ಬ್ರೇಕಿಂಗ್ ನ್ಯೂಸ್
27-10-23 11:03 pm Mangalore Correspondent ಕರಾವಳಿ
ಮಂಗಳೂರು, ಅ.27: ಕೊಂಕಣಿ ಲೇಖಕ, ಕಥೆಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜ (75) ನಿಧನರಾಗಿದ್ದಾರೆ.
1948ರಲ್ಲಿ ಮಂಗಳೂರಿನ ವೆಲೆನ್ಸಿಯಾದಲ್ಲಿ ಜನಿಸಿದ್ದ ಅವರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿದ್ದರು. ಆನಂತರ, ಕೊಂಕಣಿ ಭಾಷೆಯಲ್ಲಿ ಪೋಸ್ಟ್ ಗ್ರಾಜುವೇಟ್ ಡಿಪ್ಲೊಮಾ ಮಾಡಿದ್ದರು. ಅಲ್ಲದೆ, ಅಮೆರಿಕದ ಬೈಬಲ್ ಸ್ಕೂಲ್ ನಲ್ಲಿ ಕ್ರಿಸ್ತಿಯನ್ ಥಿಯೋಲಜಿ ಬಗ್ಗೆ ಡಿಪ್ಲೊಮಾ ಶಿಕ್ಷಣ ಮಾಡಿದ್ದರು.
1964ರಲ್ಲಿ ಮೊದಲ ಬಾರಿಗೆ ಕೊಂಕಣಿಯಲ್ಲಿ ಸಣ್ಣ ಕತೆಗಳನ್ನು ಬರೆಯತೊಡಗಿದ್ದರು. 33 ಕಾದಂಬರಿ, ನೂರಕ್ಕೂ ಹೆಚ್ಚು ಸಣ್ಣ ಕತೆಗಳನ್ನು ಬರೆದಿದ್ದಾರೆ. ಇವರ ಬಹುತೇಕ ಕತೆಗಳು ಇಂಗ್ಲಿಷ್, ಕನ್ನಡ, ಹಿಂದಿ, ಕಾಶ್ಮೀರಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. ಅವರು ಬರೆದಿದ್ದ ಎ ಕಪ್ ಆಫ್ ಹಾಟ್ ಕಾಫಿ ಎನ್ನುವ ಸಣ್ಣ ಕತೆಯನ್ನು ಭಾರತದ ಸಣ್ಣ ಕತೆಗಳಲ್ಲಿ ಫೇವರಿಟ್ ಗಳಲ್ಲಿ ಒಂದೆಂದು ಜೈಕೋ ಬುಕ್ಸ್ ಸಂಸ್ಥೆಯವರು ಪ್ರಕಟಿಸಿದ್ದರು. ಚಾಕಲೇಟ್ ಎನ್ನುವ ಸಣ್ಣ ಕತೆ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಎರಡು ಬಾರಿ ಪ್ರಕಟ ಆಗಿತ್ತು.
ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಜೆ.ಎಫ್ ಡಿಸೋಜರ ಹಲವು ಕತೆಗಳನ್ನು ಪ್ರಕಟಣೆ ಮಾಡಿದ್ದಾರೆ. ಡಿಸೋಜ ಅವರು ತನ್ನದೇ 13 ಕತೆಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದರು. ಹಲವು ಸಿನಿಮಾಗಳಿಗೂ ಅವರು ಸಂಭಾಷಣೆಗಳನ್ನು ಬರೆದಿದ್ದಾರೆ. ಕೊಂಕಣಿಯಲ್ಲಿ ಬರೆದಿದ್ದ 1008 ಪುಟಗಳ ಬೃಹತ್ ಗ್ರಂಥವನ್ನು 2015ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು ಕೊಂಕಣಿ ಸಾಹಿತ್ಯದಲ್ಲಿ ದಾಖಲಾದ ದೊಡ್ಡ ಕೊಡುಗೆ ಎಂದು ಪರಿಗಣಿಸಲ್ಪಟ್ಟಿದೆ. 1992ರಲ್ಲಿ ಕಾರವಾರದಲ್ಲಿ ನಡೆದ 11ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಜೆ.ಎಫ್ ಡಿಸೋಜ ಅಧ್ಯಕ್ಷರಾಗಿದ್ದರು. ಡಿಸೋಜ ಅವರು ಪತ್ನಿ ಮರ್ಸಿಲಿನ್ ಜೇನ್ ಡಿಸೋಜ, ಪುತ್ರಿ ರುತ್ ಈಸ್ಟರ್ ಡಿಸೋಜ, ಅಳಿಯ ಸುಧಾಕರ ಪ್ರಭು, ಮೊಮ್ಮಗು ಅನುಷ್ಕಾ ಪ್ರಭು ಅವರನ್ನು ಅಗಲಿದ್ದಾರೆ.
Edwin Joseph Francis D'Souza, a prominent Konkani writer and recipient of the Kendra Sahitya Academy Award, fondly known as Edwin J F D'Souza, passed away at 75 years of age in the city on Thursday, October 26.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm