ಬ್ರೇಕಿಂಗ್ ನ್ಯೂಸ್
28-10-23 05:42 pm Mangalore Correspondent ಕರಾವಳಿ
ಮಂಗಳೂರು, ಅ.28: ಕಾಂಗ್ರೆಸ್ ಒಳಗೆ ಆಂತರಿಕ ಜಗಳ ಶುರುವಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯವರು ಮೂರು ಪ್ರತ್ಯೇಕ ತಂಡ ಕಟ್ಟಿಕೊಂಡಿದ್ದಾರೆ. ಇದರ ಹಿನ್ನೆಲೆಯಲ್ಲಿ ನಿನ್ನೆ ಡಿನ್ನರ್ ಮೀಟಿಂಗ್ ಆಗಿದೆ. ಇವರಲ್ಲಿ ಯಾರು ಮೊದಲು ಹೊರಗೆ ಬರುತ್ತಾರೆ ನೋಡಬೇಕು. ಇವರ ಆಂತರಿಕ ಜಗಳದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ. ಪಕ್ಷದ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ. ರಾಷ್ಟ್ರೀಯ ಚಿಂತನೆಯುಳ್ಳ, ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ. ಜನಪ್ರತಿನಿಧಿಗಳ ಮೇಲೆಯೂ ಕೇಸ್ ಹಾಕಿ ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಕೋಲಾರ ಲೋಕಸಭಾ ಸದಸ್ಯರ ಮೇಲೆ ಪೊಲೀಸರು ದೈಹಿಕ ಹಲ್ಲೆ ಮಾಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬಡ ಕೃಷಿಕನ ಮನೆ ತೆರವು ಮಾಡಿದಾಗ ಶಾಸಕ ಹರೀಶ್ ಪೂಂಜ ತಡೆದಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸೇರಿ ನಮ್ಮ ಶಾಸಕರು ಜನರ ಪರ ನಿಂತಿದ್ದರು. ಆದರೆ ಅಧಿಕಾರಿಗಳು ಪ್ರತಾಪಸಿಂಹ ನಾಯಕ್ ಮೇಲೆ ಕೈ ಮಾಡಿದ್ದು ವಿಡಿಯೋ ಇದೆ. ಆದರೆ ಶಾಸಕ ಹರೀಶ್ ಪೂಂಜಾ ಮೇಲೆಯೇ ಕೇಸುಗಳನ್ನು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ ಎಂಬ ಕಾರಣಕ್ಕೆ ಹರೀಶ್ ಪೂಂಜಾ ಮೇಲೆ ಮತ್ತೊಂದು ಕೇಸ್ ದಾಖಲಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ರಾಷ್ಟ್ರೀಯವಾದಿಗಳ ಮೇಲೆ ಕೇಸು ಹಾಕುತ್ತಿದ್ದಾರೆ. ಆದರೆ ರಾಷ್ಟ್ರ ವಿರೋಧಿಗಳ ಮೇಲೆ ಒಂದೂ ಕೇಸ್ ದಾಖಲಾಗುತ್ತಿಲ್ಲ. ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದಕ್ಕೆ, ಶಿವಮೊಗ್ಗದಲ್ಲಿ ಖಡ್ಗ ಹಿಡಿದಿರುವುದಕ್ಕೆ, ಕೋಲಾರದಲ್ಲಿ ತಲವಾರು ತೋರಿಸಿ ಬೆದರಿಸಿದ್ದಕ್ಕೆ ಕೇಸು ಹಾಕಿಲ್ಲ. ಇವರದ್ದು ಸರ್ವಾಧಿಕಾರಿ, ಹಿಟ್ಲರ್ ಧೋರಣೆಯ ಸರ್ಕಾರ ಎಂದು ನಳಿನ್ ಹೇಳಿದರು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಡೀಲ್ ಕುರಿತ ಪ್ರಶ್ನೆಗೆ, ವಂಚನೆ ಬಗ್ಗೆ ತಿಳಿಯುತ್ತಲೇ ಪೊಲೀಸ್ ದೂರು ಕೊಡಲು ತಿಳಿಸಿದ್ದೆ. ಅವರು ದೂರು ಕೊಟ್ಟಿದ್ದಾರೆ, ತನಿಖೆ ನಡೆಯುತ್ತಿದೆ ಎಂದರು. ನಿಮ್ಮ ಆಪ್ತರೆಂದು ಹೇಳಿ ವಂಚನೆ ಮಾಡಿದ್ದಾರೆ ಎಂಬ ಪ್ರಶ್ನೆಗೆ, ಹಣ ಪಡೆದವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ತನಗೂ ಆ ಪ್ರಕರಣಕ್ಕು ಸಂಬಂಧ ಇಲ್ಲ ಅಂತ. ವ್ಯಾವಹಾರಿಕ ವಿಚಾರ ಎಂದು ಸ್ಪಷ್ಟನೆ ನೀಡಿದ್ದಾಗಿ ತಿಳಿಸಿದರು. ನಿಮ್ಮ ಹೆಸರಲ್ಲಿಯೇ ವಂಚನೆ ಆಗಿದೆ, ನೀವು ರಾಜ್ಯ ಬಿಜೆಪಿಯಿಂದ ದೂರು ಯಾಕೆ ಕೊಟ್ಟಿಲ್ಲ ಎಂದಾಗ, ಅದನ್ನು ನಾವು ಅವರಲ್ಲಿಯೇ ಹೇಳಿದ್ದೆವು. ನಮ್ಮ ಜೊತೆಗೆ ಸಾವಿರಾರು ಮಂದಿ ಫೋಟೊ ತೆಗೆಸಿಕೊಳ್ಳುತ್ತಾರೆ. ಅವರೆಲ್ಲ ಆಪ್ತರು ಎನ್ನಲು ಆಗುತ್ತಾ ಎಂದು ಕೇಳಿದರು.
ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕೇಳಿದಾಗ, ಮುಖ್ಯಮಂತ್ರಿಯಾಗಿ ಎಲ್ಲವನ್ನೂ ತಿಳಿದರೂ ತಿಳಿಯದವರ ರೀತಿ ಅನುಭವ ಇಲ್ಲದವರಂತೆ ಮಾಡುತ್ತಿದ್ದಾರೆ. ಬರ ಪರಿಹಾರಕ್ಕೆ ನಿರ್ದಿಷ್ಟ ಮಾನದಂಡ ಇದೆ. ಕೇಂದ್ರದ ಪ್ರತಿನಿಧಿಗಳ ಜೊತೆಗೆ ಬರ ಪೀಡಿತ ಜಾಗಕ್ಕೆ ಹೋಗಿ ಮನವರಿಕೆ ಮಾಡಬೇಕು. ಅದನ್ನು ಮಾಡಿಲ್ಲ ಎಂದರು.
Mangalore Nalin Kateel slams CM Siddaramaiah says he appears inexperienced in governance. In response to a question about Chief Minister Siddaramaiah's accusation that the BJP-led central government is neglecting the state by not releasing funds for drought relief work, Kateel clarified that funds are disbursed based on the reports.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 03:24 pm
Mangalore Correspondent
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
Mangalore Cyber Fraud, Crime: ಜಾಲತಾಣದಲ್ಲಿ ಲೈಕ...
27-11-24 11:04 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm