ಬ್ರೇಕಿಂಗ್ ನ್ಯೂಸ್
08-11-23 04:35 pm Mangalore Correspondent ಕರಾವಳಿ
ಉಳ್ಳಾಲ, ನ.8: ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆಗಳನ್ನ ಸರಿಪಡಿಸಲು ಎರಡು ವಾರಗಳ ಗಡುವು ನೀಡಿದರೂ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದ ಕಾರಣ ಡಿವೈಎಫ್ ಐ ನಿಯೋಗವು ಬುಧವಾರ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ ನೀಡಿದೆ.
ಉಳ್ಳಾಲದ ಸರಕಾರಿ ಆಸ್ಪತ್ರೆಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಇಲ್ಲಿ ಖಾಯಂ ಸರಕಾರಿ ವೈದ್ಯರೇ ಇಲ್ಲ. ಆಪರೇಷನ್ ಥಿಯೇಟರ್ ಇದ್ದರೂ ಅಲ್ಲಿ ಆಪರೇಷನ್ ಗಳೇ ನಡೆಯೋದಿಲ್ಲ. ಸ್ಕ್ಯಾನಿಂಗ್, ಡಯಾಲಿಸಿಸ್, ಲ್ಯಾಬ್ ಸೆಂಟರ್ ಗಳೂ ಸಿಬ್ಬಂದಿಗಳಿಲ್ಲದೆ ಧೂಳು ಹಿಡಿದು ಬಿಕೋ ಎನ್ನುತ್ತಿವೆ. ಇಲ್ಲಿ ಇದ್ದ ಶವಾಗಾರಕ್ಕೂ ಬೀಗ ಜಡಿಯಲಾಗಿದೆ. ಬಾಲಿವುಡ್ ಸ್ಟಾರ್ ಸೋನು ಸೂದ್ ದೇಣಿಗೆಯಾಗಿ ನೀಡಿದ್ದ ಆಕ್ಸಿಜನ್ ಸಿಲಿಂಡರ್ ಗಳು ಆಸ್ಪತ್ರೆ ಆವರಣದಲ್ಲಿ ಪಾಲು ಬಿದ್ದಿದೆ.
ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿದರೂ ಇಲ್ಲಿ ಜನ ಸಾಮಾನ್ಯರಿಗೆ ಬೇಕಾಗಿರುವ ಆರೋಗ್ಯ ಸೇವೆಯೇ ಲಭಿಸದ ವಿರುದ್ಧ ಕಳೆದ ತಿಂಗಳು ಡಿವೈಎಫ್ ಐ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿತ್ತು. ಅಂದು ಆರೋಗ್ಯಾಧಿಕಾರಿಗಳು ಎರಡು ವಾರಗಳಲ್ಲಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅಧಿಕಾರಿಗಳು ತಮ್ಮ ಬೇಡಿಕೆ ಈಡೇರಿಸದ ಕಾರಣ ಡಿವೈಎಫ್ ಐ ನ ಉಳ್ಳಾಲ ತಾಲೂಕು ಸಮಿತಿಯ ಮುಖಂಡರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವೈದ್ಯಾಧಿಕಾರಿ ಡಾ.ತಾರಾ ಅವರಲ್ಲಿ ಮಾತುಕತೆ ನಡೆಸಿದ ಮುಖಂಡರು ಶೀಘ್ರದಲ್ಲಿ ವೈದ್ಯರ ನೇಮಕ ಹಾಗೂ ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತವಾಗಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿಯ ಎಚ್ಚರಿಕೆ ನೀಡಿದರು.
ಡಿವೈಎಫ್ ಐ ಉಳ್ಳಾಲ ತಾಲೂಕು ಅಧ್ಯಕ್ಷರಾದ ರಝಾಕ್ ಮೊಂಟೆಪದವು ಮಾತನಾಡಿ ನಾವು ಕಳೆದ ಬಾರಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಪತ್ರಿಕಾಗೋಷ್ಠಿ ಕರೆದು ಆಸ್ಪತ್ರೆ ಸುಸಜ್ಜಿತವಾಗಿದ್ದು ರಾಷ್ಟ್ರದಲ್ಲೇ ನಂ.1 ಗುಣಮಟ್ಟ ಹೊಂದಿದೆ. ಇದರ ವಿರುದ್ಧ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದರು. ಸದಾಶಿವರು ನಮ್ಮೊಂದಿಗೆ ಬಂದು ಆಸ್ಪತ್ರೆಯನ್ನ ಪರಿಶೀಲಿಸಲಿ, ಇಲ್ಲಿಗೆ ಎಷ್ಟು ವೈದ್ಯರು, ನರ್ಸ್, ಸಿಬ್ಬಂದಿ ಬೇಕೆಂದು ಪಟ್ಟಿ ತಯಾರಿಸಿ ಬಳಿಕ ಈ ಆಸ್ಪತ್ರೆಗೆ ರಾಷ್ಟ್ರೀಯ ಸ್ಥಾನಮಾನ ನೀಡಲಿ ಎಂದರು.
ಖಾಸಗಿ ಆಸ್ಪತ್ರೆ ಜತೆ ಸರಕಾರಿ ಆಸ್ಪತ್ರೆಗಳ ಒಡಂಬಡಿಕೆ ಸಮಂಜಸವಲ್ಲ. ಇಲ್ಲಿಗೆ ಖಾಯಂ ವೈದ್ಯರು, ಸಿಬ್ಬಂದಿಗಳನ್ನ ನೇಮಿಸುವುದು ಸರಕಾರದ ಕರ್ತವ್ಯ.15 ದಿವಸಗಳಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಮತ್ತೆ ಆಸ್ಪತ್ರೆ ಮುಂದೆ ನಾಗರಿಕರನ್ನ ಸೇರಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆಂದು ರಝಾಕ್ ಎಚ್ಚರಿಕೆ ನೀಡಿದರು. ನಿಯೋಗದಲ್ಲಿ ಡಿವೈಎಫ್ಐ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ, ಉಪಾಧ್ಯಕ್ಷ ರಝಾಕ್ ಮುಡಿಪು, ನಿಕಟಪೂರ್ವ ಅಧ್ಯಕ್ಷ ರಫೀಕ್ ಹರೇಕಳ, ಕಟ್ಟಡ ಕಾರ್ಮಿಕ ಮುಖಂಡ ಇಬ್ರಾಹಿಂ ಮದಕ ಮೊದಲಾದವರು ಉಪಸ್ಥಿತರಿದ್ದರು.
Dyfi leaders make suprise visit to Ullal Government hospital.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm