ಬ್ರೇಕಿಂಗ್ ನ್ಯೂಸ್
11-10-23 09:44 pm Mangalore Correspondent ಕರಾವಳಿ
ಮಂಗಳೂರು, ಅ.11: ಜಾಗದ ರಿಜಿಸ್ಟ್ರೇಶನ್ ಉದ್ದೇಶಕ್ಕೆ ಹೋದವರ ಆಧಾರ್ ಮಾಹಿತಿ ಸೋರಿಕೆಯಾಗುತ್ತಿದ್ದು, ಇದಕ್ಕೆ ರಾಜ್ಯ ಸರಕಾರವೇ ಹೊಣೆ. ಇವರು ಖಾಸಗಿ ಕಂಪನಿಗೆ ಸಾಫ್ಟ್ ವೇರ್ ಗುತ್ತಿಗೆ ಕೊಟ್ಟಿದ್ದು, ಅಲ್ಲಿಂದಲೇ ಜನರ ಮಾಹಿತಿ ಸೋರಿಕೆ ಆಗಿರುವ ಶಂಕೆಯಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಹಣ ಕಳಕೊಂಡವರಿಗೆ ಹಣವನ್ನು ರಾಜ್ಯ ಸರಕಾರವೇ ಹಿಂತಿರುಗಿಸಬೇಕು ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ತನ್ನ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶಾಸಕರು, ಮಂಗಳೂರಿನ ಉಪ ನೋಂದಣಿ ಕಚೇರಿಯಿಂದ ಆಧಾರ್ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನನ್ನ ಬಳಿ ಹಲವರು ಹಣ ಕಳಕೊಂಡಿದ್ದಾಗಿ ದೂರು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರದ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವಂಚನೆ ಆಗಿರುವ ಬಗ್ಗೆ ತಿಳಿದಿದೆ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮಂಗಳೂರು ಕಮಿಷನರ್ ಅವರಿಗೂ ಹೇಳಿದ್ದು ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಇಷ್ಟೆಲ್ಲ ಎಡವಟ್ಟು ಆಗಿದ್ದರೂ ರಾಜ್ಯದ ಸಚಿವರಾಗಲೀ, ಯಾವುದೇ ವ್ಯಕ್ತಿಯೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಆಧಾರ್ ಮಾಹಿತಿ ಸೋರಿಕೆ ಗಂಭೀರ ವಿಚಾರವಾಗಿದ್ದು ಉನ್ನತ ಮಟ್ಟದ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.
ರಿಜಿಸ್ಟ್ರೇಶನ್ ಕಚೇರಿಯ ಸ್ಥಿತಿ ಹೀಗಾಗಿರುವುದರಿಂದ ಕೆಲವೊಂದಷ್ಟು ದಿನ ಜನಸಾಮಾನ್ಯರು ಈ ಕಚೇರಿಗೆ ಬರುವುದರಿಂದ ದೂರ ನಿಲ್ಲುವುದು ಒಳ್ಳೆಯದು. ಬಡವರು ಹಣ ಕಳಕೊಳ್ಳುವುದಕ್ಕೆ ಅವಕಾಶ ಕೊಡಬಾರದು. ಈ ಬಗ್ಗೆ ಅಧಿಕೃತವಾಗಿ ಸರಕಾರ ಅಥವಾ ಪೊಲೀಸ್ ಇಲಾಖೆ ಹೇಳಿದರೆ ಉತ್ತಮ ಎಂದು ಶಾಸಕ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಕೆಪಿಟಿ ಮತ್ತು ನಂತೂರಿನಲ್ಲಿ ಹೊಸತಾಗಿ ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿದ್ದು, ಇದು ಯಾವ ರೀತಿ ಇರತ್ತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಫ್ಲೈಓವರ್ ನಿರ್ಮಾಣದ ಬಗ್ಗೆ ಸಂಸದರ ನೇತೃತ್ವದಲ್ಲಿ ಹೆದ್ದಾರಿ ಅಧಿಕಾರಿಗಳು, ಇಂಜಿನಿಯರುಗಳು ಮತ್ತು ನಾವು ಶಾಸಕರು ಸೇರಿ ಸಭೆ ನಡೆಸಿದ್ದೇವೆ. ಅದರಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಯಾವ ರೀತಿ ಇರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಕೇಳಿ ಮಾಧ್ಯಮಕ್ಕೆ ನೀಡುತ್ತೇನೆ. ಆಕ್ಷೇಪ ಇದ್ದರೆ, ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಸರಿಪಡಿಸುತ್ತೇವೆ ಎಂದರು. ಈಗಾಗಲೇ ಬಿಕರ್ನಕಟ್ಟೆ, ಕುಳೂರು, ಸುರತ್ಕಲ್, ಕೊಟ್ಟಾರದಲ್ಲಿ ಫ್ಲೈಓವರ್ ಎಡವಟ್ಟು ಆಗಿದ್ದು ಮತ್ತೊಂದು ಬ್ಲಂಡರ್ ಆಗಬಾರದಲ್ಲ.. ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂದು ಕೇಳಿದ್ದಕ್ಕೆ, ನಾವು ಇಂಜಿನಿಯರ್ ಕೆಲಸ ಮಾಡೋಕೆ ಆಗಲ್ಲ. ಅದಕ್ಕಾಗಿಯೇ ಇಂಜಿನಿಯರ್ ಗಳು ಇದ್ದಾರೆ. ಅವರು ಮಾಡಿದ್ದನ್ನು ನಾವು ಒಪ್ಪುತ್ತೇವೆ. ನಾವು ಹೇಳಿದ್ದನ್ನು ಅವರು ಕೇಳುವುದಿಲ್ಲ ಎಂದು ಅಸಹಾಯಕತೆ ಹೇಳಿಕೊಂಡರು.
ಮಂಗಳೂರಿನಲ್ಲಿ ಕಾಂಕ್ರೀಟ್ ರಸ್ತೆಯನ್ನು ಪ್ರತಿ ಬಾರಿ ಅಗೆಯುತ್ತೀರಿ ಯಾಕೆ ಎಂದು ಕೇಳಿದ ಪ್ರಶ್ನೆಗೆ, ನಿಜ ಹೇಳಬೇಕಂದ್ರೆ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದರಿಂದ ಈ ರೀತಿ ಆಗುತ್ತಿದೆ. ಜಲಸಿರಿ ಯೋಜನೆ ಬಂದಾಗ ನೀರಿನ ಪೈಪ್ ಹಾಕಲು ಅಗೆದರು. ಆನಂತರ, ಗೈಲ್ ಪೈಪ್ ಲೈನ್, ಫೋನ್ ಕೇಬಲ್ ಹೀಗೆ ಪ್ರತಿ ಬಾರಿ ಒಂದೊಂದು ಕೆಲಸಕ್ಕೆ ಅಗೆಯುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ ಅನ್ನುವಂತಾಗಿದೆ ಎಂದರು. ಯಾಕೆ ಇದನ್ನು ಒಮ್ಮೆಲೇ ಮಾಡುವುದಕ್ಕಾಗಲ್ಲ ಎಂದು ಕೇಳಿದ್ದಕ್ಕೆ, ನಾವು ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ರೂಪಾ ಬಂಗೇರ ಇದ್ದರು.
The state government is responsible for the leakage of Aadhaar details of those who went for the purpose of registration of land. It is suspected that he had given the software contract to a private company from where people's data was leaked. Mangaluru MLA Vedavyas Kamath demanded a high-level probe into the matter and demanded that the state government should return the money to those who lost the money.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm