ಬ್ರೇಕಿಂಗ್ ನ್ಯೂಸ್
22-10-23 02:33 pm Mangaluru Correspodent ಕರಾವಳಿ
ಬೆಳ್ತಂಗಡಿ, ಅ.22: ಯುದ್ಧ ಪೀಡಿತ ಇಸ್ರೇಲ್ ದೇಶದಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದೇವಸ್ಥಾನ ಒಂದರಲ್ಲಿ ವಿಶೇಷ ಪೂಜೆ ನಡೆಸಿದ್ದು ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಇಸ್ರೇಲ್ ದೇಶದಲ್ಲಿರುವ ಭಾರತೀಯರು ಮತ್ತು ಕರಾವಳಿಯ ಸಾವಿರಾರು ಮಂದಿಯ ಜೀವಕ್ಕೆ ವಿಘ್ನ ಬಾರದಂತೆ ಬೆಳ್ತಂಗಡಿ ತಾಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಸೇರಿ ನವರಾತ್ರಿ ರಂಗಪೂಜೆ ನೆರವೇರಿಸಿದ್ದಾರೆ. ದೇವಸ್ಥಾನದಲ್ಲಿ ದೀಪ ಹಚ್ಚಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮರೋಡಿ ನಾರಾಯಣ ಪೂಜಾರಿ ಮತ್ತು ಕುಟುಂಬಸ್ಥರು ಸೇರಿ ರಂಗಪೂಜೆ ಮಾಡಿದ್ದಾರೆ.



ಇಸ್ರೇಲ್ ದೇಶದಲ್ಲಿ ಮರೋಡಿ ಗ್ರಾಮದ ಹಲವಾರು ಮಂದಿಯಿದ್ದು ಊರಿನ ಜನರು ಕ್ಷೇಮವಾಗಿ ಮರಳಿ ಬರಲೆಂದು ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ್ದಾರೆ. ನಮ್ಮೂರಿನ ಅನೇಕ ಜನರು ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಇಸ್ರೇಲ್ ನಲ್ಲಿ ಯುದ್ಧ ನಿಲ್ಲಬೇಕು, ಸಾವು ನೋವು ಕಡಿಮೆ ಆಗಬೇಕು. ಅಮಾಯಕರು ಬಲಿಯಾಗೋದು ನಿಲ್ಲಬೇಕು ಎಂದು ಊರವರು ಸೇರಿ ರಂಗ ಪೂಜೆ ಮಾಡಿದ್ದೇವೆ. ನಮ್ಮೂರಿನ ಹಲವರು ಇಸ್ರೇಲ್ ನಲ್ಲಿದ್ದು ತಾಯ್ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲಿ ದುಡಿದು ನಮ್ಮ ದೇಶದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಹಾಗಾಗಿ ಆ ದೇಶದಲ್ಲಿ ಯುದ್ಧ ನಿಂತರೆ ನಮ್ಮ ದೇಶಕ್ಕೂ ಒಳ್ಳೇದು, ನಮ್ಮ ಊರಿಗೂ ಒಳ್ಳೇದು.
ನಾವೂ ಇಸ್ರೇಲ್ ನಲ್ಲಿ ದುಡಿದಿದ್ದೇವೆ, ನಮಗೂ ಆ ದೇಶದ ಮೇಲೆ ಅಭಿಮಾನವಿದೆ. ಆ ಕಾರಣಕ್ಕೋಸ್ಕರ ಇಸ್ರೇಲ್ ನಲ್ಲಿ ಶಾಂತಿ ನೆಲೆಸಲು ದೇವರಿಗೆ ಪೂಜೆ ನೆರವೇರಿಸಿ ಪ್ರಾರ್ಥಿಸಿದ್ದೇವೆ ಎಂದು ಮರೋಡಿ ನಿವಾಸಿ ನಾರಾಯಣ ಪೂಜಾರಿ ಉಚ್ಚೂರು ಹೇಳಿದ್ದಾರೆ
Mangalore Villagers offer special pooja and prayers at a temple in Belthangady for peace with Israel.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm