ಬ್ರೇಕಿಂಗ್ ನ್ಯೂಸ್
12-10-23 07:47 pm Mangalore Correspondent ಕರಾವಳಿ
ಮಂಗಳೂರು, ಅ.12: ದೇವಸ್ಥಾನದ ಉತ್ಸವ, ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧಿಸುವ ಹಿಂದು ಸಂಘಟನೆಗಳ ಒತ್ತಾಯ ಕಳೆದ ಎರಡು ವರ್ಷಗಳಲ್ಲಿ ಕರಾವಳಿಯಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು. ಈ ಬಾರಿ ಮತ್ತೆ ಜಾತ್ರಾ ಸೀಸನ್ ಆರಂಭಗೊಳ್ಳುತ್ತಲೇ ಕಮ್ಯುನಿಸ್ಟ್ ಪರ ಸಂಘಟನೆಗಳು ದೇವಸ್ಥಾನಗಳ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ನಿಷೇಧಿಸಬಾರದು ಎನ್ನುವ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ. ಇದರ ನಡುವಲ್ಲೇ ಹಿಂದು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಹಿಂದು ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದು, ಒಬ್ಬನೇ ಬಿಡ್ಡು ಪಡೆಯುವ ಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರನ್ನು ಭೇಟಿಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಪದಾಧಿಕಾರಿಗಳು ಮನವಿ ನೀಡಿದ್ದಾರೆ. ನವರಾತ್ರಿ ಉತ್ಸವಕ್ಕೆ ಜಾತ್ರಾ ವ್ಯಾಪಾರಸ್ಥರಿಗೆ ಜಾಗ ಹಂಚಿಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸದ್ರಿ ಜಾಗ ಹಂಚಿಕೆ ಸಂದರ್ಭದಲ್ಲಿ ನಿರ್ದಿಷ್ಟ ಧರ್ಮದ ವ್ಯಾಪಾರಿಗಳಿಗೆ ಜಾಗ ನಿರಾಕರಣೆ ಮಾಡಲಾಗಿದೆ ಎಂಬ ಬಗ್ಗೆ ನಮ್ಮ ಸಂಘದ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಮಂಗಳಾದೇವಿ ದೇವಸ್ಥಾನ ಸರ್ವಧರ್ಮದ ಕ್ಷೇತ್ರವಾಗಿದ್ದು ಧರ್ಮದ ಹೆಸರಲ್ಲಿ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಮಾಡಬಾರದು ಎಂದು ಮನವಿ ನೀಡಿದ್ದಾರೆ.
ಇದೇ ವಿಚಾರದಲ್ಲಿ ದ.ಕ. ಜಿಲ್ಲಾಧಿಕಾರಿಗಳಿಗೂ ಸಂಘದ ಪದಾಧಿಕಾರಿಗಳು ಮನವಿ ನೀಡಿದ್ದಾರೆ. ಪ್ರತಿ ವರ್ಷವೂ ನವರಾತ್ರಿ ಸಂದರ್ಭದಲ್ಲಿ ಮಂಗಳಾದೇವಿ ದೇವಸ್ಥಾನದಲ್ಲಿ ಬಡ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಆದರೆ ದೇವಸ್ಥಾನಕ್ಕೆ ಸಂಬಂಧಪಟ್ಟವರು ಮುಸ್ಲಿಂ ವ್ಯಾಪಾರಸ್ಥರಿಗೆ ಜಾಗ ನೀಡದೆ ಹಿಂದಕ್ಕೆ ಕಳಿಸುತ್ತಿದ್ದಾರೆ. ಇದರಿಂದ ಜಾತ್ರೆ ವ್ಯಾಪಾರವನ್ನೇ ನಂಬಿ ಬದುಕುತ್ತಿರುವ ವ್ಯಾಪಾರಿಗಳಿಗೆ ಅನ್ಯಾಯ ಆಗುತ್ತಿದ್ದು, ಬದುಕುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಈ ರೀತಿ ಅವಕಾಶ ನಿರಾಕರಣೆ ಮಾಡುತ್ತಿರುವ ದೇವಸ್ಥಾನ ಆಡಳಿತ ಮಂಡಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಸಮಿತಿಯ ಪ್ರಮುಖರಾದ ಸುನಿಲ್ ಕುಮಾರ್ ಬಜಾಲ್, ಭರತ್ ಜೈನ್, ಬಿಕೆ ಇಮ್ತಿಯಾಜ್ ಒತ್ತಾಯ ಮಾಡಿದ್ದಾರೆ. ಇದಲ್ಲದೆ, ಈ ಬಗ್ಗೆ ಪೊಲೀಸ್ ದೂರು ನೀಡಲೆಂದು ಕಚೇರಿಗೆ ತೆರಳಿದ್ದ ಸಂಘಟನೆಯ ಪ್ರತಿನಿಧಿಗಳಿಗೆ ಪೊಲೀಸ್ ಕಮಿಷನರ್ ಮನವಿ ನೀಡುವುದಕ್ಕೂ ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಒಬ್ಬನೇ ಟೆಂಡರ್ ಪಡೆಯುವ ಕ್ರಮಕ್ಕೆ ಬ್ರೇಕ್
ಇದೇ ವೇಳೆ, ರಾಜ್ಯ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ದೇವಸ್ಥಾನ ಜಾತ್ರೆಯಲ್ಲಿ ಒಬ್ಬ ಯಶಸ್ವಿ ಬಿಡ್ಡುದಾರನಿಗೆ ವ್ಯಾಪಾರಕ್ಕೆ ಅವಕಾಶ ನೀಡುವ ಪದ್ಧತಿ ಕೈಬಿಡಬೇಕೆಂದು ತಿಳಿಸಿದ್ದಾರೆ. ಯಾರೋ ಒಬ್ಬ ಸಂತೆ ವ್ಯಾಪಾರದ ಜಾಗವನ್ನು ಟೆಂಡರ್ ಪಡೆದು, ಬಳಿಕ ವಿವಿಧ ಸ್ಟಾಲ್ ಗಳನ್ನಾಗಿಸಿ ಹೆಚ್ಚು ಮೊತ್ತಕ್ಕೆ ನೀಡುತ್ತಿದ್ದಾರೆ. ಈ ರೀತಿಯಲ್ಲಿ ಒಬ್ಬನಿಗೆ ಗುತ್ತಿಗೆ ನೀಡುವ ಬದಲು ಎಲ್ಲ ವ್ಯಾಪಾರಸ್ಥರಿಗೂ ಸ್ಥಳದಲ್ಲೇ ಏಲಂ ಮೂಲಕ ಜಾಗ ಹರಾಜು ಮಾಡುವಂತೆ ಸಂಘದ ಪದಾಧಿಕಾರಿಗಳು ಕೇಳಿಕೊಂಡಿದ್ದಾರೆ. ಹಿಂದು ವ್ಯಾಪಾರಸ್ಥರ ಸಂಘದ ಮನವಿಗೆ ಜಿಲ್ಲಾಧಿಕಾರಿಗಳು ಒಪ್ಪಿದ್ದು, ದೇವಸ್ಥಾನ ಆಡಳಿತ ಮಂಡಳಿಯವರೇ ನವರಾತ್ರಿ ಮತ್ತು ವರ್ಷಾವಧಿ ಜಾತ್ರೆ ಸಂದರ್ಭದಲ್ಲಿ ವ್ಯಾಪಾರಕ್ಕೆ ಜಾಗ ಏಲಂ ಮಾಡಿಕೊಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಷರತ್ತಿನ ಆದೇಶ ನೀಡಿದ್ದು, ಅದರ ಪ್ರಕಾರ ಯಾವುದೇ ವ್ಯಕ್ತಿ ಬಿಡ್ಡು ಪಡೆದು ಇನ್ನೊಬ್ಬನಿಗೆ ಹಂಚಿಕೆ ಮಾಡುವಂತಿಲ್ಲ. ವ್ಯಾಪಾರ ಮಾಡುವ ವ್ಯಕ್ತಿಯೇ ತನ್ನ ಆಧಾರ್ ಕಾರ್ಡ್ ತೋರಿಸಿ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಬಿಡ್ಡಿನ ಮೊತ್ತವನ್ನು ಮೊದಲೇ ದೇವಳದ ಕಚೇರಿಯಲ್ಲಿ ಪಾವತಿಸಬೇಕು. ಸಂತೆ ಸ್ಥಳದಲ್ಲಿ ಜೂಜು, ಜುಗಾರಿ, ಲಕ್ಕಿಡಿಪ್, ಮಾಂಸದ ಹೊಟೇಲ್ ಗಳನ್ನು ನಡೆಸುವಂತಿಲ್ಲ. ಸಂತೆ ವ್ಯಾಪಾರದ ಬಳಿಕ ತಮ್ಮ ಸ್ಥಳದಲ್ಲಿ ಬಿದ್ದಿರುವ ಕಸಗಳನ್ನು ಹೆಕ್ಕಬೇಕು. ಧ್ವನಿ ವರ್ಧಕ ಬಳಸುವಂತಿಲ್ಲ ಇತ್ಯಾದಿ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಅನ್ನುವುದು ಹಿಂದು ಸಂಘಟನೆಗಳ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಜಾತ್ರೆ ಸಂದರ್ಭದಲ್ಲಿ ಒಬ್ಬನೇ ಸಂತೆ ವ್ಯಾಪಾರದ ಬಿಡ್ಡು ಪಡೆದು ತಮಗೆ ಬೇಕಾದ ರೀತಿ ಹಂಚಿಕೆ ಮಾಡುವ ಈ ಹಿಂದಿನ ಪ್ರಕ್ರಿಯೆಗೆ ಹಿಂದು ವ್ಯಾಪಾರಸ್ಥರ ಸಂಘ ಬ್ರೇಕ್ ಹಾಕಿದೆ. ಆದರೆ, ಈ ರೀತಿ ಮಾಡಿದ್ದು ಮುಸ್ಲಿಂ ವ್ಯಾಪಾರಸ್ಥರನ್ನು ದೂರ ಇಡುವ ಹುನ್ನಾರ ಅನ್ನುವ ಮಾತನ್ನು ಕಮ್ಯುನಿಸ್ಟ್ ನಾಯಕರು ಹೇಳುತ್ತಿದ್ದು, ಅ.13ರಂದು ಬೆಳಗ್ಗೆ ಇದೇ ವಿಚಾರದಲ್ಲಿ ಮಂಗಳೂರಿನ ಮಿನಿ ವಿಧಾನಸೌಧ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
Mangalore No muslim traders for Mangaladevi temple Navaratri festival fair this 2023. CPIM issues letter on behalf of Muslim traders to DC to grant permission.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm