Mangaladevi temple, Sharan Pumpwell: ಮಂಗಳಾದೇವಿ ಸಂತೆ ವಿವಾದ ; ಹಿಂದುಗಳಿಗಷ್ಟೇ ಅವಕಾಶ ಎಂದ ಶರಣ್ ಪಂಪ್ವೆಲ್ ವಿರುದ್ಧ ಉಸ್ತುವಾರಿ ಸಚಿವರಿಗೆ ದೂರು, ಕ್ರಮಕ್ಕೆ ಒತ್ತಾಯ

18-10-23 06:32 pm       Mangalore Correspondent   ಕರಾವಳಿ

ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಸ್ಥರನ್ನು ದ್ವೇಷಿಸುವ ರೀತಿಯ ವಿಶ್ವ ಹಿಂದು ಪರಿಷತ್, ಬಜರಂಗದಳ ಮುಖಂಡರ ನಡೆಯ ಬಗ್ಗೆ ಜಾತ್ಯತೀತ ಪಕ್ಷಗಳ ಸಂಘಟನೆಯ ನಾಯಕರು ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರಿಗೆ ದೂರು ನೀಡಿದ್ದಾರೆ.

ಮಂಗಳೂರು, ಅ.18: ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಸ್ಥರನ್ನು ದ್ವೇಷಿಸುವ ರೀತಿಯ ವಿಶ್ವ ಹಿಂದು ಪರಿಷತ್, ಬಜರಂಗದಳ ಮುಖಂಡರ ನಡೆಯ ಬಗ್ಗೆ ಜಾತ್ಯತೀತ ಪಕ್ಷಗಳ ಸಂಘಟನೆಯ ನಾಯಕರು ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರಿಗೆ ದೂರು ನೀಡಿದ್ದಾರೆ.

ಧರ್ಮದ ವಿಚಾರದಲ್ಲಿ ದ್ವೇಷ ಮೂಡಿಸಿ, ಜನರನ್ನು ಎತ್ತಿಕಟ್ಟುವ ಪ್ರಯತ್ನವನ್ನು ಶರಣ್ ಪಂಪ್ವೆಲ್ ಮತ್ತು ಗ್ಯಾಂಗ್ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಕಾನೂನು ಉಲ್ಲಂಘನೆಯಾಗಿದ್ದು ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ನಾಯಕರು ಒತ್ತಾಯಿಸಿದ್ದಾರೆ. ಒಂದು ಸಮುದಾಯವನ್ನು ಬಹಿಷ್ಕರಿಸಲು ಕರೆ ನೀಡುವುದು ಜಾಮೀನು ರಹಿತ ಅಪರಾಧವಾಗಿದೆ. ಈ ವಿಚಾರದಲ್ಲಿ ಕಾನೂನು ಪಾಲಿಸುವ ಪೊಲೀಸರು ಲಘುವಾಗಿ ಪರಿಗಣಿಸಬಾರದು. ಮೃದು ಧೋರಣೆ ತೋರುವುದು ಜನಸಾಮಾನ್ಯರಲ್ಲಿ ಶಾಂತಿ ಕದಡುವ ಆತಂಕಕ್ಕೆ ಕಾರಣವಾಗಿದೆ ಎಂದು ಸಚಿವರ ಗಮನಕ್ಕೆ ತಂದಿದ್ದಾರೆ.

VHP leader Sharan Pumpwell stopped by police from entering Udupi for  attending Hindu Samajotsava | SabrangIndia

MCC is responsible for pathetic condition of Mangaluru: Muneer Katipalla

ಇದೇ ವಿಚಾರದಲ್ಲಿ ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮುನೀರ್ ಕಾಟಿಪಳ್ಳ, ಮುಸ್ಲಿಮರು ವ್ಯಾಪಾರ ಮಾಡಬಾರದು, ಅವರನ್ನು ಬಹಿಷ್ಕರಿಸಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಶರಣ್ ಪಂಪ್ವೆಲ್ ವಿರುದ್ಧ ಪೊಲೀಸ್ ಇಲಾಖೆ ಮಂಡಿಯೂರಿದಂತೆ ವರ್ತಿಸುತ್ತಿದೆ. ಮಂಗಳಾದೇವಿಯಲ್ಲಿ ಮಾತ್ರ ನವರಾತ್ರಿ ಉತ್ಸವ ನಡೆಯುವುದಲ್ಲ. ಕುದ್ರೋಳಿ, ಉರ್ವಾ ಸೇರಿ ಹಲವು ಕಡೆ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ನಡೆಯುತ್ತದೆ. ಯಾಕೆ ಇವರು ಹೋಗಿ ಅಲ್ಲಿ ತಡೆ ಹಾಕುವುದಿಲ್ಲ. ಕುದ್ರೋಳಿಗೆ ಹೋದರೆ ಕೋಟಿ ಚೆನ್ನಯರನ್ನು ನಂಬುವವರು ಇವರನ್ನು ಓಡಿಸುತ್ತಾರೆಂಬ ಭಯವೇ ಎಂದು ಪ್ರಶ್ನೆ ಮಾಡಿದ್ದಾರೆ.

Karnataka BJP chief Nalin Kumar Kateel tests Covid positive again

ಇವರಿಗೆ ಚುನಾವಣೆ ಗೆಲ್ಲಲು ಧರ್ಮದ ಮೂಲಕ ರಾಜಕೀಯ ಮಾಡುವುದಷ್ಟೇ ಗೊತ್ತು. ಮುಂದಿನ ಲೋಕಸಭೆ ಚುನಾವಣೆ ಗೆಲ್ಲಲು ನಳಿನ್ ಕುಮಾರ್ ಗೆ ಅಭಿವೃದ್ಧಿ ಬಗ್ಗೆ ಹೇಳಲು ಯಾವುದೇ ವಿಚಾರ ಇಲ್ಲ. ಹೆದ್ದಾರಿ, ರೈಲ್ವೇ, ಎನ್ಎಂಪಿಟಿ, ಎಂಆರ್ ಪಿಎಲ್ ಹೀಗೆ ಯಾವುದರಲ್ಲೂ ಜನಪರ ಕೆಲಸ ಮಾಡಿಲ್ಲ. ಹೇಳಿಕೊಳ್ಳಲು ಇವರ ಸಾಧನೆಯೇ ಇಲ್ಲ. ಇದಕ್ಕಾಗಿ ವೇದವ್ಯಾಸ ಕಾಮತ್, ನಳಿನ್ ಕುಮಾರ್ ಸೇರಿ ಬಿಜೆಪಿ ನಾಯಕರು ಶರಣ್ ಪಂಪ್ವೆಲ್ ಮತ್ತು ಗ್ಯಾಂಗನ್ನು ಛೂಬಿಟ್ಟಿದ್ದಾರೆ. ಬಡವರ ರಕ್ತಹರಿಸಿ ಚುನಾವಣೆ ಗೆಲ್ಲಲು ಯೋಜನೆ ಹಾಕಿದ್ದಾರೆ. ಮತ್ತೆ ಧರ್ಮದ ಹೆಸರಲ್ಲಿ ಗುಲ್ಲೆಬ್ಬಿಸಿ ರಕ್ತಪಾತಕ್ಕೆ ನೋಡುತ್ತಿದ್ದಾರೆ. ಆಮೂಲಕ ಚುನಾವಣೆ ಗೆಲ್ಲಲು ಪ್ಲಾನ್ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Complaint issued against sharan pumpwell over Mangaladevi temple Fair to Muslims to Dinesh Gundurao.