ಬ್ರೇಕಿಂಗ್ ನ್ಯೂಸ್
06-11-23 11:02 pm Mangalore Correspondent ಕರಾವಳಿ
ಮಂಗಳೂರು, ನ.6: ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಬಳಕೆಗೆಂದು ಖರೀದಿಸಿದ್ದ ಇನ್ನೋವಾ ಕ್ರಿಸ್ಟಾ ಕಾರು ಬೆಂಗಳೂರಿನಲ್ಲಿ ಓಡಾಡುತ್ತಿದೆ. ಹೌದು.. ದೇವಸ್ಥಾನದ ದುಡ್ಡಿನಲ್ಲಿಯೇ ಬೆಂಗಳೂರಿನಲ್ಲಿ ಅಧಿಕಾರಿಗಳ ಸೇವೆಗೆ ಈ ಕಾರು ಬಳಕೆಯಾಗುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ವಿಐಪಿಗಳ ಉಪಯೋಗಕ್ಕೆಂದು 2019ರಲ್ಲಿ ಹೊಸ ಇನ್ನೋವಾ ಕಾರನ್ನು ಖರೀದಿಸಲಾಗಿತ್ತು. ಆರಂಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರೇ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಎರಡೇ ತಿಂಗಳಲ್ಲಿ ಈ ಕಾರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದಿತ್ತು. ಆಕರ್ಷಕವಾಗಿದ್ದ ಈ ಕಾರನ್ನು ತಮಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಬೆಂಗಳೂರಿನ ಇಲಾಖಾ ಆಯುಕ್ತರ ಕಚೇರಿಗೆ ಕಳುಹಿಸಿಕೊಡಲು ಸೂಚನೆ ಬಂದಿತ್ತು. ಕೂಡಲೇ ಕಳಿಸಿಕೊಡದಿದ್ದರೆ ಕ್ರಮ ಜರುಗಿಸುತ್ತೇವೆ ಎಂದು 2019ರ ಡಿಸೆಂಬರ್ 12ರಂದು ಇಲಾಖೆ ಆಯುಕ್ತರು ಬೆದರಿಸಿದ್ದರು. ಇದಕ್ಕೆ ಹೆದರಿದ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳು ಮರುದಿನವೇ ಆ ವಾಹನವನ್ನು ಬೆಂಗಳೂರಿಗೆ ಕಳಿಸಿಕೊಟ್ಟಿದ್ದರು.
ವಿಶೇಷ ಅಂದ್ರೆ, ದೇವಸ್ಥಾನದಿಂದ ಕೊಟ್ಟಿದ್ದ ಕಾರು ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಅಧಿಕಾರಿಗಳ ಸೇವೆ ಮಾಡುತ್ತಿದ್ದರೂ, ಪ್ರತಿವರ್ಷ ಇನ್ಶೂರೆನ್ಸ್, ವಾಹನ ನಿಯಮಗಳ ಉಲ್ಲಂಘನೆಗೆ ನೀಡಲಾಗುವ ದಂಡದ ಮೊತ್ತ ದೇವಸ್ಥಾನದಿಂದಲೇ ತೆರಲಾಗುತ್ತಿದೆ. ಹಲವು ಬಾರಿ ದಂಡದ ಮೊತ್ತವನ್ನು ದೇಗುಲದ ಖಾತೆಯಿಂದಲೇ ಸಂದಾಯ ಮಾಡಲಾಗಿದೆ. ಎರಡು ತಿಂಗಳಿಗೊಮ್ಮೆ 50 ಸಾವಿರ ರೂಪಾಯಿ ಮೊತ್ತವನ್ನು ಕಾರಿನ ನಿರ್ವಹಣೆ ಹಾಗೂ ಇತರ ಖರ್ಚು ಎಂದು ದೇವಸ್ಥಾನದಿಂದಲೇ ಭರಿಸಲಾಗುತ್ತಿದೆ.
ಕಾರನ್ನು ಬೆಂಗಳೂರು ಇಲಾಖೆ ಕಚೇರಿಯಲ್ಲಿ ಬಳಕೆ ಮಾಡಿ, ಅದರ ನಿರ್ವಹಣಾ ಮೊತ್ತವನ್ನು ದೇವಸ್ಥಾನದ ಖಾತೆಯಿಂದ ಭರಿಸುತ್ತಿರುವುದಕ್ಕೆ ಲೆಕ್ಕ ಪರಿಶೋಧನೆ ವೇಳೆ ಆಕ್ಷೇಪ ವ್ಯಕ್ತವಾಗಿದೆ. ಇದರಿಂದಾಗಿ ಇತ್ತೀಚೆಗೆ ಎರಡು ತಿಂಗಳಿಗೊಮ್ಮೆ ಸಲ್ಲಿಕೆಯಾಗುತ್ತಿದ್ದ ನಿರ್ವಹಣಾ ಮೊತ್ತಕ್ಕೆ ತಡೆ ಬಿದ್ದಿದೆ. ಇನ್ಶೂರೆನ್ಸ್, ದಂಡ ಸೇರಿ ಇತರೇ ಖರ್ಚನ್ನು ದೇವಳದಿಂದಲೇ ಸಂದಾಯ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ದೇವಸ್ಥಾನದ ಸಿಇಓ ಲಿಂಗಯ್ಯ ಅವರಲ್ಲಿ ಕೇಳಿದಾಗ, ಆ ಕಾರನ್ನು ಮರಳಿ ಸುಬ್ರಹ್ಮಣ್ಯಕ್ಕೇ ಕಳಿಸುವಂತೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಮಾಡೋ ರೀತಿ ಬೆಂಗಳೂರಿನ ಅಧಿಕಾರಿಗಳು ನಾಲ್ಕು ವರ್ಷಗಳಿಂದ ದೇವಸ್ಥಾನದ ದುಡ್ಡಲ್ಲಿ ಕಾರನ್ನು ಓಡಿಸುತ್ತ ಮೆರೆದಾಡಿದ್ದಾರೆ.
Kukke Subramanya is the richest temple in the muzrai department in the state. The Innova Crysta, which was purchased four years ago for temple use, is plying in Bengaluru. Yes The car is being used for the service of officials in Bengaluru with the temple's money.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
25-05-25 04:29 pm
HK News Desk
Mangalore Ship, Container: ಕೊಚ್ಚಿ ಬಳಿಯಲ್ಲಿ ಬೃ...
25-05-25 02:14 pm
Drone Attack, Russia, Brijesh Chowta: ಪಾಕ್ ಭಯ...
23-05-25 08:08 pm
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
25-05-25 04:19 pm
Mangalore Correspondent
Mangalore CCB, MFC Hotel Owner Siddique Arres...
25-05-25 02:46 pm
ಕೇರಳಕ್ಕೆ ಮುಂಗಾರು ಎಂಟ್ರಿ ; 16 ವರ್ಷಗಳ ಬಳಿಕ ಎಂಟು...
24-05-25 04:29 pm
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm