ಬ್ರೇಕಿಂಗ್ ನ್ಯೂಸ್
03-11-23 01:32 pm Mangalore Correspondent ಕರಾವಳಿ
ಉಡುಪಿ, ನ.3: ಸತತ ಪರಿಶ್ರಮ, ಛಲಗಾರಿಕೆ ಇದ್ದರೆ ಯಾವುದೇ ಸಾಧನೆಯನ್ನೂ ಮಾಡಬಹುದು ಎಂಬುದನ್ನು ಉಡುಪಿ ಮೂಲದ ನಿವೇದಿತಾ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಕೆಲಸವನ್ನೇ ತೊರೆದು ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.
ಯುಪಿಎಸ್ಸಿ 2022ರ ಸಾಲಿನ ಪರೀಕ್ಷೆಯ ಫಲಿತಾಂಶ ಬಂದಿದ್ದು ಪರೀಕ್ಷೆ ಬರೆದ 11 ಲಕ್ಷ ಅಭ್ಯರ್ಥಿಗಳ ಪೈಕಿ 1022 ಮಂದಿ ಆಯ್ಕೆಗೊಂಡಿದ್ದಾರೆ. ಮೂಲತಃ ಉಡುಪಿ ನಗರದ ನಿವಾಸಿಯಾಗಿರುವ ನಿವೇದಿತಾ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು ಸದಾನಂದ ಶೆಟ್ಟಿ ಮತ್ತು ಸಮಿತಾ ಶೆಟ್ಟಿ ದಂಪತಿಯ ಪುತ್ರಿ. ಇವರ ಪತಿ ದಿವಾಕರ ಶೆಟ್ಟಿ ಒಮಾನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದು ಮೂರು ವರ್ಷದ ಮಗುವಿನ ಜೊತೆಯಲ್ಲೇ ನಿವೇದಿತಾ ಹಗಲಿರುಳು ಓದುತ್ತಲೇ ಯಾವುದೇ ಕೋಚಿಂಗ್ ಪಡೆಯದೇ ಸಾಧನೆ ಮಾಡಿದ್ದಾರೆ.
ನಿವೇದಿತಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ತಮ್ಮ ಪ್ರೈಮರಿ ವಿದ್ಯಾಭ್ಯಾಸವನ್ನು ಉಡುಪಿಯ ಮಿಲಾಗ್ರಿಸ್ ಶಾಲೆಯಲ್ಲಿ ಮಾಡಿದ್ದರು. ಬಳಿಕ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದರು. ಕೊನೆಯ ವರ್ಷದ ಕಲಿಕೆಯಲ್ಲಿರುವಾಗಲೇ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಒಳ್ಳೆಯ ನೌಕರಿ ಪಡೆದಿದ್ದರು. ನಾಗರಿಕ ಸೇವಾ ಪರೀಕ್ಷೆ ಬರೆಯಬೇಕೆಂಬ ಹಂಬಲದಲ್ಲಿ ಉದ್ಯೋಗ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಬಳಿಕ ತಮ್ಮ ಉದ್ಯೋಗವನ್ನೇ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸಿದ್ದರು. ಸತತ ಪ್ರಯತ್ನದಿಂದ ಯಾವುದೇ ಕೋಚಿಂಗ್ ಪಡೆಯದೆ 2022ರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.
The Union Public Service Commission commonly abbreviated as UPSC released the consolidated list of civil services examinations of 2022. Though lacs of candidates write this examination, considered the toughest in the country, only handful clear the same.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am