ಬ್ರೇಕಿಂಗ್ ನ್ಯೂಸ್
16-10-23 03:36 pm Mangalore Correspondent ಕರಾವಳಿ
ಮಂಗಳೂರು, ಅ.16: ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಶ್ರೇಯೋಭಿವೃದ್ದಿಗಾಗಿ ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಅವಿರತ ಶ್ರಮಿಸುತ್ತಿರುವ ಅನಿವಾಸಿ ಉದ್ಯಮಿ ಮತ್ತು ಸಮಾಜ ಕಲ್ಯಾಣ ಕಾರ್ಯಕರ್ತ ಮೈಕಲ್ ಡಿಸೋಜ ಅವರು ನವೆಂಬರ್ 4 ಮತ್ತು 5 ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ಬಸ್ತಿ ವಾಮನ ಶೆಣೈ ವೇದಿಕೆಯಲ್ಲಿ ನಡೆಯುವ 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದಾರೆ.
ಪ್ರಸ್ತುತ ಅಬುಧಾಬಿಯಲ್ಲಿ ನೆಲೆಸಿರುವ ಮೈಕಲ್ ಡಿಸೋಜಾ, ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ನಿಕಟವರ್ತಿ ಆಗಿದ್ದವರು. ದೇಶ - ವಿದೇಶಗಳಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಕಾರ್ಯಕ್ರಮಗಳಿಗೆ ನಿರಂತರ ಪೋಷಕರಾಗಿದ್ದ ಮೈಕಲ್ ಡಿಸೋಜ, ಕೊಂಕಣಿ ಲೇಖಕರಿಗೆ ಪುಸ್ತಕ ಪ್ರಕಟಿಸಲು 40 ಲಕ್ಷ ರುಪಾಯಿ ಅನುದಾನ, ಕೊಂಕಣಿ ಗೀತ ಸಾಹಿತ್ಯ, ಸಂಗೀತ ಸಂಯೋಜನೆ ಮತ್ತು ಪ್ರಸ್ತುತಿಗಾಗಿ ಸುಮಾರು 10 ಲಕ್ಷ ಹಾಗೂ ಕೊಂಕಣಿ ಸಿನೆಮಾಕ್ಕಾಗಿ 25 ಲಕ್ಷ ಅನುದಾನವನ್ನು ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಈಗಾಗಲೇ ಮುಡಿಪಾಗಿಟ್ಟಿದಾರೆ. ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗಾಗಿ 25 ಕೋಟಿ ರುಪಾಯಿ ಮೌಲ್ಯದ ’ಎಜುಕೇರ್’ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿದ್ದು ಸಿ.ಒ.ಡಿ.ಪಿ. ಸಂಸ್ಥೆಯ ಮೂಲಕ ಈ ವರೆಗೆ ಸುಮಾರು 3,500 ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಯೋಜನ ಪಡೆದಿರುತ್ತಾರೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಗೋಕುಲದಾಸ ಪ್ರಭು ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿದ್ದು, ಕೊಂಕಣಿ ಕವಿ ಟೈಟಸ್ ನೊರೊನ್ಹಾ ಕಾರ್ಯದರ್ಶಿ ಮತ್ತು ಪತ್ರಕರ್ತ ಎಚ್.ಎಮ್. ಪೆರ್ನಾಲ್ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ನಲಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ, ಕವಿ ಮೆಲ್ವಿನ್ ರೋಡ್ರಿಗಸ್, ಅಖಿಲ ಭಾರತ ಕೊಂಕಣಿ ಪರಿಷದ್ ಇದರ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ ಮತ್ತು ಕೊಂಕಣಿ ಶಿಕ್ಷಣ ತಜ್ಞ ಡಾ| ಕಸ್ತೂರಿ ಮೋಹನ್ ಪೈ ಇವರ ಮಾರ್ಗದರ್ಶನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉಪಸಮಿತಿಗಳನ್ನು ರಚಿಸಲಾಗಿದೆ, ಆರ್ಥಿಕ ಸಮಿತಿಗೆ ಸ್ಟೀಫನ್ ಪಿಂಟೊ, ಬೆಂದೂರ್ ಮತ್ತು ಓಸ್ವಾಲ್ಡ್ ರೊಡ್ರಿಗಸ್, ಬಿಜೈ, ಊಟೋಪಚಾರ ಸಮಿತಿಗೆ ವಿಶ್ವ ಕೊಂಕಣಿ ಕೇಂದ್ರ, ವಸತಿ ಸಮಿತಿಗೆ ವಿನ್ಸೆಂಟ್ ಪಿಂಟೊ, ಫ್ಲಾಯ್ಡ್ ಕಿರಣ್ ಮತ್ತು ಜೆರಿ ಕೊನ್ಸೆಸೊ, ನೋಂದಣಿ ಮತ್ತು ಸ್ವಯಂಸೇವಕ ಸಮಿತಿಗೆ ಸುಚಿತ್ರಾ ಶೆಣೈ ಮತ್ತು ಫೆಲ್ಸಿ ಲೋಬೊ, ಕಾರ್ಯಕ್ರಮ ಸಮಿತಿಗೆ ಡಾ| ಹನುಮಂತ್ ಚೋಪ್ಡೆಕರ್ ಮತ್ತು ಡಾ| ಜಯಂತಿ ನಾಯ್ಕ್, ವೇದಿಕೆ ನಿರ್ವಹಣಾ ಸಮಿತಿಗೆ ಅನ್ವೇಷಾ ಸಿಂಘಬಾಳ್, ಮಾಧ್ಯಮ ಸಮಿತಿಗೆ ಸ್ಟ್ಯಾನಿ ಬೇಳ ಮತ್ತು ಪ್ರವೀಣ್ ತಾವ್ರೊ , ಮುದ್ರಣ - ಸ್ಮರಣ ಸಂಚಿಕೆ ಸಮಿತಿಗೆ ಟೈಟಸ್ ನೊರೊನ್ಹಾ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Michael D'Souza, an NRI businessman and social welfare activist who has been working tirelessly for the betterment of Konkani language, literature, music and art through the 'Vision Konkani' programme, is heading the reception committee of the 4th Akhil Bharatiya Konkani Sahitya Sammelana to be held on November 5 and 25 at Basti Vamana Shenoy Vedike in the premises of World Konkani Centre in Mangaluru.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm