ಬ್ರೇಕಿಂಗ್ ನ್ಯೂಸ್
21-10-23 04:54 pm Mangalore Correspondent ಕರಾವಳಿ
ಉಳ್ಳಾಲ, ಅ.21: ಉಳ್ಳಾಲದಲ್ಲಿ ನಿನ್ನೆ ಮಧ್ಯಾಹ್ನ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ ಚಾಕುವಿನಿಂದ ಇರಿದು ಕಾರು, ಲ್ಯಾಪ್ ಟಾಪನ್ನ ದರೋಡೆ ಮಾಡಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ರೌಡಿ ಶೀಟರ್ ಹಸೈನಾರ್ ಎಂಬಾತನನ್ನು ಕಾರು ಸಮೇತ ಲಾಕ್ ಮಾಡಿದ್ದಾರೆ. ತಲೆಮರೆಸಿಕೊಂಡ ಮತ್ತಿಬ್ಬರಿಗಾಗಿ ಶೋಧ ಮುಂದುವರಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಉಳ್ಳಾಲ ದರ್ಗಾದಲ್ಲಿ ನಮಾಝ್ ಮುಗಿಸಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಶಮೀರ್(33) ಎಂಬ ಗುತ್ತಿಗೆದಾರನನ್ನ ಉಳ್ಳಾಲದ ಸುಂದರಿ ಭಾಗ್ ನಿವಾಸಿ ಹಸೈನಾರ್ ತಡೆದು ಪರಿಚಯಿಸಿದ್ದಾನೆ. ಕಟ್ಟಡವೊಂದರ ಕಾಮಗಾರಿ ಇದೆ ಮಾಡುವಿರಾ ಎಂದು ಶಮೀರನ್ನ ಯಾಮಾರಿಸಿದ ಹಸೈನಾರ್ ಗುತ್ತಿಗೆದಾರನ ಕಾರನ್ನೇರಿ ಅಬ್ಬಕ್ಕ ಸರ್ಕಲ್ ಕಡೆ ತೆರಳಿದ್ದಾನೆ. ಅಬ್ಬಕ್ಕ ಸರ್ಕಲ್ ಬಳಿ ಹಸೈನಾರನ ಮತ್ತಿಬ್ಬರು ಸಹಚರರಾದ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಎಂಬಿಬ್ಬರು ಕಾರು ಹತ್ತಿದ್ದಾರೆ. ಉಳ್ಳಾಲದ ಬಸ್ತಿಪಡ್ಪು ಎಂಬಲ್ಲಿ ಕಾರು ತಲುಪುತ್ತಿದ್ದಂತೆ ಶಮೀರ್ ಕಾಲಿಗೆ ಆರೋಪಿಗಳು ಚಾಕುವಿನಿಂದ ಇರಿದು ಹಲ್ಲೆಗೈದು ಹಣ ಸಿಗದಾಗ ಕಾರು, ಲ್ಯಾಪ್ ಟಾಪನ್ನು ದರೋಡೆಗೈದಿದ್ದಾರೆ. ರೌಡಿಗಳಿಂದ ತಪ್ಪಿಸಿದ ಶಮೀರ್ ಉಳ್ಳಾಲ ಠಾಣೆಗೆ ಬಂದು ದೂರು ನೀಡಿದ್ದಾರೆ.

ಎಸಿಪಿ ಧನ್ಯಾ ನಾಯಕ್ ಸೂಚನೆಯಂತೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರೌಡಿ ಹಸೈನಾರನ್ನ ಮಧ್ಯರಾತ್ರಿಯೇ ಬಂಧಿಸಿದೆ. ದರೋಡೆ ಮಾಡಿದ ಕಾರು, ಲ್ಯಾಪ್ ಟಾಪ್, ಕೃತ್ಯಕ್ಕೆ ಬಳಸಿದ ಚಾಕುವನ್ನ ದಸ್ತಗಿರಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ರೌಡಿ ಶೀಟರ್ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
Mangalore PWD engineer stabbed, car laptop robbed, Ullal police quick action, accused arrested within hours.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm