ಬ್ರೇಕಿಂಗ್ ನ್ಯೂಸ್
26-10-23 10:11 pm Mangalore Correspondent ಕರಾವಳಿ
ಮಂಗಳೂರು, ಅ.26: ಚಿಕ್ಕಮಗಳೂರಿನ ದತ್ತಪೀಠ ಹಿಂದುಗಳದ್ದೆಂದು ಸಾಬೀತಾಗಿದೆ. 19 ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೋರ್ಟ್ ದತ್ತಪೀಠವನ್ನು ಹಿಂದುಗಳಿಗೆ ನೀಡಲು ಒಪ್ಪಿಗೆ ನೀಡಿದೆ. ದತ್ತಪೀಠವನ್ನು ಮುಜರಾಯಿ ಇಲಾಖೆಗೆ ನೀಡಿದ್ದರೂ, ಒಳಗಡೆ ಇರುವ ಗೋರಿಗಳನ್ನು ತೆರವು ಮಾಡಿಲ್ಲ. ಗೋರಿಗಳ ಮೇಲೆ ಹಾಕಿದ್ದ ಹಸಿರು ಬಟ್ಟೆ ತೆರವಾಗಿದೆ. ಅದನ್ನು ಹಿಂದುಗಳ ಪೀಠ ಅಂತ ಸರಕಾರ ಘೋಷಣೆ ಮಾಡಬೇಕು. ಜೊತೆಗೆ, ಅಲ್ಲಿ ಯಾವುದೇ ಉರೂಸ್ ನಡೆಸಲು ಅವಕಾಶ ನೀಡಕೂಡದು ಎಂದು ಶ್ರೀರಾಮ ಸೇನೆ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಗುರು ದತ್ತಾತ್ರೇಯರು, ಅವರ ತಂದೆಯಾದ ಅತ್ರಿ ಮಹರ್ಷಿ ಮತ್ತು ತಾಯಿ ಅನಸೂಯ ದೇವಿ ತಪಸ್ಸುಗೈದ ತಪೋಭೂಮಿ ದತ್ತಪೀಠ. ಅಲ್ಲಿನ ಗುಹೆಗಳಲ್ಲಿ ಹರಿಯುವ ನೀರು, ಅಲ್ಲಿನ ಮಣ್ಣು ಪುಣ್ಯಪ್ರದವಾಗಿದ್ದು, ಎಷ್ಟೋ ಜನರ ರೋಗ ವಾಸಿ ಮಾಡಿದ ಐತಿಹ್ಯ ಇದೆ. ಹಿಂದಿನ ಕಾಲದಲ್ಲಿ ಕೆಳದಿ ಚೆನ್ನಮ್ಮ, ಬಾಳೆಹೊನ್ನೂರು, ಮೈಸೂರು ಅರಸರು ದತ್ತಪೀಠವನ್ನು ಪುಣ್ಯಪೀಠವೆಂದು ಆರಾಧಿಸಿ, ಪೂಜಿಸಿ ದಾನ ದತ್ತಿ ನೀಡಿದ್ದಾರೆ. ದತ್ತಿಗಳನ್ನು ನೀಡಿದ್ದಕ್ಕಾಗಿಯೇ ಸರ್ಕಾರಿ ದಾಖಲೆಗಳಲ್ಲಿ ಇನಾಮ್ ದತ್ತಾತ್ರೇಯ ಪೀಠ ಎಂದೇ ಉಲ್ಲೇಖ ಇದೆ. ಇಂತಹ ಪವಿತ್ರ ಸ್ಥಳವನ್ನು ಇಸ್ಲಾಮಿಕ್ ಮತಾಂಧರು ಅತಿಕ್ರಮಿಸಿಕೊಂಡು ಬಾಬುಬುಡನ್ ಗಿರಿ ದರ್ಗಾ ಎಂದು ಸುಳ್ಳು ಹೇಳಿ ಹಿಂದುಗಳ ಭಾವನೆಗಳಿಗೆ ಕಂಟಕ ತಂದಿದ್ದರು.
ಇದರ ಬಗ್ಗೆ ಸತತ 19 ವರ್ಷಗಳಲ್ಲಿ ಹೋರಾಟ, ಜನಾಂದೋಲನ ನಡೆಸಿದ್ದರಿಂದ ನ್ಯಾಯಾಲಯದಲ್ಲೂ ಹಿಂದುಗಳ ದತ್ತ ಪೀಠ ಎನ್ನುವುದು ಸಾಬೀತಾಗಿದೆ. ಅಲ್ಲಿ ನಿರ್ಮಿಸಿದ್ದ ಗೋರಿಗಳ ಹಸಿರು ಬಟ್ಟೆ, ಹಸಿರು ಧ್ವಜ ತೆರವು ಮಾಡಲಾಗಿದೆ. ಗೋಹತ್ಯೆ, ಗೋಮಾಂಸ ಭಕ್ಷಣೆಗೆ ನಿರ್ಬಂಧ ಹೇರಲಾಗಿದೆ. ನಮಾಜ್, ಮೈಕ್ ನಲ್ಲಿ ಆಜಾನ್ ಕೂಗುವುದು ಬಂದ್ ಆಗಿದೆ. ಎರಡು ವರ್ಷಗಳ ಹಿಂದೆ ಕೋರ್ಟ್ ಆದೇಶದೊಂದಿಗೆ ಹಿಂದು ಅರ್ಚಕರ ನೇಮಕವಾಗಿದ್ದು ಪೂಜೆ, ಪುನಸ್ಕಾರ ಆರಂಭವಾಗಿದೆ. ಆದರೆ ದತ್ತಪೀಠದ ಗುಹೆಗಳ ಒಳಗೆ ಅಕ್ರಮವಾಗಿ ನಿರ್ಮಿಸಿರುವ ಗೋರಿಗಳನ್ನು ತೆರವು ತೆರವು ಮಾಡಿಲ್ಲ. ಅದನ್ನು ಕೂಡಲೇ ತೆರವು ಮಾಡಬೇಕು ಎಂದು ಆನಂದ ಶೆಟ್ಟಿ ಅಡ್ಯಾರ್ ಒತ್ತಾಯಿಸಿದರು.
ಸರಕಾರಿ ದಾಖಲೆಗಳ ಪ್ರಕಾರ, ಅಲ್ಲಿಂದ 14 ಕಿಮೀ ದೂರದ ನಾಗೇನಹಳ್ಳಿ ಎಂಬಲ್ಲಿಗೆ ಬಾಬಾಬುಡನ್ ಗಿರಿ ಸ್ಥಳಾಂತರ ಆಗಬೇಕು. ದತ್ತಪೀಠ ಹಿಂದುಗಳದ್ದೆಂದು ಅಧಿಕೃತವಾಗಿ ಘೋಷಣೆ ಆಗಬೇಕು. ದತ್ತಪೀಠ ಹಿಂದುಗಳ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಅಲ್ಲಿ ಅನಧಿಕೃತವಾಗಿ ಉರೂಸ್ ನಡೆಸುವುದಕ್ಕೆ ಅವಕಾಶ ನೀಡಬಾರದು. ಅಲ್ಲಿಗೆ ನಿತ್ಯ ಬರುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ, ಯಾತ್ರಿ ನಿವಾಸ, ಹೋಮ, ಹವನ ವ್ಯವಸ್ಥೆ ಮಾಡಬೇಕು. ಸಾಧು, ಸಂತರಿಗೆ ದರ್ಶನಕ್ಕೆ ಮುಕ್ತ ಅವಕಾಶ ನೀಡಬೇಕು. ಈ ಬಾರಿ ಅ.30ರಂದು ದತ್ತ ಮಾಲಾಧಾರಣೆ ಮಾಡಿ ದತ್ತಪೀಠಕ್ಕೆ ಹೊರಡಲಿದ್ದು, ನ.2ರಂದು ದತ್ತ ದೀಪೋತ್ಸವ ನಡೆಯಲಿದೆ. ನ.4ರಂದು ಪಡಿ ಸಂಗ್ರಹ, 5ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ, ಧರ್ಮ ಸಭೆ, ದತ್ತಪೀಠದಲ್ಲಿ ಪಾದುಕೆ ದರ್ಶನ, ಹೋಮ ಹವನ, ಪ್ರಸಾದ ವಿತರಣೆಯನ್ನು ಶ್ರೀರಾಮ ಸೇನೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಧುಸೂದನ್ ಉರ್ವಾಸ್ಟೋರ್, ಅರಣ್ ಕದ್ರಿ, ಯೋಗೀಶ್ ಪರಂಗಿಪೇಟೆ, ನವೀನ್ ಕೋಡಿಕಲ್, ಜಯೇಶ್ ಸಚ್ಚು, ರಾಜೇಶ್ ಉರ್ವಾಸ್ಟೋರ್ ಉಪಸ್ಥಿತರಿದ್ದರು.
The Dattapeetha in Chikkamagaluru has been proved to be a Hindu. After 19 years of continuous struggle, the court has agreed to hand over the dattapeetha to Hindus. Though the dattapeetha has been given to the Muzrai department, the graves inside have not been cleared.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm