ಬ್ರೇಕಿಂಗ್ ನ್ಯೂಸ್
21-10-23 08:00 pm Mangalore Correspondent ಕರಾವಳಿ
ಉಳ್ಳಾಲ, ಅ.21: ರಾ.ಹೆ. 66 ರ ತೊಕ್ಕೊಟ್ಟಿನಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಫ್ಲೈಓವರ್ ಐದು ವರ್ಷದೊಳಗೆ ಬಿದ್ದು ಹೋಗಲಿದ್ದು, ಇಂತಹ ಅವೈಜ್ಞಾನಿಕ ಫ್ಲೈ ಓವರನ್ನ ಕೆಡವಿ ಚತುಷ್ಪಥ ರಸ್ತೆ ನಿರ್ಮಿಸುವುದರ ಜೊತೆಗೆ ಎರಡು ತಿಂಗಳೊಳಗೆ ಹೆದ್ದಾರಿ ದುರವಸ್ಥೆಯನ್ನ ಸರಿಪಡಿಸದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕೋಶಾಧಿಕಾರಿ ಸಲಾಂ ಸಿ.ಹೆಚ್ ಎಚ್ಚರಿಸಿದ್ದಾರೆ.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ತೊಕ್ಕೊಟ್ಟಿನ ಫ್ಲೈಓವರ್ ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ಅದಕ್ಕೆ ತೇಪೆ ಹಚ್ಚುವ ಕಾರ್ಯ ನಡೆದಿದೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಇಂತಹ ಫ್ಲೈ ಓವರ್ ಗಳಿಂದ ವಾಹನ ಸವಾರರು, ಜನಸಾಮಾನ್ಯರು ದಿನ ನಿತ್ಯವೂ ಕಿರಿ, ಕಿರಿ ಅನುಭವಿಸುತ್ತಿರುವುದಲ್ಲದೆ ಅಪಘಾತಗಳು ಹೆಚ್ಚುತ್ತಿವೆ. ಐದು ವರ್ಷಗಳಲ್ಲಿ ಈ ಫ್ಲೈ ಓವರ್ ಬಿದ್ದು ಹೋಗುವ ಸಾಧ್ಯತೆಗಳಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಪ್ಲೈಓವರನ್ನ ಕೆಡವಿ ಸುಸಜ್ಜಿತ ಚತುಷ್ಪಥ ರಸ್ತೆ ನಿರ್ಮಿಸಬೇಕೆಂದರು.


ಈ ಹೆದ್ದಾರಿಯಲ್ಲಿ ಸರಿಯಾದ ಸರ್ವಿಸ್ ರಸ್ತೆಗಳೇ ಇಲ್ಲ. ಸರ್ವಿಸ್ ರಸ್ತೆ ನಿರ್ಮಿಸಲು ವಾಣಿಜ್ಯ ಮಳಿಗೆ ಮಾಫಿಯಗಳು ಬಿಡುತ್ತಿಲ್ಲವೆಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ನಮ್ಮಲ್ಲಿ ಅಲವತ್ತು ತೋಡಿಕೊಂಡಿದ್ದಾರೆ. ಪಂಪ್ವೆಲ್ ನಿಂದ ತೊಕ್ಕೊಟ್ಟು ವರೆಗಿನ ಹೆದ್ದಾರಿಯಲ್ಲಿ ಶಾಲಾ ಮಕ್ಕಳನ್ನು ರಸ್ತೆ ದಾಟಿಸಲು ಪೊಲೀಸರೇ ನಿಲ್ಲುವಂತಹ ಸ್ಥಿತಿಯಿದೆ. ಅವೈಜ್ಞಾನಿಕ ಹೆದ್ದಾರಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನ ನೀಡದೆ ತಲಪಾಡಿ ಟೋಲ್ ಪ್ಲಾಝಾದಲ್ಲಿ ಮಾತ್ರ ವಾಹನ ಸವಾರರಿಂದ ಸುಂಕ ವಸೂಲಿ ಮಾಡುತ್ತಿರುವುದು ಖಂಡನೀಯ.
ಕೇರಳದಲ್ಲಿ ಹೆದ್ದಾರಿ ಎಷ್ಟೊಂದು ಸುಸಜ್ಜಿತವಾಗಿ ನಿರ್ಮಾಣಗೊಳ್ಳುತ್ತಿದೆ. ಇದು ನಮ್ಮ ಸಂಸದರು ಮತ್ತು ವಿದಾನಸಭಾಧ್ಯಕ್ಷರಿಗೆ ಕಂಡಿಲ್ಲವೇ..? ಅಂತಹ ಹೆದ್ದಾರಿ ಕಾಮಗಾರಿಗಳನ್ನ ಇಲ್ಲಿ ನಡೆಸಲು ಅಸಾಧ್ಯವೇ ಎಂದು ಪ್ರಶ್ನಿಸಿದರು. ಎರಡು ತಿಂಗಳೊಳಗೆ ಹೆದ್ದಾರಿಗೆ ಸಮರ್ಪಕ ಮೂಲಭೂತ ಸೌಕರ್ಯಗಳನ್ನ ಒದಗಿಸದಿದ್ದಲ್ಲಿ ನಾವು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಪಕ್ಷದ ಪ್ರಮುಖರಾದ ಇಸ್ಮಾಯಿಲ್ ಸಯಾಫ್, ಹುಸೈನ್ ತೊಕ್ಕೊಟ್ಟು, ಮಹಮ್ಮದ್ ಸೈಫ್, ಅಶ್ರಫ್ ಅಝೀಝ್ ಅಲೇಕಳ ಉಪಸ್ಥಿತರಿದ್ದರು.
Mangalore Thokottu flyover will collapse in other 5 years says Welfare Party of India.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm