Heart attack, Mangalore, Reasons: ಉಪ್ಪಿನಂಗಡಿ ; ಹೃದಯಾಘಾತಕ್ಕೆ 18 ವರ್ಷದ ಯುವಕ ಬಲಿ, ಕೋವಿಡ್ ಬಳಿಕ ಹೆಚ್ಚುತ್ತಿದ್ಯಾ ಹಾರ್ಟ್ ಅಟ್ಯಾಕ್ ? ವಾಯು ಮಾಲಿನ್ಯದಿಂದಲೂ 'ಹೃದ್ರೋಗ' ಸಮಸ್ಯೆ, ತಜ್ಞರ ವಿವರಣೆ 

07-11-23 09:19 pm       Mangalore Correspondent   ಕರಾವಳಿ

ಹೃದಯಾಘಾತಕ್ಕೆ ಒಳಗಾಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಉಪ್ಪಿನಂಗಡಿ, ನ 07: ಹೃದಯಾಘಾತಕ್ಕೆ ಒಳಗಾಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಯೂಸುಫ್ ಎಂಬವರ ಪುತ್ರ ಮಹಮ್ಮದ್ ಇರ್ಫಾನ್ (18 )ಮೃತಪಟ್ಟ ಯುವಕ. ಪುತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಎ.ಸಿ. ಮೆಕ್ಯಾನಿಕ್ ವ್ಯಾಸಂಗ ಮಾಡುತ್ತಿದ್ದ ಇರ್ಫಾನ್ ಎಂದಿನಂತೆ ತರಗತಿ ಮುಗಿದು ಸಂಜೆ ಮನೆಗೆ ಬಂದಿದ್ದ.

ಸಾಯಂಕಾಲ 6 ಗಂಟೆಯ ವೇಳೆಗೆ ಇರ್ಫಾನ್ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ ಕುಸಿದು ಬಿದ್ದಾಗ ಮನೆಯವರು ತಕ್ಷಣ ನೆಲ್ಯಾಡಿಯ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.

ಮೃತ ಯುವಕ ತಂದೆ, ತಾಯಿ, ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

ಕೋವಿಡ್ ಲಸಿಕೆಯಿಂದ ಹಾರ್ಟ್ ಅಟ್ಯಾಕ್ ಆಗಿಲ್ಲ ಅಂತ ಕೇಂದ್ರ ಸಚಿವರು ಕೂಡ ಹೇಳಿದ್ದಾರೆ. ಆದರೆ ಈಗಾಗಲೇ ದೇಶದ 90%ರಷ್ಟು ಜನರಿಗೆ ಕೋವಿಡ್ ಬಂದಿದೆ. ಚಿಕ್ಕ ವಯಸ್ಸಿನಲ್ಲಿರುವವರಿಗೆ ಕೋವಿಡ್ ಬಂದಿರೋದು ಹೊಸದೇನಲ್ಲ. ಆದರೆ ಕೋವಿಡ್‌ಗೂ‌ ಮೊದಲಿನಿಂದಲೇ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತ ಆಗ್ತಿದೆ ಅಂತ ಡಾ. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.

What Causes a Heart Attack at a Young Age?

ಶೇ. 25ರಷ್ಟು ಯುವಕರಲ್ಲಿ ಕಾರಣಗಳಿಲ್ಲ!

ಯಂಗ್ ಹಾರ್ಟ್ ಅಟ್ಯಾಕ್ ಗ್ರೂಪ್‌ನಲ್ಲಿ‌ ಶೇಕಡಾ 8ರಷ್ಟು ಮಹಿಳೆಯರಿದ್ದಾರೆ. ಶೇಕಡಾ 25ರಷ್ಟು ರೋಗಿಗಳಿಗೆ ನಿಖರವಾದ ಯಾವುದೇ ಇತರೇ ತೊಂದರೆಗಳು ಇಲ್ಲ. ಶೇಕಡಾ 25ರಷ್ಟು ಯುವಕ ರೋಗಿಗಳಲ್ಲಿ ಯಾವುದೇ ರೀಸನ್ ಇಲ್ಲ ಅಂತ ಡಾ. ಮಂಜುನಾಥ್ ಹೇಳಿದ್ದಾರೆ.

Tiny Particles Of Air Pollutants Might Trigger Heart Attacks - KalingaTV

ವಾಯು ಮಾಲಿನ್ಯದಿಂದಲೂ ಹೃದಯಾಘಾತ!

ವಾಯು ಮಾಲಿನ್ಯ ಹೊಸ ಕಾರಣವಾಗಿ ಹೊರ ಹೊಮ್ಮುತ್ತಿದೆ. 2.5 ಮೈಕ್ರಾನ್ಸ್ ಗಿಂತ ಚಿಕ್ಕದಿರೋ ಕಣಗಳು ಶ್ವಾಸನಾಳದಿಂದ ಹೋಗಿ ರಕ್ತ ಕ್ಲಾಟ್ ಆಗಬಹುದು. ಫ್ರೀ ಡಯಾಬಿಟಿಸ್ ಇದ್ದವರಿಗೂ ಹೃದಯಾಘಾತ ಆಗ್ತಿದೆ ಅಂತ ಡಾ. ಮಂಜುನಾಥ್ ಎಚ್ಚರಿಸಿದ್ದಾರೆ.

Heart attacks, stroke and Hypertension - UPMC Western Maryland

ಹೃದಯಾಘಾತಕ್ಕೆ ಇವುಗಳೂ ಕಾರಣ!

ಪ್ರೀ ಡಯಾಬಿಟಿಸ್ ಇದ್ದವರಿಗೆ ಡಯಾಬಿಟಿಸ್ ಇದ್ದ ಲೆಕ್ಕವೇ. ಧೂಮಪಾನ, ಅತಿಯಾದ ಮದ್ಯಪಾನ, ಸೋಮಾರಿತನ, ಒತ್ತಡ ಇವುಗಳು ಹೃದಯಾಘಾತಕ್ಕೆ ಪ್ರಮುಖ ಕಾರಣಗಳು ಅಂತ ಡಾ. ಮಂಜುನಾಥ್ ಎಚ್ಚರಿಸಿದ್ದಾರೆ.

18 year old youth dies of heart attack in Uppinangady, Mangalore. Even air pollution reason for heart attack says Dr Manjunath.