ಬ್ರೇಕಿಂಗ್ ನ್ಯೂಸ್
19-10-23 10:36 pm Mangalore Correspondent ಕರಾವಳಿ
ಮಂಗಳೂರು, ಅ.19: ಮಂಗಳಾದೇವಿ ದೇವಸ್ಥಾನದ ಸಂತೆ ವ್ಯಾಪಾರದ ವಿಚಾರದಲ್ಲಿ ಹಿಂದುಗಳನ್ನು ಎತ್ತಿ ಕಟ್ಟಿದ ಆರೋಪದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದರು. ಆದರೆ, ಕೇಸು ದಾಖಲಾದ 24 ಗಂಟೆಯಲ್ಲೇ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಅ.16ರಂದು ಮಂಗಳಾದೇವಿ ದೇವಸ್ಥಾನ ಆವರಣದಲ್ಲಿ ಹಿಂದು ವ್ಯಾಪಾರಿಗಳ ಅಂಗಡಿಗಳಿಗೆ ಕೇಸರಿ ಧ್ವಜ ಕಟ್ಟಿದ್ದ ಶರಣ್ ಪಂಪ್ವೆಲ್ ಮತ್ತು ಬಜರಂಗದಳ ಕಾರ್ಯಕರ್ತರು, ಹಿಂದುಗಳು ಹಿಂದು ವ್ಯಾಪಾರಿಗಳಿಂದಲೇ ಖರೀದಿ, ವಹಿವಾಟು ನಡೆಸಬೇಕು ಎಂದು ಕರೆ ನೀಡಿದ್ದರು. ಇದೇ ರೀತಿ ಮಾಧ್ಯಮಕ್ಕೆ ಹೇಳಿಕೆಯನ್ನೂ ನೀಡಿದ್ದರು. ಮುಜರಾಯಿ ಇಲಾಖೆಯ ದೇವಸ್ಥಾನ ಪರಿಸರದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲವೆಂಬ ನಿಯಮ ಇರುವುದರಿಂದ ಅದೇ ನೀತಿ ಅನುಸರಿಸಿ ಬಜರಂಗದಳ ನಾಯಕರು ಈ ಹೇಳಿಕೆ ನೀಡಿದ್ದರು.
ಆದರೆ ಹಿಂದುಗಳನ್ನು ಧ್ರುವೀಕರಿಸುವ ರೀತಿಯ ಹೇಳಿಕೆ ನೀಡಿದ್ದನ್ನು ಮತ್ತು ಮಂಗಳಾದೇವಿ ದೇವಸ್ಥಾನದ ಸಂತೆ ವ್ಯಾಪಾರದಲ್ಲಿ ಮುಸ್ಲಿಮರನ್ನು ದೂರವಿಡಲು ಯತ್ನಿಸಿದ್ದನ್ನು ಕಮ್ಯುನಿಸ್ಟ್ ಸೇರಿ ಜಾತ್ಯತೀತ ಪಕ್ಷಗಳ ನಾಯಕರು ವಿರೋಧಿಸಿದ್ದರು. ಅ.18ರಂದು ಮಂಗಳೂರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಈ ಬಗ್ಗೆ ದೂರು ಕೊಟ್ಟು ಶರಣ್ ಪಂಪ್ವೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆನಂತರ, ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದ ಸಚಿವರು ಯಾವುದೇ ಕೋಮು ದ್ವೇಷಕ್ಕೆ ಆಸ್ಪದ ನೀಡದಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಂಜೆ ಐದು ಗಂಟೆ ವೇಳೆಗೆ ಪಾಂಡೇಶ್ವರ ಠಾಣೆ ಎಸ್ಐ ಮನೋಹರ್ ನೀಡಿದ ದೂರಿನಂತೆ ಶರಣ್ ಪಂಪ್ವೆಲ್ ಮತ್ತಿತರರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಾಗಿತ್ತು. ಸೆಕ್ಷನ್ 153 ಎ ಅಡಿಯಲ್ಲಿ ಜನ, ವರ್ಗ, ಸಮುದಾಯಗಳ ನಡುವೆ ದ್ವೇಷ ಹಬ್ಬಿಸಿದ್ದಾರೆಂದು ಆರೋಪಿಸಿ ಜಾಮೀನು ರಹಿತ ಕೇಸು ದಾಖಲಿಸಿದ್ದರು. ಈ ಸೆಕ್ಷನ್ ಪ್ರಕಾರ ಆರೋಪಿಗಳನ್ನು ಯಾವುದೇ ಸಂದರ್ಭದಲ್ಲಿ ಅರೆಸ್ಟ್ ಮಾಡುವುದಕ್ಕೆ ಅವಕಾಶ ಇರುತ್ತದೆ.
ಕೇಸು ದಾಖಲಾದ ಕೂಡಲೇ ಬೆಂಗಳೂರಿನಲ್ಲಿ ವಕೀಲರಾಗಿರುವ ಪುತ್ತೂರು ಮೂಲದ ಅರುಣ್ ಶ್ಯಾಮ್ ಹೈಕೋರ್ಟಿನಲ್ಲಿ ಅಪೀಲು ಮಾಡಿದ್ದಾರೆ. ಅ.19ರಂದು ಬೆಳಗ್ಗೆ ಹೈಕೋರ್ಟಿನಲ್ಲಿ ಪಿಟಿಶನ್ ಫೈಲ್ ಆಗಿದ್ದು ಸಂಜೆಯ ವೇಳೆಗೆ ನ್ಯಾಯಮೂರ್ತಿ ಟಿಜಿ ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ಪೀಠ, ಪೊಲೀಸರು ಹಾಕಿದ್ದ ಎಫ್ಐಆರ್ ಗೆ ತಡೆ ವಿಧಿಸಿದೆ. ಅಲ್ಲದೆ, 153ಎ ಸೆಕ್ಷನ್ ಅಡಿ ಕೇಸು ದಾಖಲಿಸಬೇಕಾದ ಅನಿವಾರ್ಯತೆ ಬಗ್ಗೆ ಪೊಲೀಸ್ ಅಧಿಕಾರಿಗಳೇ ಬಂದು ಸ್ಪಷ್ಟನೆ ನೀಡುವಂತೆ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ.
ರಾಜಕೀಯ ಪ್ರೇರಿತವಾಗಿ ಮತ್ತು ಶರಣ್ ಪಂಪ್ವೆಲ್ ಅವರ ಘನತೆ ಕುಂದಿಸುವ ಉದ್ದೇಶದಿಂದ ಈ ಕೇಸು ದಾಖಲಿಸಲಾಗಿದೆ. ಅವರು ಯಾವುದೇ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿಲ್ಲ. ಹೇಳಿಕೆ ಕೊಟ್ಟು ಎರಡು ದಿನ ಕಳೆದಿದ್ದರೂ, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜಾಮೀನು ರಹಿತ ಕೇಸು ದಾಖಲಿಸಿ ಮನೋ ಸ್ಥೈರ್ಯ ಕುಂದಿಸುವ ಯತ್ನ ಮಾಡಿದ್ದಾರೆ. ಈ ರೀತಿ ಎಫ್ಐಆರ್ ದಾಖಲಿಸುವ ಅಗತ್ಯ ಇರಲಿಲ್ಲ. ಹೀಗಾಗಿ ಈ ಕುರಿತ ಎಫ್ಐಆರ್ ವಿಧಿಸಿರುವುದಕ್ಕೆ ತಾತ್ಕಾಲಿಕ ತಡೆ ನೀಡುವಂತೆ ಕೇಳಿಕೊಂಡಿದ್ದರು. ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಹೈಕೋರ್ಟಿಗೆ ಹಾಜರಾಗಿ ಸ್ಪಷ್ಟ ವಿವರಣೆ ನೀಡದೇ ಇದ್ದರೆ, ಎಫ್ಐಆರ್ ರದ್ದಾಗುವ ಸಾಧ್ಯತೆ ಹೆಚ್ಚಿದೆ ಎಂದು ಅರುಣ್ ಶ್ಯಾಮ್ ಹೆಡ್ ಲೈನ್ ಕರ್ನಾಟಕಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Mangalore FIR Filed against Sharan Pumpwel gets stay order in High court over Mangaladevi temple row.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm