ಬ್ರೇಕಿಂಗ್ ನ್ಯೂಸ್
30-10-23 04:44 pm Mangalore Correspondent ಕರಾವಳಿ
ಉಳ್ಳಾಲ, ಅ.30: ಆತ್ಮಹತ್ಯೆ ತಡೆಗೆಂದು ನೇತ್ರಾವತಿ ನದಿಯ ಸೇತುವೆಯ ಇಬ್ಬದಿಗೆ ಹಾಕಿದ್ದ ತಡೆ ಬೇಲಿಯನ್ನೇ ಹಾರಿ ಯುವಕನೋರ್ವ ನದಿಗೆ ಜಿಗಿದಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ತೊಕ್ಕೊಟ್ಟಿನಿಂದ ಮಂಗಳೂರಿನತ್ತ ಹುಂಡೈ ಐ10 ಕಾರಲ್ಲಿ ತೆರಳುತ್ತಿದ್ದ ಯುವಕನೋರ್ವ ಕಾರನ್ನ ಸೇತುವೆ ಬಳಿಯಲ್ಲೇ ನಿಲ್ಲಿಸಿದ್ದಾನೆ. ವಾಹನ ಸವಾರರು ನೋಡ ನೋಡುತ್ತಲೇ ಸೇತುವೆಯ ತುದಿಯ ಆವರಣ ಗೋಡೆ ಹಾರಿದ ಯುವಕ ಆವರಣ ಗೋಡೆಗೆ ಅಳವಡಿಸಲಾಗಿದ್ದ ಪೈಪ್ ಲೈನ್ ಗಳ ಮೇಲೆ ನಡೆಯುತ್ತಲೇ ಸೇತುವೆ ಮಧ್ಯ ಭಾಗ ತಲುಪಿ ನದಿಗೆ ಜಿಗಿದು ನೀರು ಪಾಲಾಗಿದ್ದಾನೆ. ಯುವಕ ನೀರು ಪಾಲಾಗುತ್ತಿರುವ ದೃಶ್ಯವನ್ನ ಕೆಲವರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಚಿಕ್ಕಮಂಗಳೂರು ಮೂಲದ ಪ್ರಸನ್ನ ಕುಮಾರ್ ಎಂಬವರ ಹೆಸರಲ್ಲಿ ಕಾರು ನೋಂದಣಿಗೊಂಡಿದೆ. ಅಲ್ಲದೆ, ಕಾರಲ್ಲಿ ಪ್ರಸನ್ನ ಅವರ ಡ್ರೈವಿಂಗ್ ಲೈಸೆನ್ಸ್ ದೊರಕಿದೆ. ಸ್ಥಳೀಯ ನಾಡದೋಣಿಗಳಿಂದ ಪೊಲೀಸರು ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಪ್ರಸನ್ನ ಅವರ ಫ್ಯಾಮಿಲಿಯನ್ನು ಪೊಲೀಸರು ಸಂಪರ್ಕಿಸಿದ್ದು ಪ್ರಸನ್ನ ಮತ್ತು ಸುಮನ್ ಎಂಬವರು ತರಕಾರಿ ಮಾರಾಟಕ್ಕೆಂದು ಮಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಈಗ ನೀರಿಗೆ ಹಾರಿದ ವ್ಯಕ್ತಿ ಪ್ರಸನ್ನ ಹೌದಾ ಅಥವಾ ಬೇರೆ ವ್ಯಕ್ತಿಯೇ ಎಂದು ಗೊತ್ತಾಗಿಲ್ಲ.
ನೇತ್ರಾವತಿ ಸೇತುವೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಆತ್ಮಹತ್ಯೆಗಳಿಗೆ ಕಡಿವಾಣ ಹಾಕಲು ಮಂಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಎರಡು ವರ್ಷಗಳ ಹಿಂದೆ ಸುಮಾರು 50 ಲಕ್ಷ ವೆಚ್ಚದಲ್ಲಿ ಸೇತುವೆಗೆ ಕಬ್ಬಿಣದ ತಡೆ ಬೇಲಿ ಅಳವಡಿಸಿತ್ತು. ಬೇಲಿ ಅಳವಡಿಸಿದ ನಂತರ ಸೇತುವೆಯಲ್ಲಿ ಹಾರಿ ಸಾಯುವುದು ಕಡಿಮೆಯಾಗಿತ್ತು. ಇದೀಗ ಬೇಲಿಯನ್ನೇ ಲೆಕ್ಕಿಸದೆ ಯುವಕ ನದಿಗೆ ಜಿಗಿದಿದ್ದು ಸಾವಿನ ದಾರಿ ಹಿಡಿದವನಿಗೆ ಬೇಲಿ ಅಡ್ಡಿಯಾಗಲ್ಲ ಎನ್ನುವ ಸಂದೇಶ ನೀಡಿದ್ದಾನೆ.
Chikmagaluru man jumps into Netravati river at Ullal bridge in Mangalore by parking his car aside.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm