ಬ್ರೇಕಿಂಗ್ ನ್ಯೂಸ್
31-10-23 09:21 pm Mangaluru Correspondent ಕರಾವಳಿ
ಮಂಗಳೂರು, ಅ.31: ಪರಶುರಾಮ ವಿಗ್ರಹದ ಬಗ್ಗೆ ತನಿಖೆ ಮಾಡಿಸಬೇಕು ಅನ್ನುವ ಆಗ್ರಹದ ಬಗ್ಗೆ ತಿಳಿದಿದೆ. ಸರಕಾರದ ನಿರ್ಮಿತಿ ಕೇಂದ್ರದವರು ಕಾಮಗಾರಿ ನಡೆಸುತ್ತಿದ್ದಾರೆ. ಇದು ಜಿಲ್ಲಾಧಿಕಾರಿಯ ಅಡಿಯಲ್ಲಿ ಬರೋದ್ರಿಂದ ಅವರಲ್ಲೇ ಕೇಳಿದ್ದೇವೆ. ಕೆಲಸ ಮಾಡಿಸುತ್ತಿದ್ದೇವೆ ಎಂದಿದ್ದಾರೆ. ನಾವು ಅಲ್ಲಿ ಹೋಗಿ ಚೆಕ್ ಮಾಡಿದ್ದೇವೆ. ಸೊಂಟದ ವರೆಗಿನ ಮೂರ್ತಿಯಲ್ಲಿ ಅರ್ಧ ನಕಲಿಯಾಗಿರುವಂತೆ ತೋರಿತ್ತು. ಕಾಮಗಾರಿಯಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ಮಾಡಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರಲ್ಲಿ ಪರಶುರಾಮ ವಿಗ್ರಹದ ನಕಲಿಯಾ, ಅಸಲಿಯಾ ಎಂಬ ಪ್ರಶ್ನೆ ಇಟ್ಟಾಗ, ನಾವು ಅಲ್ಲಿ ಹೋಗಿದ್ದು ನಿಜ. ನಾವು ತಪಾಸಣೆ ನಡೆಸುವುದಕ್ಕೆ ತಜ್ಞರಲ್ಲ. ವಾಸ್ತವ ಸ್ಥಿತಿಯನ್ನು ಸರಕಾರಕ್ಕೆ ಕೊಟ್ಟಿದ್ದೇವೆ. ಅದೊಂದು ದೈವಿಕ ಮಹತ್ವ ಇರುವ ಕ್ಷೇತ್ರವಾಗಿದ್ದರಿಂದ ನಾವು ಅದರ ಬಗ್ಗೆ ಗುಲ್ಲು ಎಬ್ಬಿಸಲು ಹೋಗುವುದಿಲ್ಲ ಎಂದರು. ದೈವಿಕ ಕ್ಷೇತ್ರ ಅಲ್ಲ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಈ ಹಿಂದೆ ಅವರೇ ದೈವಿಕ ಕ್ಷೇತ್ರ ಎಂದು ಹೇಳಿದ್ದರು. ನಾವು ದೈವಿಕ ಮಹತ್ವ ಕೊಡುತ್ತೇವೆ. ನಾವು ಹೋಗಿದ್ದಾಗ ಮೂರ್ತಿಯಲ್ಲಿ ಸೊಂಟದ ವರೆಗೆ ಮಾತ್ರ ಇತ್ತು. ಅದರಲ್ಲಿ ಒಂದಷ್ಟು ಮಾತ್ರ ಕಂಚು ಇರುವುದು ಕಂಡುಬಂದಿತ್ತು. ಮೇಲ್ಭಾಗದಲ್ಲಿ ಏನಿತ್ತು ಅನ್ನೋದು ಗೊತ್ತಿಲ್ಲ. ವಿಗ್ರಹದ ಭಾರಕ್ಕೆ ಸರಿಯಾಗಿ ಅಲೈನ್ಮೆಂಟ್ ಇಲ್ಲವೆಂದು ತೆಗೆದಿದ್ದಾರೆ. ಸರಿ ಮಾಡಿ ಕೂರಿಸುತ್ತಿದ್ದಾರೆ, ವಿವಾದ ಎಬ್ಬಿಸುವ ಪ್ರಶ್ನೆ ಇಲ್ಲ ಎಂದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದಿದ್ದಾಗ ಬಂಟರ ನಿಗಮ ಸ್ಥಾಪನೆ ಬಗ್ಗೆ ಹೇಳಿದ್ದಾರೆ. ಶೀಘ್ರದಲ್ಲೇ ಬಂಟರ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆಯಾಗಲಿದೆ. ಮೇಲ್ನೋಟಕ್ಕೆ ಬಂಟರು ಸಿರಿವಂತರಿದ್ದಾರೆ ಎಂಬ ಭಾವನೆ ಇದೆ. ನಾವು ಪ್ರಣಾಳಿಕೆ ಸಮಿತಿಯಲ್ಲಿ ಚರ್ಚೆ ನಡೆದಾಗ, ಬಂಟರಲ್ಲಿ ಕೇವಲ 20 ಶೇಕಡಾ ಮಂದಿಯಷ್ಟೇ ಒಂದಷ್ಟು ಸಿರಿವಂತರಿದ್ದಾರೆ. ಮತ್ತೆ 20 ಪರ್ಸೆಂಟ್ ಜನ ಮಧ್ಯಮ ವರ್ಗದವರಿದ್ದಾರೆ. ಉಳಿದಂತೆ 60 ಪರ್ಸೆಂಟ್ ಮಂದಿ ಬಡವರಿದ್ದಾರೆ. ಇವರ ಅಭಿವೃದ್ಧಿಗಾಗಿ ಬಂಟರ ನಿಗಮ ಅಗತ್ಯವಿದೆ ಎಂದು ನಿರ್ಣಯಿಸಿ ಪ್ರಣಾಳಿಕೆಯಲ್ಲಿ ಕೊಟ್ಟಿದ್ದೆವು. ಈಗ ಅದನ್ನು ಈಡೇರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಾವು ಅಭಿನಂದನೆ ಹೇಳುತ್ತೇವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಹತ್ತು ವರ್ಷದಲ್ಲಿ ಬಡವರಿಗೆ ಏನೂ ಕೊಟ್ಟಿಲ್ಲ. ಕಾರ್ಪೊರೇಟ್ ಕಂಪನಿಗಳಿಗೆ ಸೇರಿದ 25 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ರೈಟ್ ಆಫ್ ಮಾಡಿ, ಸಿರಿವಂತರಿಗೆ ಲಾಭ ಮಾಡಿದ್ದಾರೆ. ಬಡವರಿಂದ ಹಣವನ್ನು ಕಿತ್ತುಕೊಂಡು ಶ್ರೀಮಂತರಿಗೆ ಕೊಟ್ಟಿದ್ದು ಮೋದಿ ಸರಕಾರ. ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದಾಗ, ಅದನ್ನು ಈಡೇರಿಸಲು ಸಾಧ್ಯವಿಲ್ಲ ಎಂದೇ ಬಿಜೆಪಿಯವರು ಹೇಳಿದ್ದರು. ಈಗ ಗ್ಯಾರಂಟಿ ಯೋಜನೆ ಈಡೇರಿಸಿದಾಗ, ಯಾಕೆ ಮಾತನಾಡುತ್ತಿಲ್ಲ. ಗ್ಯಾರಂಟಿ ಯೋಜನೆಯಿಂದ ಬಡವರು, ಮಧ್ಯಮ ವರ್ಗದವರಿಗೆ ಲಾಭ ಆಗಿದೆ, ಜನರಿಗೆ ಕಾಂಗ್ರೆಸ್ ಸರಕಾರದ ಆಡಳಿತ ಅನುಭವಕ್ಕೆ ದಕ್ಕಿದೆ ಎಂದರು.
ಗೃಹ ಲಕ್ಷ್ಮಿ ಯೋಜನೆಯಡಿ ಒಂದು ಬಾರಿ ಮಾತ್ರ ಎರಡು ಸಾವಿರ ಬಂದಿದೆ, ಆನಂತರ ಬಂದಿಲ್ಲವಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ ಭಂಡಾರಿ, ಆ ಯೋಜನೆಯಲ್ಲಿ ಕೆಲವು ಸಮಸ್ಯೆ ಆಗಿದೆ. ಅದನ್ನು ನಿವಾರಿಸಿದ್ದು ಈಗ ಎಲ್ಲ ಕಡೆಯೂ ಹಣ ಬರ್ತಾ ಇದೆ ಎಂದರು. ಸುದ್ದಿಗೋಷ್ಟಿಯಲ್ಲಿ ಶಾಸಕ ಅಶೋಕ್ ರೈ, ಪ್ರಮುಖರಾದ ಸಂತೋಷ್ ಶೆಟ್ಟಿ, ಮಹಾಬಲ ಮಾರ್ಲ, ಶಾಹುಲ್ ಹಮೀದ್ ಮತ್ತಿತರರು ಇದ್ದರು.
Parashurama Theme Park work will be investigated if there is fraud, says MLC Manjunath Bhandary in Mangalore. We have visited the spot, and we will re-investigate the matter in Karkala, he added.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm