ಬ್ರೇಕಿಂಗ್ ನ್ಯೂಸ್
07-11-23 09:43 pm Mangalore Correspondent ಕರಾವಳಿ
ಮಂಗಳೂರು, ನ.7: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಸ್ಥಾಪಿಸಲಾದ ಮೂರ್ತಿ ನಕಲಿಯಾಗಿದ್ದು ಈ ಬಗ್ಗೆ ಶಾಸಕ ಸುನಿಲ್ ಕುಮಾರ್ ಅವರನ್ನೇ ಗುರಿಯಾಗಿಸಿ ಉನ್ನತ ಮಟ್ಟದ ತನಿಖೆಯಾಗಬೇಕು. ಸುನಿಲ್ ಕುಮಾರ್ ಹಿಂದುತ್ವದ ಹೆಸರಲ್ಲಿ ಹಿಂದುಗಳಿಗೆ, ಪರಶುರಾಮನಿಗೆ ಅವಮಾನಿಸಿದ್ದಾರೆ. ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ. ಬಿಜೆಪಿಯವರು ಸುನಿಲ್ ಕುಮಾರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದ್ದಾರೆ.
ನಗರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಿಥುನ್ ರೈ, ಪರಶುರಾಮನ ಹೆಸರಲ್ಲಿ, ಹಿಂದು ದೇವರ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ, ಹಿಂದು ಸಂಘಟನೆಗಳು ಈಗ ಯಾಕೆ ಮಾತನಾಡುತ್ತಿಲ್ಲ. ಪರಶುರಾಮನಿಗೆ ಅವಮಾನಿಸಿದ್ದರೂ, ಯಾಕೆ ಸುಮ್ಮನಿದ್ದಾರೆ. ಒಂದ್ವೇಳೆ ಕಾಂಗ್ರೆಸ್ ಸರಕಾರದಲ್ಲಿ ಹೀಗಾಗುತ್ತಿದ್ದರೆ ಇವರೆಲ್ಲ ಸೇರಿ ಇಡೀ ಜಿಲ್ಲೆಗೆ ಬೆಂಕಿ ಹಾಕುತ್ತಿದ್ದರು. ಈಗ ಯಾಕೆ ಬಾಯಿಗೆ ಬೀಗ ಹಾಕಿ ಕುಳಿತಿದ್ದಾರೆ ಎಂದು ಪ್ರಶ್ನಿಸಿದರು.
ಪರಶುರಾಮನ ಮೂರ್ತಿಯೇ ನಕಲಿ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದಲ್ಲದೆ, ಈಗ ಅರ್ಧ ಮೂರ್ತಿಯನ್ನೇ ತೆಗೆದು ಹಾಕಿದ್ದಾರೆ. ಫೌಂಡೇಶನ್ ಭಾಗ ಕಂಚಿನದ್ದು ಮೇಲ್ಭಾಗದಲ್ಲಿ ಫೈಬರ್ ಮಿಕ್ಸ್ ಇರುವುದು ಪತ್ತೆಯಾಗಿದೆ. ಈಗ ಸ್ಥಳೀಯರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ನಾವು ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿಗೆ ದೂರು ಕೊಟ್ಟಿದ್ದೇವೆ. ತನಿಖೆ ಮಾಡುವ ಭರವಸೆ ನೀಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಮಿಥುನ್ ರೈ ಒತ್ತಾಯಿಸಿದ್ದಾರೆ. ಇದಲ್ಲದೆ, ಬಿಜೆಪಿ ಸರಕಾರದ ಅವಧಿಯಲ್ಲೇ ಬೈಲೂರಿನ ಯರ್ಲಪಾಡಿ ಗ್ರಾಮದ ಥೀಮ್ ಪಾರ್ಕ್ ಮಾಡಿರುವ ಜಾಗ ಗೋಮಾಳಕ್ಕೆ ಸೇರಿದ್ದು, ಆ ಜಾಗದಲ್ಲಿ ಥೀಮ್ ಪಾರ್ಕ್ ಮಾಡಲು ಅವಕಾಶ ಇಲ್ಲ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿಯೇ ಆದೇಶ ಮಾಡಿದ್ದರು. ಈ ಬಗ್ಗೆ ಉಡುಪಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸುನಿಲ್ ಕುಮಾರ್ ಗಮನಕ್ಕೆ ತಂದರೂ, ಅವರಿಗೆ ಒತ್ತಡ ಹೇರಿ ಕಾಮಗಾರಿ ಮಾಡಿಸಿದ್ದಾರೆ ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ 6 ಕೋಟಿ,, ಮಲೆನಾಡು ಅಭಿವೃದ್ಧಿ ಮಂಡಳಿಯಿಂದ 99 ಲಕ್ಷ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 1.5 ಕೋಟಿ, ಕನ್ನಡ ಸಂಸ್ಕೃತಿ ಇಲಾಖೆಯಿಂದ 55 ಲಕ್ಷ, ಜಿಲ್ಲಾಧಿಕಾರಿಯ ಸಿಎಸ್ ಆರ್ ಫಂಡ್ ಒಂದು ಕೋಟಿ ಹೀಗೆ ಒಟ್ಟು 11.5 ಕೋಟಿ ರೂ. ಥೀಮ್ ಪಾರ್ಕ್ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 8.7 ಕೋಟಿ ರೂಪಾಯಿ ಖರ್ಚಾಗಿದೆ ಎಂದು ನಿರ್ಮಿತಿ ಕೇಂದ್ರ ಮಾಹಿತಿ ನೀಡಿದೆ. ಆದರೆ ಶಾಸಕ ಸುನಿಲ್ ಕುಮಾರ್, ಉದ್ಘಾಟನೆ ಸಂದರ್ಭದಲ್ಲಿ 14 ಕೋಟಿ ಖರ್ಚಾಗಿದ್ದಾಗಿ ಹೇಳಿಕೊಂಡಿದ್ದರು. ಚುನಾವಮೆ ಸೋಲುವ ಭಯದಲ್ಲಿಯೋ ಏನೋ ತರಾತುರಿಯಲ್ಲಿ ಕಾಮಗಾರಿ ಮಾಡಿಸಿದ್ದರು. ಈಗ ಸಾರ್ವಜನಿಕರಿಗೆ ನಿಷೇಧ ವಿಧಿಸಿ ಥೀಮ್ ಪಾರ್ಕನ್ನೇ ಬಂದ್ ಮಾಡಿಸಿದ್ದಾರೆ.
ನಾವು ಈಗ ಹೋರಾಟ ಕೈಗೆತ್ತಿಕೊಂಡಿದ್ದು, ಬಜರಂಗದಳ, ವಿಶ್ವ ಹಿಂದು ಪರಿಷತ್ ಸೇರಿ ಎಲ್ಲ ಹಿಂದು ಸಂಘಟನೆಗಳ ಬೆಂಬಲ ಕೋರುತ್ತೇವೆ. ಅಲ್ಲದೆ, ಎಲ್ಲ ಮಠಾಧೀಶರ ಬೆಂಬಲವನ್ನೂ ಕೇಳಿ, ಸ್ವಾಮೀಜಿಗಳನ್ನು ಭೇಟಿಯಾಗುತ್ತೇವೆ. ಈ ರೀತಿಯ ಅಕ್ರಮವನ್ನು ನಾವು ಪ್ರಶ್ನೆ ಮಾಡದಿದ್ದರೆ, ಪರಶುರಾಮನ ಶಾಪ ತಟ್ಟದೇ ಇರುವುದಿಲ್ಲ. ಸುನಿಲ್ ಕುಮಾರ್ ಮಾಡಿರುವ ಅಕ್ರಮವನ್ನು ಹೊರಗೆ ತಂದಿದ್ದೇ ಪರಶುರಾಮ. ಅಧರ್ಮದ ವಿರುದ್ಧ ಪರಶುರಾಮನೇ ತನ್ನ ಕೊಡಲಿ ಎಸೆದು ಸೃಷ್ಟಿಸಿದ್ದ ಈ ತುಳುವ ನಾಡಿಗೆ ಈಗ ಸುನಿಲ್ ಕುಮಾರ್ ಅಪಮಾನ ಮಾಡಿದ್ದಾರೆ. ದೇವರು, ಹಿಂದುತ್ವ ಎಂದು ರಾಜಕೀಯ ಮಾಡುವ ಇವರ ಒಳ ಮರ್ಮವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಮಿಥುನ್ ರೈ ಹೇಳಿದರು.
ಮುಂದೇನು ಮಾಡುತ್ತೀರಿ, ಪರಶುರಾಮನ ಕಂಚಿನ ವಿಗ್ರಹವೇ ಮಾಡುತ್ತೀರಾ ಎಂಬ ಪ್ರಶ್ನೆಗೆ, ಪರಶುರಾಮ ಅನುಗ್ರಹಿಸಿದರೆ ಕಂಚಿನದ್ದೇ ಮೂರ್ತಿಯನ್ನು ಸ್ಥಾಪನೆ ಮಾಡುತ್ತೇವೆ. ಆದರೆ ಅಲ್ಲಿನ ಫೌಂಡೇಶನ್ನೇ ಅಷ್ಟು ಭಾರವನ್ನು ಹೊತ್ತುಕೊಳ್ಳುತ್ತಾ ಅನ್ನೋದನ್ನು ತಜ್ಞರೇ ಹೇಳಬೇಕು. ನಮಗೆ ಪರಶುರಾಮ ದೇವರ ಬಗ್ಗೆ ಗೌರವ ಇದೆ. ನಾನೊಬ್ಬ ನೈಜ ಹಿಂದುವಾಗಿದ್ದು ಸುನಿಲ್ ಕುಮಾರ್ ಗೆ ಧಾರ್ಮಿಕ ಕ್ಷೇತ್ರ ಅಲ್ಲದೇ ಇರಬಹುದು. ನಮಗೆಲ್ಲ ಪರಶುರಾಮನ ಮೂರ್ತಿ ಮತ್ತು ಥೀಮ್ ಪಾರ್ಕ್ ಬಗ್ಗೆ ಗೌರವ ಇದೆ ಎಂದು ಹೇಳಿದರು. ಸುನಿಲ್ ಕುಮಾರ್ ಮುಂದೆಯೂ ಬಿಜೆಪಿ ಸರಕಾರವೇ ಬರುತ್ತೆ ಎಂದುಕೊಂಡು ಈ ರೀತಿ ಮಾಡಿರಬಹುದು. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾರ್ಕಳ ಪುರಸಭೆ ಸದಸ್ಯ ಶುಭದ ರಾವ್, ಪ್ರವೀಣಚಂದ್ರ ಆಳ್ವ, ಎಸಿ ವಿನಯರಾಜ್, ಅನಿಲ್ ಪೂಜಾರಿ, ಪ್ರಕಾಶ್ ಸಾಲ್ಯಾನ್, ಮೋಹನ್ ಕೋಟ್ಯಾನ್, ವಿಶ್ವಾಸದಾಸ್ ಮತ್ತಿತರರಿದ್ದರು.
Parashurama statue in Karkala, Sunil Kumar MLA has done injustice to Tulunadu says Mithun Rai. Why were the propagators of Hindutva silent when the Parashurama's statue in Karkala being made of fibre claimed that it was made of bronze. The people of Tulunadu are being fooled by falsehood and lies,” said Congress leader Mithun Rai.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 01:25 pm
Mangalore Correspondent
Mangalore Cyber Fraud, Crime: ಜಾಲತಾಣದಲ್ಲಿ ಲೈಕ...
27-11-24 11:04 pm
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm