Praveen Nettaru Murder, NIA: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಪತ್ತೆಗೆ ಎರಡು ಲಕ್ಷ ಬಹುಮಾನ ಘೋಷಣೆ, ಒಟ್ಟು 9 ಮಂದಿ ನಾಪತ್ತೆ 

27-10-23 07:03 pm       Mangalore Correspondent   ಕರಾವಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳ ಪತ್ತೆಗಾಗಿ ಎನ್ಐಎ ತಲಾ ಎರಡು ಲಕ್ಷ ರೂ. ಬಹುಮಾನ ಘೋಷಿಸಿದೆ. 

ಮಂಗಳೂರು, ಅ.27: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳ ಪತ್ತೆಗಾಗಿ ಎನ್ಐಎ ತಲಾ ಎರಡು ಲಕ್ಷ ರೂ. ಬಹುಮಾನ ಘೋಷಿಸಿದೆ. 

ಬೆಳ್ತಂಗಡಿ ತಾಲೂಕಿನ ಪದಂಗಡಿ ಗ್ರಾಮದ ನಿವಾಸಿ ನೌಷಾದ್ (32), ಸೋಮವಾರ ಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರಸ್ತೆಯ ನಿವಾಸಿ ಅಬ್ದುಲ್ ನಾಸಿರ್ (41), ಸೋಮವಾರ ಪೇಟೆ ತಾಲೂಕಿನ ಕಲಕಂದೂರು ಹಾನಗಲ್ ನಿವಾಸಿ ಅಬ್ದುಲ್ ರಹಿಮಾನ್ (36) ಆರೋಪಿ ನಂಬರ್ 22, 23, 24 ಆಗಿದ್ದು ಇವರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ಎರಡು ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಇವರು ಮೂವರು ಕೂಡ ನಿಷೇಧಿತ ಸಂಘಟನೆ ಪಿಎಫ್ಐ ಸದಸ್ಯರೆಂದು ಎನ್ಐಎ ಗುರುತಿಸಿದೆ. 

Praveen Nettaru murder part of PFI conspiracy to strike terror: NIA

ಕಳೆದ ವರ್ಷ ನವೆಂಬರ್ ಆರಂಭದಲ್ಲಿ ನಾಲ್ಕು ಮಂದಿಯ ಪತ್ತೆಗಾಗಿ ಒಟ್ಟು 14 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮಹಮ್ಮದ್ ಮುಸ್ತಫ ಪೈಚಾರ್, ಉಮರ್ ಫಾರೂಕ್, ತುಫೈಲ್ ಎಂ.ಎಚ್., ಅಬುಬಕ್ಕರ್ ಸಿದ್ದಿಕ್ ಪತ್ತೆಗಾಗಿ ಬಹುಮಾನ ಘೋಷಿಸಲಾಗಿತ್ತು.‌ ಈ ಪೈಕಿ ಮಡಿಕೇರಿ ನಿವಾಸಿ ತುಫೈಲ್ ಬಳಿಕ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ. ಪ್ರಕರಣದಲ್ಲಿ ಒಟ್ಟು ಒಂಬತ್ತು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Praveen Nettaru Murder, NIA issues wanted list of other three people in Mangalore.