ಬ್ರೇಕಿಂಗ್ ನ್ಯೂಸ್
28-10-23 09:39 pm Mangalore Correspondent ಕರಾವಳಿ
ಉಳ್ಳಾಲ, ಅ.28: ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಧಾನ ಪರಿಷತ್ ಸದಸ್ಯ, ಮಾಜಿ ಸಿ.ಎಂ ಕುಮಾರಸ್ವಾಮಿ ಆಪ್ತ ಬಿ.ಎಂ. ಫಾರೂಕ್ ಒಡೆತನದ ವಾಣಿಜ್ಯ ಕಟ್ಟಡಕ್ಕೆ ಅಡ್ಡಿಯಾಗಿದ್ದ ಗಟ್ಟಿ ಮುಟ್ಟಾದ ಬಸ್ ಸ್ಟ್ಯಾಂಡನ್ನ ಕೆಡವಿ ಸಮೀಪದಲ್ಲೇ ಎಂಎಲ್ಸಿ ನಿಧಿಯಿಂದ ಬೇರೊಂದು ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆಮೂಲಕ ಉದ್ಯಮಿ ಫಾರೂಕ್ ಅವರು ತನ್ನ ವ್ಯಾವಹಾರಿಕ ಉದ್ದೇಶಕ್ಕೆ ಜನರ ತೆರಿಗೆಯ 6 ಲಕ್ಷ ರೂ. ದುರುಪಯೋಗಪಡಿಸಿದ ಆರೋಪ ಕೇಳಿಬಂದಿದೆ.
ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ಪೊಲೀಸ್ ಠಾಣೆಗೆ ತಾಗಿಕೊಂಡಿರುವ ಒಂದು ಮಹಡಿಯ ಶಿಥಿಲಗೊಂಡ ವಾಣಿಜ್ಯ ಕಟ್ಟಡವನ್ನ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ವರ್ಷದ ಹಿಂದೆ ಖರೀದಿಸಿದ್ದು ಅದೇ ಕಟ್ಟಡಕ್ಕೆ ಮತ್ತೆರಡು ಮಹಡಿಗಳನ್ನ ಹಾಕಿದ್ದಾರೆ. ಕಟ್ಟಡಕ್ಕೆ ಒಂದಿಂಚೂ ಪಾರ್ಕಿಂಗ್ ಸ್ಥಳ ಇಲ್ಲ, ಸೆಟ್ ಬ್ಯಾಕ್ ಕೂಡ ಇಲ್ಲ. ವಾಹನಗಳನ್ನ ರಸ್ತೆ ಅಂಚಿನಲ್ಲೇ ಪಾರ್ಕ್ ಮಾಡುವ ಸ್ಥಿತಿಯಿದೆ. ಸಾರ್ವಜನಿಕರ ದೂರಿನ ಮೇರೆಗೆ ಉಳ್ಳಾಲ ನಗರಸಭೆಯ ಹಿಂದಿನ ಪೌರಾಯುಕ್ತ ರಾಯಪ್ಪ ಅವರು ಕಟ್ಟಡ ಕಾಮಗಾರಿಯನ್ನ ತಡೆ ಹಿಡಿದಿದ್ದರು. ಆದರೆ ಕೋಟಿಕುಳ ಫಾರೂಕ್ ಅವರು ತನ್ನ ಪ್ರಭಾವ ಬಳಸಿ ಕಟ್ಟಡವನ್ನ ಪೂರ್ತಿಗೊಳಿಸಿದ್ದಾರೆ.
ನಿಯಮಬಾಹಿರ ಕಟ್ಟಡದ ಮುಂಭಾಗದಲ್ಲಿ ಹಳೆಯ ಬಸ್ಸು ತಂಗುದಾಣ ಇತ್ತು. ಉಳ್ಳಾಲದ ವಿದ್ಯಾರಣ್ಯ ಕಲಾವೃಂದದವರು ಈ ಬಸ್ ತಂಗುದಾಣವನ್ನ ನಿರ್ಮಿಸಿದ್ದರು. ವಾಣಿಜ್ಯ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುತ್ತಲೇ ಕಟ್ಟಡಕ್ಕೆ ಅಡ್ಡಲಾಗಿದ್ದ ಬಸ್ ತಂಗುದಾಣವು ಶಿಥಿಲಗೊಂಡಂತೆ ಕಂಡಿದ್ದು ಸಮೀಪದಲ್ಲೇ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ 6 ಲಕ್ಷ ವ್ಯಯಿಸಿ ಪಕ್ಕದಲ್ಲೇ ಬೇರೊಂದು ಬಸ್ಸು ತಂಗುದಾಣ ನಿರ್ಮಿಸಿದ್ದಾರೆ. ತನ್ನ ಕಟ್ಟಡಕ್ಕೆ ಮುಳುವಾಗಿದ್ದ ಬಸ್ ತಂಗುದಾಣವನ್ನ ಒಡೆದು ಪುಡಿ ಮಾಡಿದ್ದಾರೆ. ನೂತನ ಬಸ್ ತಂಗುದಾಣಕ್ಕೆ ವಿದ್ಯಾರಣ್ಯ ಕಲಾವೃಂದದ ಬೋರ್ಡ್ ಹಾಕಿ ಸ್ಥಳೀಯರನ್ನ ಸಮಾಧಾನ ಪಡಿಸಿದ್ದು ಪಕ್ಕದಲ್ಲೇ ಬಿ.ಎಂ. ಫಾರೂಕರ ನಗುಮೊಗದ ಫೊಟೋ ಹಾಕಿ ಸ್ವಂತ ಖರ್ಚಿನಲ್ಲಿ ಬಸ್ ತಂಗುದಾಣ ನಿರ್ಮಿಸಿದಂತೆ ಬಿಂಬಿಸಲಾಗಿದೆ.
ಉಳ್ಳಾಲ ಪೊಲೀಸರು ಈ ಹಿಂದೆ ಫಾರೂಕರಿಗೆ ಸೇರಿದ್ದ ಮರಳು ಲಾರಿಯನ್ನ ಜಪ್ತಿಗೊಳಿಸಿದಾಗ ಅದು ಮರಳಲ್ಲ, ಜೇಡಿ ಮಣ್ಣೆಂದು ಹೇಳಿ ಲಾರಿಯನ್ನ ಬಿಡಿಸಿದ್ದರು. ಈಗ ತನ್ನ ಕಟ್ಟಡದ ಸೌಂದರ್ಯಕ್ಕೆ ಧಕ್ಕೆ ಆಗಬಾರದು, ವ್ಯವಹಾರಕ್ಕೆ ಅಡ್ಡಿ ಆಗಬಾರದೆಂದು ಬಸ್ ತಂಗುದಾಣವನ್ನ ಕೆಡವಿ ಸರಕಾರದ ಹಣದಲ್ಲಿ ಬೇರೊಂದು ಬಸ್ ನಿಲ್ದಾಣ ಮಾಡಿದ್ದಾರೆ. ಇದನ್ನೆಲ್ಲ ಪ್ರಶ್ನಿಸಬೇಕಿದ್ದ ಉಳ್ಳಾಲದ ನಾಯಕರು ಮಾತ್ರ ತಮಗೇನೂ ಗೊತ್ತಿಲದ ರೀತಿಯಲ್ಲಿ ತೆಪ್ಪಗೆ ಕೂತಿದ್ದಾರೆ.
Mlc Farooq destroyed bus stand obstructing his building, six lakhs fund misused at Ullal in Mangalore.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm