ಬ್ರೇಕಿಂಗ್ ನ್ಯೂಸ್
25-10-23 11:06 am Mangalore Correspondent ಕರಾವಳಿ
Photo credits : Surya Prakash - Drone Photos
ಮಂಗಳೂರು, ಅ.25: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜಿಸಲ್ಪಟ್ಟ ನವದುರ್ಗೆಯರು ಹಾಗೂ ಶಾರದಾ ದೇವಿಯ ಅದ್ದೂರಿ ವಿಸರ್ಜನಾ ಮೆರವಣಿಗೆ 'ಮಂಗಳೂರು ದಸರಾ' ಶೋಭಾಯಾತ್ರೆ ಲಕ್ಷಾಂತರ ಜನರ ಸಮ್ಮುಖದಲ್ಲಿ ವೈಭವಪೂರ್ಣವಾಗಿ ನೆರವೇರಿದೆ.
ವಿಜಯದಶಮಿಯ ಮಂಗಳವಾರ ಸಂಜೆ ಐದು ಗಂಟೆಗೆ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ದೇವಸ್ಥಾನದಿಂದ ಹೊರತಂದು ಅಲಂಕೃತ ಟ್ಯಾಬ್ಲೋಗಳಲ್ಲಿ ಕೂರಿಸಿದ್ದು ಆನಂತರ ಸಂಸ್ಕೃತಿ ಬಿಂಬಿಸುವ ಜನಪದ ಪ್ರಕಾರಗಳ ಜೊತೆ ಮೆರವಣಿಗೆ ಆರಂಭಗೊಂಡಿತ್ತು. ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರೇ ಸ್ವತಃ ಶಾರದಾ ಮಾತೆಗೆ ಆರತಿ ಎತ್ತಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಳಿಕ ದೇವರ ಮೂರ್ತಿಗಳನ್ನು ತಯಾರಿಸಿದ ಕುಬೇರ, ಮಂಟಪಗಳ ರಚನೆ ಮಾಡಿದ ಚಂದ್ರಶೇಖರ ಸುವರ್ಣ, ಶಾರದೆಯ ಶೃಂಗಾರ ಮಾಡಿದ ರಾಧಿಕಾ ಭಟ್ ಸೇರಿದಂತೆ ವೈಭವಕ್ಕೆ ಸಾಕ್ಷಿಯಾದ ಹಲವರನ್ನು ಸನ್ಮಾನಿಸಲಾಯಿತು.
ಸ್ತಬ್ಧಚಿತ್ರಗಳ ಎಡವಟ್ಟು, ಮಾಯವಾದ ಶಿಸ್ತು
ಈ ಹಿಂದೆಲ್ಲ ನವದುರ್ಗೆಯರು ಮತ್ತು ಶಾರದೆಯ ವಿಗ್ರಹಗಳ ಮುಂದಿನಿಂದ ಸ್ತಬ್ಧಚಿತ್ರಗಳು ಮೆರವಣಿಗೆ ಬರುತ್ತಿದ್ದವು. ಆದರೆ ಕಳೆದ ವರ್ಷ ಮತ್ತು ಈ ಬಾರಿಯೂ ಸ್ತಬ್ಧಚಿತ್ರಗಳು ಮೆರವಣಿಗೆ ಸೇರುವಾಗಲೇ ವಿಳಂಬವಾಗಿದ್ದರಿಂದ ದೇವಿಯರ ವಿಗ್ರಹಗಳು ಮುಂದಿನಿಂದ ಸಾಗಿಬಂತು. 8 ಗಂಟೆ ಸುಮಾರಿಗೆ ಮಣ್ಣಗುಡ್ಡ ಮತ್ತು ಲೇಡಿಹಿಲ್ ನಲ್ಲಿ ಟ್ಯಾಬ್ಲೋಗಳು ಬಂದು ಸೇರಿದ್ದವು. ಆದರೆ, ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಿಂದಾಗಿ ಮುಂದೆ ಹೋಗಲಾಗದೆ ರಾತ್ರಿ 10 ಗಂಟೆ ಕಳೆದರೂ ಸ್ತಬ್ಧಚಿತ್ರಗಳು ಅಲ್ಲಿಯೇ ಬಾಕಿಯಾಗಿದ್ದವು. ರಾತ್ರಿ 12ರ ವೇಳೆಗೆ ದೇವಿಯರ ವಿಗ್ರಹಗಳು ಲಾಲ್ ಬಾಗ್ ತಲುಪಿದರೂ, ಟ್ಯಾಬ್ಲೋಗಳು ಹಿಂದೆ ಉಳಿಯುವಂತಾಗಿತ್ತು. ಇದರಿಂದಾಗಿ ಸಂಜೆ ಆರು ಗಂಟೆಯಿಂದಲೇ ಲಾಲ್ ಬಾಗ್ ನಿಂದ ಪಿವಿಎಸ್ ರಸ್ತೆ ಉದ್ದಕ್ಕೂ ನಿಂತಿದ್ದ ಜನರಿಗೆ ಟ್ಯಾಬ್ಲೋ ದರ್ಶನ ಆಗಲಿಲ್ಲ.
ಹುಲಿ ವೇಷದ ಟ್ಯಾಬ್ಲೋ ತಂಡಗಳ ಪ್ರತಿಷ್ಠೆ, ಮೇಲಾಟದಿಂದಾಗಿ ಒಟ್ಟು ಟ್ಯಾಬ್ಲೋಗಳ ಸಂಚಾರವೇ ವಿಳಂಬ ಆಗಿತ್ತು. ರಾತ್ರಿ 12 ಕಳೆದರೂ ಇತರೇ ಸ್ತಬ್ಧಚಿತ್ರಗಳ ಮೆರವಣಿಗೆ ಲಾಲ್ ಬಾಗ್ ತಲುಪಲಿಲ್ಲ. ಹೆಚ್ಚಿನ ಟ್ಯಾಬ್ಲೋಗಳು ಲೇಡಿಹಿಲ್ ಬ್ಲಾಕ್ ನಲ್ಲೇ ಬಾಕಿಯಾಗಿದ್ದವು. ಇದರಿಂದಾಗಿ ರಸ್ತೆಯ ಉದ್ದಕ್ಕೂ ನಿಂತಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿರಾಶರಾಗಿದ್ದು ಶಾರದೆಯ ದರ್ಶನ ಆಗುತ್ತಲೇ ನಿರ್ಗಮಿಸಿದರು. ಮೆರವಣಿಗೆಯಲ್ಲಿ ಹಿಂದೆ ಇದ್ದ ಶಿಸ್ತು ಮಾಯವಾಗಿದ್ದು ಭಜನಾ ತಂಡಗಳು, ಶಿಸ್ತಿನ ನಡಿಗೆಯ ಕೊರತೆ ಎದ್ದು ಕಾಣುತ್ತಿತ್ತು. ಜನ ಈ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೇರೆ ಬೇರೆ ಕಡೆಯಿಂದ ಬಂದಿದ್ದ ಲಕ್ಷಾಂತರ ಸಂಖ್ಯೆಯಲ್ಲಿದ್ದ ಜನರು ಒಟ್ಟು ಮೆರವಣಿಗೆಯ ವೈಭವಕ್ಕೆ ಸಾಕ್ಷಿಯಾದರು.
ನವದುರ್ಗೆಯರು ಮುಂದೆ ಸಾಗಿದ್ದರಿಂದಲೋ ಏನೋ, ಬೆಳಗ್ಗೆ ಬೇಗನೇ ಮೆರವಣಿಗೆ ಮರಳಿ ಕುದ್ರೋಳಿ ಸೇರಿತ್ತು. ಕ್ಷೇತ್ರದ ಪುಷ್ಕರಣಿಯಲ್ಲಿ ಒಂದೊಂದೇ ವಿಗ್ರಹಗಳ ವಿಸರ್ಜನೆ ನಡೆಯಿತು. ಎಂಟು ಗಂಟೆ ವೇಳೆಗೆ ಶಾರದೆಯ ಮೃಣ್ಮಯ ಮೂರ್ತಿ ನಿಧಾನಕ್ಕೆ ಜಲಸ್ತಂಭನಗೊಳ್ಳುತ್ತಲೇ ಸೇರಿದ್ದ ಜನರು ಭಾವಪರವಶರಾದರು.
Mangalore Dasara 2023 valedictory concludes with spectacular procession in city from Kudroli temple. Thousands of enthusiastic spectators gathered to witness the vibrant Mangaluru Dasara procession.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm