ಬ್ರೇಕಿಂಗ್ ನ್ಯೂಸ್
25-10-23 12:34 pm Mangalore Correspondent ಕರಾವಳಿ
ಮಂಗಳೂರು, ಅ.25: ಕುದ್ರೋಳಿ ಕ್ಷೇತ್ರದ ದಸರಾ ಮೆರವಣಿಗೆಯಲ್ಲಿ ಧರ್ಮಸ್ಥಳದ ಸೌಜನ್ಯಾ ಫೋಟೊ ಹಾಕಿದ್ದ ಟ್ಯಾಬ್ಲೋವನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಸಂಚಾರಕ್ಕೆ ಅವಕಾಶ ನೀಡದೆ ಹಿಂದಕ್ಕೆ ಕಳಿಸಿದ ಪ್ರಸಂಗ ನಡೆದಿದೆ.
ದೇವಿ ಮಹಾತ್ಮೆ ಕಥಾನಕ ಬಿಂಬಿಸುವ ಚಿತ್ರಣದ ಸ್ತಬ್ಧಚಿತ್ರವನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ನೇತೃತ್ವದಲ್ಲಿ ಮಾಡಲಾಗಿತ್ತು. ಟ್ಯಾಬ್ಲೋ ಎದುರಿನಲ್ಲಿ ಸೌಜನ್ಯಾ ಫೋಟೊ ಹಾಕಲಾಗಿತ್ತು. ಆದರೆ ಟ್ಯಾಬ್ಲೋ ರೆಡಿಯಾಗಿ ಬರುತ್ತಿದ್ದಂತೆ ಉರ್ವಾದಲ್ಲಿಯೇ ಪೊಲೀಸರು ಅಡ್ಡಹಾಕಿದ್ದಾರೆ. ಕೇಳಿದರೆ, ಕ್ಷೇತ್ರದ ಆಡಳಿತ ಅವಕಾಶ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸನ್ನ ರವಿ ಮತ್ತು ಜೊತೆಗಿದ್ದವರು ಕ್ಷೇತ್ರದ ಕಚೇರಿಗೆ ತೆರಳಿದಾಗ, ಅಲ್ಲಿದ್ದ ಸಮಿತಿ ಪದಾಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೆ ನುಣುಚಿಕೊಂಡಿದ್ದಾರೆ. ಹರಿಕೃಷ್ಣ ಬಂಟ್ವಾಳ್ ಅವರು, ಇಲ್ಲಿ ರಾಜಕೀಯ ಮಾಡಲು ಅವಕಾಶ ಇಲ್ಲ ಎಂದು ಹೇಳಿ ನಿರಾಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಸನ್ನ ರವಿ, ನಮಗೆ ಪೊಲೀಸರು ಅವಕಾಶ ನಿರಾಕರಿಸಿಲ್ಲ. ಎಸಿಪಿಯವರು ನಮಗೆ ಪರವಾನಗಿ ನೀಡಿದ್ದರು. ಇವರೇ ಉದ್ದೇಶಪೂರ್ವಕ ಅಡ್ಡ ಹಾಕಿದ್ದಾರೆ. ಇವರಿಗೆ ಸೌಜನ್ಯಾ ಫೋಟೊ ಹಾಕಿದ ಮಾತ್ರಕ್ಕೆ ಏನು ತೊಂದರೆ ಆಗತ್ತೆ. ಅದರಲ್ಲಿ ಯಾವ ರಾಜಕೀಯ ಇದೆ. ಯಾರ್ಯಾರದ್ದೋ ಪುಂಡು ಪೋಕರಿಗಳ, ಸ್ಪಾನ್ಸರ್ ಕೊಟ್ಟವರ ಫೋಟೊ ಹಾಕುತ್ತಾರೆ. ನವರಾತ್ರಿ ಸಂದರ್ಭದಲ್ಲಿ ಇವರು ಸೌಜನ್ಯಾಗೆ ದ್ರೋಹ ಮಾಡಿದ್ದಾರೆ. ಅತ್ಯಾಚಾರಿಗಳ ಪರ ನಿಂತಿದ್ದಾರೆ. ಇವರಿಗೆ ಆ ಶಿವನೇ ಮುನಿಯುತ್ತಾನೆ. ಜನಾರ್ದನ ಪೂಜಾರಿ ಹಿಂದಿನಂತೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರು ಒಂದು ಹಂತದಲ್ಲಿ ಸೌಜನ್ಯಾ ಹೆತ್ತವರು, ಪ್ರತಿಭಟನೆಯ ಫೋಟೊ ಮುಚ್ಚುವಂತೆ ಹೇಳಿದ್ದರು. ಅದಕ್ಕೆ ಒಪ್ಪಿದ್ದ ಟ್ಯಾಬ್ಲೋದವರು ಫೋಟೊ ಕಾಣದಂತೆ ಪರದೆ ಮುಚ್ಚಿ ಹೋಗಲು ಮುಂದಾಗಿದ್ದರು. ಆದರೆ ಕೊನೆಯಲ್ಲಿ ಟ್ಯಾಬ್ಲೋ ಸಂಚಾರಕ್ಕೆ ಅವಕಾಶವನ್ನೇ ನೀಡಲಿಲ್ಲ.
Kudroli dasara 2023, Soujanya banner in tablo, stopped by police, prasanna ravi slams leaders in Mangalore.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm