ಬ್ರೇಕಿಂಗ್ ನ್ಯೂಸ್
05-11-23 09:54 pm Mangalore Correspondent ಕರಾವಳಿ
ಮಂಗಳೂರು, ನ.5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಒಕ್ಕಲಿಗ ಗೌಡ ಸಮುದಾಯದ ಜನರಿದ್ದರೂ, ಶಾಸಕ, ಸಂಸದ ಸ್ಥಾನಕ್ಕೆ ನಮ್ಮ ಸಮುದಾಯದವರಿಗೆ ಆದ್ಯತೆ ನೀಡಿಲ್ಲ. ಹಿಂದೆ ಡೀವಿ ಸದಾನಂದ ಗೌಡರನ್ನು ಒಂದೇ ಬಾರಿಗೆ ಸಂಸದ ಸ್ಥಾನದಿಂದ ಬದಲಾಯಿಸಿದ್ದರೆ, ನಳಿನ್ ಕುಮಾರ್ ಗೆ ಮೂರು ಬಾರಿ ಅವಕಾಶ ಕೊಟ್ಟಿದ್ದಾರೆ. ಇದು ನಮ್ಮ ಸಮುದಾಯಕ್ಕೆ ಮಾಡಿದ ಅನ್ಯಾಯ ಮತ್ತು ತಾರತಮ್ಯ. ಈ ಬಾರಿ ಲೋಕಸಭೆ ಕ್ಷೇತ್ರಕ್ಕೆ ಸೂಕ್ತ ವಿದ್ಯಾವಂತ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ನಾವು ನಮ್ಮ ಸಮುದಾಯದ ವ್ಯಕ್ತಿಯನ್ನು ಪ್ರತ್ಯೇಕವಾಗಿ ಕಣಕ್ಕಿಳಿಸುತ್ತೇವೆ ಎಂದು ಒಕ್ಕಲಿಗ ಸಂಘದ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೌಡ ಸಂಘದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮತ್ತು ದ.ಕ. ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ಪ್ರಬಲ ಸಮುದಾಯವಾಗಿರುವ ಒಕ್ಕಲಿಗ ಸಮುದಾಯವನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ದುರುದ್ದೇಶಪೂರಿತ ಕಪೋಲಕಲ್ಪಿತ ರೀತಿಯಲ್ಲಿ ಜಿಲ್ಲೆಯಲ್ಲಿ ನಮ್ಮ ಸಂಖ್ಯೆ ಕೇವಲ 80 ಸಾವಿರ ಎಂದು ಮಾಧ್ಯಮದಲ್ಲಿ ಬಿಂಬಿಸಿ ತುಳಿಯುವ ಯತ್ನ ಮಾಡುತ್ತಿದ್ದು ಇದನ್ಜು ಯಾವುದೇ ಕಾರಣಕ್ಕು ಒಪ್ಪಲಾಗದು ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆಲ್ಲ ಸಮುದಾಯಗಳಿಗೆ ಹೋಲಿಸಿದರೆ ಎರಡನೆ ಅತೀ ದೊಡ್ಡ ಸಮುದಾಯ ಒಕ್ಕಲಿಗರದ್ದು. 3.75 ಲಕ್ಷಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ್ದೇವೆ. ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಆಯೋಗ ನೀಡಿದ ವರದಿ ಮತ್ತು ಒಕ್ಕಲಿಗರ ಸಂಘವು ನೀಡಿದ ಆಂತರಿಕ ಅಂಕಿ ಅಂಶ ತಾಳೆಯಾಗಿದೆ. ಆದರೆ ಮಾಧ್ಯಮ ಒಂದರಲ್ಲಿ ದ.ಕ. ಜಿಲ್ಲೆಯಲ್ಲಿ ಕೇವಲ 80 ಸಾವಿರ ಅಂತ ಬಿಂಬಿಸಿ ನಿಕೃಷ್ಟ ಮತ್ತು ತಾತ್ಸಾರ ವರದಿ ನೀಡಿರುವುದು ಸಮುದಾಯದಲ್ಲಿ ಆಕ್ರೋಶ ಮತ್ತು ತಳಮಳಕ್ಕೆ ಕಾರಣವಾಗಿದೆ ಎಂದರು.
ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಲ್ಲಿಯೂ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗಳಿಗೆ ಪೂರಕ ವಾತಾವರಣವಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಕ್ಕಲಿಗ ಗೌಡರು ಎರಡೂ ಪಕ್ಷಗಳಲ್ಲಿ ಸ್ಥಾನಮಾನಗಳಿಂದ ಪೂರ್ತಿ ವಂಚಿತವಾಗಿದ್ದಾರೆ. ಕಳೆದ ನಾಲ್ಕೈದು ಚುನಾವಣಾ ಅವಧಿಯ ಪೈಕಿ ಧನಂಜಯ್ ಕುಮಾರ್ ಬಿಜೆಪಿಯಿಂದ ಸತತ ಮೂರು ಬಾರಿ ಗೆಲುವು ಕಂಡಿದ್ದು, ಆ ಬಳಿಕ ಒಕ್ಕಲಿಗ ಸಮುದಾಯದ ಡಿ.ವಿ. ಸದಾನಂದ ಗೌಡರು ಒಂದು ಬಾರಿ ಗೆದ್ದಿದ್ದರು. ಎರಡನೇ ಬಾರಿಗೆ ಅವಕಾಶ ನೀಡದೇ ಅವರನ್ನು ಹೊರಕ್ಕೆ ಅಟ್ಟಿದ್ದರ ಬಗ್ಗೆ ಇಂದಿಗೂ ಸಮುದಾಯದಲ್ಲಿ ಅಕ್ರೋಶವಿದೆ. ಮುಂದೆ ಸತತ ಮೂರು ಬಾರಿ ನಳಿನ್ ಕುಮಾರ್ ಕಟೀಲ್‌ಗೆ ಅವಕಾಶ ಕಲ್ಪಿಸಲಾಗಿತ್ತು ಎಂಬುದು ಒಕ್ಕಲಿಗರ ಅಸಮಾಧಾನ ಇದ್ದು ಇಂದಿಗೂ ಹೊಗೆಯಾಡುತ್ತಲೇ ಇದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಸಮುದಾಯವಾಗಿದ್ದರೂ ಜಿಲ್ಲೆಯಲ್ಲಿ ಒಂದೇ ಒಂದು ಸಮುದಾಯದ ಶಾಸಕರಾಗಲಿ, ವಿಧಾನಪರಿಷತ್ ಸದಸ್ಯರಾಗಲಿ ಇಲ್ಲದೇ ರಾಜಕೀಯವಾಗಿ ತಬ್ಬಲಿಯ ಸ್ಥಿತಿ ಸೃಷ್ಟಿಯಾಗಿರುವುದು ಒಕ್ಕಲಿಗರನ್ನು ತುಳಿದಿರುವುದಕ್ಕೆ ಸಾಕ್ಷಿ.
ಕ್ಷೇತ್ರಕ್ಕೆ ಅಗತ್ಯದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬಲ್ಲ ಸೂಕ್ಷ್ಮಮತಿ, ಸಮರ್ಥ ವಿದ್ಯಾವಂತ, ಭಾಷಾ ಪ್ರೌಢಿಮೆ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯವುಳ್ಳ ಪ್ರತಿಭಾನ್ವಿತರ ಆಯ್ಕೆಯಾಗಬೇಕೆಂಬ ಕ್ಷೇತ್ರದ ಜನತೆಯ ಆಶಯವನ್ನ ಪಕ್ಷಗಳು ಸಾಕಾರಗೊಳಿಸಲು ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಅವಕಾಶ ಕಲ್ಪಿಸಬೇಕು. ಅಂತಹ ಸಮರ್ಥ, ಪ್ರಭಾವಿ ಸಾಕಷ್ಟು ಅಭ್ಯರ್ಥಿಗಳು ಸಮುದಾಯದಲ್ಲಿದ್ದಾರೆ. ಯಾವುದೇ ಪಕ್ಷ ಅವಕಾಶ ನೀಡಿದರೂ ಸಮುದಾಯ ಅಂತಹ ಅಭ್ಯರ್ಥಿಗಳನ್ನು ಪಕ್ಷಾತೀತವಾಗಿ ಬೆಂಬಲಿಸಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಗುರುದೇವ್ ಯು,ಬಿ, ಕಾರ್ಯದರ್ಶಿ ಡಿ.ಬಿ. ಬಾಲಕೃಷ್ಣ, ವಿಜಿಯಸ್ ಸಹಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷ ಲೋಕಯ್ಯ ಗೌಡ, ನವೀನ್ ಚಿಲ್ಲಾರ್, ಪೂರ್ಣಿಮ ಕೆ.ಎಂ., ರಕ್ಷಿತ್ ಮುತ್ತಿಲ, ಕಿರಣ್ ಹೊಸೊಳಿಕೆ ಉಪಸ್ಥಿತರಿದ್ದರು.
DV Sadananda was juts one time MP even after being Vokkaliga, Vokkaliga leaders demand justice in Mangalore.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
25-05-25 04:29 pm
HK News Desk
Mangalore Ship, Container: ಕೊಚ್ಚಿ ಬಳಿಯಲ್ಲಿ ಬೃ...
25-05-25 02:14 pm
Drone Attack, Russia, Brijesh Chowta: ಪಾಕ್ ಭಯ...
23-05-25 08:08 pm
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
25-05-25 04:19 pm
Mangalore Correspondent
Mangalore CCB, MFC Hotel Owner Siddique Arres...
25-05-25 02:46 pm
ಕೇರಳಕ್ಕೆ ಮುಂಗಾರು ಎಂಟ್ರಿ ; 16 ವರ್ಷಗಳ ಬಳಿಕ ಎಂಟು...
24-05-25 04:29 pm
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm