ಲಿ ಉಳಿಯುತ್ತದೆ. ಇಲ್ಲದೇ ಇದ್ದರೆ ಇಸ್ಲಾಂ ನಾಶವಾಗುತ್ತದೆ ಎಂದು ಹೇಳಿದ ಶರಣ್ ಪಂಪ್ವೆಲ್, ಈಗ ಹೆದರುವ ಕಾಲ ಹೋಗಿದೆ. ಔರಂಗಜೇಬನ ಕಾಲ ಇದಲ್ಲ. ಇದು ನರೇಂದ್ರನ ಕಾಲ. ಪ್ರಶಾಂತ ಪೂಜಾರಿ ಹತ್ಯೆಯಾದಾಗ ಯಾರೋ ಒಬ್ಬ ಯುವಕ ಜೈಲಿನಲ್ಲಿ ಕುಳಿತುಕೊಂಡೇ ಉತ್ತರ ಕೊಟ್ಟಿದ್ದಾನೆ. ಅಂಥ ಶೌರ್ಯವಂತ ಯುವಕರು ನಮ್ಮಲ್ಲಿದ್ದಾರೆ ಎಂದು ಹೇಳಿದರು.


ಕರಿಂಜೆ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ನಾನು ಪರಶುರಾಮನ ರೀತಿ ಕೊಡಲಿ ಹಿಡಿಯಬೇಕೆಂದು ಹೇಳುವುದಿಲ್ಲ. ಆದರೆ ಪರಶುರಾಮನ ರೀತಿಯ ಪರಾಕ್ರಮ ತೋರಿಸಲೇಬೇಕು. ತುಳುವರು ಅಂತಹ ಪರಾಕ್ರಮ ತೋರಿದರೆ ಇಲ್ಲಿ ಭಯೋತ್ಪಾದನೆ, ಮತಾಂತರ ಆಗಲ್ಲ ಎಂದರು.
ಮುಸ್ಲಿಮರು ಬೆನ್ನಿಗೆ ಚೂರಿ ಹಾಕಿದವರು
ಪ್ರಮುಖ ಭಾಷಣ ಮಾಡಿದ ಚಕ್ರವರ್ತಿ ಸೂಲಿಬೆಲೆ, ನಾವು ಶಿವಾಜಿಯ ಫೋಟೋ ಹಾಕುವುದಕ್ಕೆ ಅವರು ಪ್ರತಿಯಾಗಿ ಟಿಪ್ಪು ಫೋಟೋ ಹಾಕುತ್ತಾರೆ. ಆದರೆ ಶಿವಾಜಿ ಶೌರ್ಯದ ಪ್ರತೀಕ. ಟಿಪ್ಪು ಕೊಡಗಿನ ಜನರೊಂದಿಗೆ ಹೋರಾಡಲಾಗದೆ ಓಡಿದ ಪುಕ್ಕಲ. ಅಂದು ಗಾಂಧೀಜಿ ಮುಸ್ಲಿಮರನ್ನು ಹತ್ತಿರಕ್ಕೆಳೆದುಕೊಂಡು ಭಾರತ ಮೂರಾಗಿ ವಿಭಜನೆ ಆಗಿತ್ತು. ಮೊದಲ ಪ್ರಧಾನಿ ನೆಹರು ಮುಸ್ಲಿಮರಿಗೆ ನೋವಾಗುತ್ತೆ ಎಂದು ಹೇಳಿ ಇಸ್ರೇಲ್ ಬದಲು, ಪ್ಯಾಲೆಸ್ತೀನ್ ಪರವಾಗಿ ನಿಂತಿದ್ದರು. ವಾಜಪೇಯಿ ಭಾಯಿ ಭಾಯಿ ಎನ್ನುತ್ತ ಪಾಕಿಸ್ದಾನಕ್ಕೆ ಬಸ್ ಬಿಟ್ಟಿದ್ದಕ್ಕೆ ಪ್ರತಿಯಾಗಿ ಅವರು ಕಾರ್ಗಿಲ್ ನಲ್ಲಿ ನುಸುಳಿ ಯುದ್ಧಕ್ಕೆ ಬಂದಿದ್ದರು. ಈಗಲೂ ಬ್ರಿಟಿಷರ ರೀತಿ ತುಕ್ಡೇ ಗ್ಯಾಂಗ್ ರಾಜಕೀಯ ಪಕ್ಷಗಳು ಹಿಂದುಗಳನ್ನು ಒಡೆಯಲು ಜಾತಿ ಗಣತಿ ಮಾಡುತ್ತಿದ್ದಾರೆ. ಇವರು ಯಾಕೆ ಮುಸ್ಲಿಮರ ಜಾತಿ ಕೇಳುವುದಿಲ್ಲ. ದೇವಬಂದಿ, ಬರೇಲ್ವಿ, ಸುನ್ನಿ, ಷಿಯಾ ಎಷ್ಟಿದ್ದಾರೆಂದು ಗಣತಿ ಮಾಡಲ್ಲ ಎಂದು ಪ್ರಶ್ನೆ ಮಾಡಿದರು.
2015ರಲ್ಲಿ ಯಾಲೆ ಯುನಿವರ್ಸಿಟಿಯಿಂದ ಒಂದು ವರದಿ ಪ್ರಕಟವಾಗುತ್ತದೆ. 2010ರಲ್ಲಿ 160 ಕೋಟಿ ಇದ್ದ ಮುಸ್ಲಿಮರ ಸಂಖ್ಯೆ 2050ರ ವೇಳೆಗೆ 270 ಕೋಟಿ ಆಗುತ್ತೆ. ಕ್ರಿಸ್ತಿಯನ್ನರಷ್ಟೇ ಆಗುತ್ತಾರೆಂದು. ಶ್ರೀಲಂಕಾದಲ್ಲಿ 47 ಶೇಕಡಾ, ಭಾರತದಲ್ಲಿ 30 ಪರ್ಸೆಂಟ್ ಮುಸ್ಲಿಮರ ಸಂಖ್ಯೆ ಹೆಚ್ಚುತ್ತದೆ ಎಂದು. ಈಗ 17 ಪರ್ಸೆಂಟ್ ಇರುವ ಮುಸ್ಲಿಮರನ್ನೇ ಸಹಿಸಿಕೊಳ್ಳಲು ಆಗುತ್ತಿಲ್ಲ. 30 ಪರ್ಸೆಂಟ್ ಆದರೆ ನಮ್ಮ ಸ್ಥಿತಿ ಹೇಗಿರಬಹುದು ಎಂದು ಆಲೋಚಿಸಿ ಎಂದರು ಸೂಲಿಬೆಲೆ. ಕಾರ್ಯಕ್ರಮದಲ್ಲಿ ಎಂಬಿ ಪುರಾಣಿಕ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಉದ್ಯಮಿ ಗಿರಿಧರ್ ಶೆಟ್ಟಿ ಮತ್ತಿತರರಿದ್ದರು.
Bajrang Dal celebrates Shaurya Yatra in Mangalore, sharan pumpwell slams Shivamogga incident says if that incident would have taken place in mangalore scene would have been different. More than thousands of Bajrang Dal activists took part in the Shaurya Yatra wearing the uniform with a saffron flag tied to their lathis
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm