ಬ್ರೇಕಿಂಗ್ ನ್ಯೂಸ್
06-11-23 05:30 pm Mangalore Correspondent ಕರಾವಳಿ
ಮಂಗಳೂರು, ನ.6: ಸರ್ಕಾರ ಬೀಳ್ತದೆ, ಬೀಳ್ತದೆ ಅಂತ ಕೆಲವರು ಕಾಯುತ್ತಿದ್ದಾರೆ, ಕೈಗೆಟುಕದ ದ್ರಾಕ್ಷಿಯನ್ನು ನರಿ ಕಾದಂತೆ. ಅವೆಲ್ಲ ತಿರುಕನ ಕನಸು, 136 ಶಾಸಕರಿಂದ ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿದೆ. ಏನೇ ಅಪಪ್ರಚಾರ ಮಾಡಿದರೂ ಸರ್ಕಾರಕ್ಕೇನೂ ಆಗಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿಯವರು ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಕೆಟ್ಟ ಹೆಸರು ಬರುವಂತೆ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರು, ಸಿದ್ದರಾಮಯ್ಯ ಸರ್ಕಾರ ಬಿದ್ದೋಗುತ್ತೆ ಎಂದು ಹೇಳುತ್ತಿದ್ದಾರೆ. ಇವರು ಯಾವುದೇ ರೀತಿಯ ಅಪಪ್ರಚಾರ ಮಾಡಿದರೂ ಇವರ ಕುತಂತ್ರ ಬುದ್ಧಿಯನ್ನು ಜನ ಅರ್ಥ ಮಾಡಿಕೊಳ್ತಿದ್ದಾರೆ. ಬಡವರ ಪರವಾಗಿ ಯೋಜನೆಗಳನ್ನು ಪ್ರಕಟಿಸಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ. ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ ಎಲ್ಲ ನಿಗಮಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಿತ್ತು. ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದು ಕಾಂಗ್ರೆಸ್. ಬಡವರಿಗೆ ಬೇಕಾದ ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್.
ಈ ಬಾರಿ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಎಲ್ಲ ಜನರಿಗೂ ಹತ್ತಿರವಾಗುತ್ತಿದೆ. ಶಕ್ತಿ ಯೋಜನೆ ಭರಪೂರ ಯಶಸ್ಸು ಕಂಡಿದೆ. ಗೃಹಜ್ಯೋತಿ ಲಾಭ ಜನರಿಗೆ ಸಿಕ್ಕಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಲಾಭ ಸಿಗುತ್ತಿದೆ. ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಮೋದಿ ಸರಕಾರ ದೊಡ್ಡ ಬಂಡವಾಳಶಾಹಿಗಳ, ಕಾರ್ಪೊರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಿದೆ. ಬಡವರ ಪರ ಯಾರಿದ್ದಾರೆ ಅನ್ನುವುದು ಜನರಿಗೆ ತಿಳಿಯುತ್ತಿದೆ. 2013ರಲ್ಲಿ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳನ್ನೂ ಗೆದ್ದ ಇತಿಹಾಸ ಇದೆ. ಹಾಗಾಗಿ, ಕಾಂಗ್ರೆಸ್ ಬಲಿಷ್ಠವಾಗಿದ್ದು ಮತ್ತೆ ಲೋಕಸಭೆಯಲ್ಲಿ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.
ಜಿಲ್ಲೆಯ ಕೆಲವು ಬಿಜೆಪಿ ಶಾಸಕರು ಸರಕಾರ ತಮ್ಮ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ನಾವು ಪ್ರತಿಪಕ್ಷದಲ್ಲಿದ್ದಾಗ ಆ ರೀತಿ ಹೇಳಿದ್ದು ಇಲ್ಲ. ಇಚ್ಛಾಶಕ್ತಿ ಕೊರತೆಯಿಂದ ಈ ರೀತಿ ಆಗಿದೆ. ನಮ್ಮ ಸರಕಾರ ಹಣ ಬಿಡುಗಡೆ ಮಾಡಲ್ಲ ಎಂದಿಲ್ಲ. ಹಿಂದಿನ ಯೋಜನೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಮಂಜೂರಾತಿ ಇಲ್ಲದೆ ಅಡ್ವಾನ್ಸ್ ಕೆಲಸ ಮಾಡಿದ್ದರೆ, ಅದಕ್ಕೆ ಯಾರು ಹೊಣೆ ಆಗುತ್ತಾರೆ ಎಂದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಜೆಪಿ ಸರಕಾರ ಇದ್ದಾಗ ನಲ್ವತ್ತು ಪರ್ಸೆಂಟ್ ಆರೋಪಿಸಿದ್ದು ಇದೇ ಕೆಂಪಣ್ಣ. ಆಗ ಆರೋಪದ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಏಜಂಟ್ ಎಂದಿದ್ದರು. ಈಗ ಮತ್ತೆ ಆರೋಪ ಮಾಡುತ್ತಿರುವುದರಿಂದ ಕೆಂಪಣ್ಣ ಕಾಂಗ್ರೆಸ್ ವ್ಯಕ್ತಿ ಅಲ್ಲ ಅನ್ನುವುದು ಸಾಬೀತಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ, ಮರಳಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿದ್ದೇನೆ. ನಾನ್ ಸಿಆರ್ ಝೆಡ್ ಮರಳಿನ ಗುತ್ತಿಗೆ ಶೀಘ್ರದಲ್ಲೇ ಕೊಡಲಿದ್ದಾರೆ ಎಂದರು. ಸಿಆರ್ ಝೆಡ್ ಮರಳಿನ ಬಗ್ಗೆ ರಾಜ್ಯ ಸರಕಾರ ಪ್ರಸ್ತಾವನೆ ಕಳಿಸಿ, ಕೇಂದ್ರ ಅನುಮತಿ ನೀಡಬೇಕು. ಆದರೆ ಆ ಕೆಲಸ ಆಗುತ್ತಿಲ್ಲ, ಕಳೆದ ಬಾರಿ ಶಾಸಕರ ಕುಮ್ಮಕ್ಕಿನಿಂದಲೇ ಅಕ್ರಮ ಮರಳುಗಾರಿಕೆ ನಡೆದಿತ್ತು. ಅದರ ಬಗ್ಗೆ ಸಾಕ್ಷಿ ಸಹಿತ ಹೇಳಬಲ್ಲೆ. ಆದರೆ, ಈಗ ಅಕ್ರಮ ಮರಳುಗಾರಿಕೆ ಆಗುತ್ತಿಲ್ಲ. ನಾಲ್ಕು ವರ್ಷದಿಂದಲೇ ವೇವ್ ಬ್ರಿಡ್ಜ್ ಮಾಡಬೇಕೆಂದು ನಿಯಮ ಇತ್ತು. ಯಾಕೆ ಬಿಜೆಪಿ ಅವಧಿಯಲ್ಲಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಲೋಕಸಭೆಗೆ ಯಾರು ಅಭ್ಯರ್ಥಿ ಎಂಬ ಪ್ರಶ್ನೆಗೆ, ಯಾರೇ ಅಭ್ಯರ್ಥಿಯಾದರೂ ನಾವೆಲ್ಲ ಒಟ್ಟು ಸೇರಿ ಗೆಲ್ಲಿಸುತ್ತೇವೆ. ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಜೆಆರ್ ಲೋಬೊ, ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಹರೀಶ್ ಸಾಲ್ಯಾನ್, ಶಶಿಧರ್ ಹೆಗ್ಡೆ, ಧರಣೇಂದ್ರ ಕುಮಾರ್ ಮತ್ತಿತರರಿದ್ದರು.
Mangalore BJP is waiting for Congress governmemt to fall in Karnataka like cunning fox, Ramanath Rai.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm