Fake WhatsApp, Mangalore commissioner Anupam Agrawal: ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲೇ ಫೇಕ್ ವಾಟ್ಸಪ್, ಹಣ ಕೇಳಿದ ಆಗಂತುಕರು, ಅಲರ್ಟ್ ಇರುವಂತೆ ಅನುಪಮ್ ಅಗರ್ವಾಲ್ ಮನವಿ 

27-10-23 01:05 pm       Mangalore Correspondent   ಕರಾವಳಿ

ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಫೋಟೊ ಬಳಸಿ, ನಕಲಿ ವಾಟ್ಸಪ್ ಐಡಿ ಸೃಷ್ಟಿಸಿ ಹಣ ಕೇಳುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಇಂತಹ ಮನವಿಗಳ ಬಗ್ಗೆ ಎಚ್ಚರ ಇರುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

ಮಂಗಳೂರು, ಅ.27: ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಫೋಟೊ ಬಳಸಿ, ನಕಲಿ ವಾಟ್ಸಪ್ ಐಡಿ ಸೃಷ್ಟಿಸಿ ಹಣ ಕೇಳುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಇಂತಹ ಮನವಿಗಳ ಬಗ್ಗೆ ಎಚ್ಚರ ಇರುವಂತೆ ಆಯುಕ್ತರು ಮನವಿ ಮಾಡಿದ್ದಾರೆ. 

ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಹತ್ತಿರದ ಒಡನಾಟ ಇರುವವರಿಗೆ ವಾಟ್ಸಪ್ ನಲ್ಲಿ ಇಂತಹ ಮೆಸೇಜುಗಳು ಬಂದಿದ್ದವು.‌ ನಾನು ಹಾಸ್ಪಿಟಲ್ ನಲ್ಲಿದ್ದೇನೆ. ನನ್ನ ಯುಪಿಐ ವರ್ಕಿಂಗ್ ಇಲ್ಲ. ಸ್ವಲ್ಪ ಹಣ ಬೇಕಿತ್ತು. ಕಳಿಸಿದರೆ ಒಂದು ಗಂಟೆಯಲ್ಲಿ ಹಿಂತಿರುಗಿಸುತ್ತೇನೆ ಎಂಬುದಾಗಿ ಕಮಿಷನರ್ ಅವರ ಸಹೋದ್ಯೋಗಿ ಒಬ್ಬರಿಗೆ ಮೆಸೇಜು ಬಂದಿತ್ತು. ಈ ಬಗ್ಗೆ ಕಮಿಷನರ್ ಅವರಿಗೆ ತಿಳಿಸುತ್ತಿದ್ದಂತೆ ಅಲರ್ಟ್ ಆಗಿದ್ದಾರೆ. 

ಈ ಬಗ್ಗೆ ಕಮಿಷನರ್ ಬಳಿ ಪ್ರತಿಕ್ರಿಯೆ ಕೇಳಿದಾಗ, ಯಾರೋ ಫೇಕ್ ನಂಬರಲ್ಲಿ ನನ್ನ ಫೋಟೊ ಹಾಕಿ ಈ ರೀತಿ ಮಾಡಿದ್ದಾರೆ. ರಾಜಸ್ಥಾನ ಮೂಲದ ಭರತ್ ಪುರದವರು ಎನ್ನುವ ಮಾಹಿತಿ ಇದೆ. ಸೈಬರ್ ಠಾಣೆಯಲ್ಲಿ ಕೇಸು ದಾಖಲಿಸಿ ತನಿಖೆ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಹಿಂದೆಲ್ಲ ಫೇಸ್ಬುಕ್ ನಕಲಿ ಐಡಿ ಸೃಷ್ಟಿಸಿ ಹಣ ಕೇಳುವುದು ಇತ್ತು. ಈಗ ವಾಟ್ಸಪಲ್ಲಿ ಡಿಪಿ ಫೋಟೊ ಹಾಕಿ ಯಾಮಾರಿಸುವ ಯತ್ನ ನಡೆಯುತ್ತಿದೆ.

Fake WhatsApp profile of Mangalore commissioner Anupam Agrawal IPS, demands money. Commissioner has said not to fall prey to such messages.