ನೆಹರು ಮೈದಾನದಲ್ಲಿ ದೀಪಾವಳಿ ಪಟಾಕಿ ಸ್ಟಾಲ್ ; ವಿರೋಧ ಮಧ್ಯೆಯೇ ಮಹಾನಗರ ಪಾಲಿಕೆಯಿಂದ ಹರಾಜು, ಹೈಕೋರ್ಟ್ ಆದೇಶ ಉಲ್ಲಂಘನೆಯೆಂದು ಆಕ್ಷೇಪ, ಒಂದೇ ಕಡೆ ರಾಶಿ ಹಾಕಿದ್ದಕ್ಕೆ ವ್ಯಾಪಾರಿಗಳಿಗೆ ಪೀಕಲಾಟ

09-11-23 10:40 pm       Mangalore Correspondent   ಕರಾವಳಿ

ನಗರದ ನೆಹರು ಮೈದಾನವನ್ನು ಕೇವಲ ಆಟದ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು, ಸಭೆ, ಸಮಾರಂಭ, ಇನ್ನಿತರ ಉದ್ದೇಶಗಳಿಗೆ ಬಳಸಬಾರದು ಎಂದು ಹೈಕೋರ್ಟ್ ಆದೇಶ ಇದ್ದರೂ ಮಂಗಳೂರು ಮಹಾನಗರ ಪಾಲಿಕೆ ಕೋರ್ಟ್ ಆದೇಶವನ್ನು ಉಲ್ಲಂಘಿಸಲು ಹೊರಟಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸ್ಟಾಲ್ ಗಳನ್ನು ಹಾಕಿ ವ್ಯಾಪಾರ ಉದ್ದೇಶಕ್ಕೆ ಮೈದಾನವನ್ನು ಬಳಸಿಕೊಳ್ಳಲು ಪಾಲಿಕೆ ಮುಂದಾಗಿದೆ.

ಮಂಗಳೂರು, ನ.9: ನಗರದ ನೆಹರು ಮೈದಾನವನ್ನು ಕೇವಲ ಆಟದ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು, ಸಭೆ, ಸಮಾರಂಭ, ಇನ್ನಿತರ ಉದ್ದೇಶಗಳಿಗೆ ಬಳಸಬಾರದು ಎಂದು ಹೈಕೋರ್ಟ್ ಆದೇಶ ಇದ್ದರೂ ಮಂಗಳೂರು ಮಹಾನಗರ ಪಾಲಿಕೆ ಕೋರ್ಟ್ ಆದೇಶವನ್ನು ಉಲ್ಲಂಘಿಸಲು ಹೊರಟಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸ್ಟಾಲ್ ಗಳನ್ನು ಹಾಕಿ ವ್ಯಾಪಾರ ಉದ್ದೇಶಕ್ಕೆ ಮೈದಾನವನ್ನು ಬಳಸಿಕೊಳ್ಳಲು ಪಾಲಿಕೆ ಮುಂದಾಗಿದೆ.

ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆಂದು ಮಹಾನಗರ ಪಾಲಿಕೆಯಿಂದ ಗುರುವಾರ ಮಧ್ಯಾಹ್ನ ಪಟಾಕಿ ವ್ಯಾಪಾರಿಗಳಿಗೆ ಸ್ಟಾಲ್ ಗಳನ್ನು ಹರಾಜು ಮೂಲಕ ವಿತರಣೆ ಮಾಡಲಾಗಿದೆ. ನೆಹರು ಮೈದಾನದ ಕ್ರಿಕೆಟ್ ಅಸೋಸಿಯೇಶನ್ ಕಟ್ಟಡದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು 60 ಸ್ಟಾಲ್ ಗಳನ್ನು ಹರಾಜು ಹಾಕಿದ್ದಾರೆ. 36 ವ್ಯಾಪಾರಿಗಳು ಹರಾಜಿನಲ್ಲಿ ಪಾಲ್ಗೊಂಡಿದ್ದು, ಸ್ಟಾಲ್ ಪಡೆದಿದ್ದಾರೆ. ಆದರೆ, ಆಟದ ಮೈದಾನವನ್ನು ವ್ಯಾಪಾರ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.

Directions to regulate firecrackers meant for entire India, not just Delhi:  Supreme Court - India News News

ಮಾಹಿತಿ ಪ್ರಕಾರ, ಹೈಕೋರ್ಟ್ ಆದೇಶದಂತೆ ಜನವಸತಿ ಕಟ್ಟಡ ಇರುವ ಜಾಗಗಳಲ್ಲಿ ಪಟಾಕಿ ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ನಿಷೇಧ ವಿಧಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ರಸ್ತೆ ಬದಿ ಪಟಾಕಿ ಸ್ಟಾಲ್ ಹಾಕದಂತೆ ಮಹಾನಗರ ಪಾಲಿಕೆ ಬ್ರೇಕ್ ಹಾಕಿದ್ದು, ಇದರ ಬದಲು ಆಯಾ ಭಾಗದ ಮೈದಾನದಲ್ಲಿ ಸ್ಟಾಲ್ ಗಳನ್ನು ಹರಾಜಿನಲ್ಲಿ ವಿತರಣೆ ಮಾಡಿದೆ. ಇದಕ್ಕಾಗಿ ಪತ್ರಿಕೆಯಲ್ಲಿ ಪಾಲಿಕೆಯಿಂದ ಹರಾಜು ಪ್ರಕಟಣೆಯನ್ನೂ ನೀಡಲಾಗಿತ್ತು. ಅದರಂತೆ, ನಗರದ ನೆಹರು ಮೈದಾನ(ಫುಟ್ಬಾಲ್ ಮತ್ತು ಕ್ರಿಕೆಟ್ ಮೈದಾನ- ಒಟ್ಟು 60 ಸ್ಟಾಲ್), ಬೋಂದೆಲ್ ಕ್ರಿಕೆಟ್ ಆಟದ ಮೈದಾನ(25 ಸ್ಟಾಲ್), ಪಚ್ಚನಾಡಿ ಬಳಿಯ ಖಾಲಿ ಜಾಗ(25 ಸ್ಟಾಲ್), ಬೈಕಂಪಾಡಿ ಎಪಿಎಂಸಿ ಖಾಲಿ ಜಾಗ(50 ಸ್ಟಾಲ್) ದಲ್ಲಿ ಸ್ಟಾಲ್ ಗಳನ್ನು ಹಾಕಲು ನ.9ರಂದು ಎಲ್ಲ ಕಡೆಯೂ ಹರಾಜು ಪ್ರಕ್ರಿಯೆ ನಡೆದಿದೆ.

ಪ್ರತಿ ಪಟಾಕಿ ಸ್ಟಾಲ್ ಗಳಿಗೂ ವ್ಯಾಪಾರಿಗಳು ಮಹಾನಗರ ಪಾಲಿಕೆಗೆ 35 ಸಾವಿರ, ಉಳಿದಂತೆ ಅಗ್ನಿಶಾಮಕ ಇನ್ನಿತರ ಪರವಾನಗಿ ಉದ್ದೇಶಕ್ಕಾಗಿ ಒಟ್ಟು 47 ಸಾವಿರದಷ್ಟು ಭರಿಸಬೇಕಾಗಿದೆ. ವ್ಯಾಪಾರಸ್ಥರನ್ನು ಒಂದೇ ಕಡೆ ಕೂಡಿ ಹಾಕಿದರೆ ವ್ಯಾಪಾರ ಹೇಗೆ ಸಾಧ್ಯ ಎಂದು ಹರಾಜು ಪಡೆದವರು ಪ್ರಶ್ನಿಸಿದ್ದಾರೆ. ಉರ್ವಾ, ಕೊಟ್ಟಾರ, ಕಂಕನಾಡಿ ಹೀಗೆ ನಗರ ಭಾಗದ ಎಲ್ಲರೂ ಒಂದೇ ಕಡೆ ಬಂದು ಖರೀದಿಸುತ್ತಾರೆಯೇ.. ಕಾವೂರಿನಲ್ಲಿ ಹಿಂದಿನಿಂದಲೂ ಸ್ಟಾಲ್ ಹಾಕುತ್ತಿದ್ದೆವು. ಈ ಬಾರಿ ಬೋಂದೇಲ್ ಹೋಗಲು ಹೇಳಿದ್ದಾರೆ. ಅಲ್ಲಿ ಯಾರು ಜನರು ಬರುತ್ತಾರೆ. ಕುಲಶೇಖರದಲ್ಲಿ ಸ್ಟಾಲ್ ಹಾಕುವವರನ್ನು ಪಚ್ಚನಾಡಿಗೆ ಬರಲು ಹೇಳಿದ್ದಾರೆ. ನಾಲ್ಕು ದಿನದ ಸ್ಟಾಲ್ ನಲ್ಲಿ ಇಷ್ಟೆಲ್ಲ ಹಣ ಕಟ್ಟಿ ಅಲ್ಲಿ ಹೋಗಿ ವ್ಯಾಪಾರ ಸಾಧ್ಯವೇ ಎಂದು ವ್ಯಾಪಾರಿಗಳು ಪ್ರಶ್ನೆ ಮಾಡಿದ್ದಾರೆ. ನೆಹರು ಮೈದಾನದಲ್ಲಿ 36, ಬೈಕಂಪಾಡಿಯಲ್ಲಿ 20-25, ಬೋಂದೇಲ್ ನಲ್ಲಿ 13 ಸ್ಟಾಲ್ ಹಾಕಲು ಹರಾಜು ಪಡೆದಿದ್ದಾರೆ. ಇದಲ್ಲದೆ, ಹೀಗೆ ಮೈದಾನದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡೋದಾದ್ರೆ ಎಲ್ಲರಿಗೂ ಒಂದೇ ನೀತಿ ಮಾಡಬೇಕು. ಬಂದರಿನಲ್ಲಿ ಹೋಲ್ ಸೇಲ್ ಮಾಡೋದಕ್ಕೂ ಅವಕಾಶ ನೀಡಬಾರದು. ಪಿವಿಎಸ್ ವೃತ್ತದಲ್ಲಿ ಪಟಾಕಿ ಮಾರೋದಕ್ಕೂ ಅವಕಾಶ ನೀಡಬಾರದು ಎಂದು ವ್ಯಾಪಾರಿಗಳು ಆಕ್ಷೇಪ ಹೇಳಿಕೊಂಡಿದ್ದಾರೆ.

Karnataka High Court Upholds Reinstatement Of KPTCL Workman Who Went On  Prolonged Unauthorised Leave Due To Depression

ಹೈಕೋರ್ಟಿನಲ್ಲೇ ಪ್ರಶ್ನೆ ಮಾಡಲು ಸಿದ್ಧತೆ

ಇದೇ ವೇಳೆ, ನೆಹರು ಮೈದಾನವನ್ನು 2020ರಲ್ಲಿ ಹೈಕೋರ್ಟ್ ಕೇವಲ ಆಟದ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದು ಆದೇಶ ಮಾಡಿರುವುದರಿಂದ ಅದನ್ನು ಉಲ್ಲಂಘಿಸಿ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಫುಟ್ಬಾಲ್ ಅಸೋಸಿಯೇಶನ್ ಸಂಘದವರು ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಇದಲ್ಲದೆ, ಹೈಕೋರ್ಟಿನಲ್ಲಿ ಅಪೀಲು ಹೋಗಿ ತಡೆಯಾಜ್ಞೆ ತರುವುದಾಗಿ ಅಸೋಸಿಯೇಶನ್ ಅಧ್ಯಕ್ಷ ಡಿಎಂ ಅಸ್ಲಾಂ ಹೇಳಿದ್ದಾರೆ. ಇನ್ನೊಂದೆಡೆ ನೆಹರು ಮೈದಾನದಲ್ಲಿ ಡಾಕ್ಟರ್ ಅಸೋಸಿಯೇಶನ್ ವತಿಯಿಂದ ನ.11-12ರಂದು ರಾಜ್ಯ ಮಟ್ಟದ ಕ್ರಿಕೆಟ್ ಆಯೋಜಿಸಲಾಗಿದೆ. ಆದರೆ, ನ.11ರಿಂದಲೇ ಪಟಾಕಿ ಸ್ಟಾಲ್ ಹಾಕುವುದಕ್ಕೆ ಮಹಾನಗರ ಪಾಲಿಕೆ ಅವಕಾಶ ನೀಡಿದ್ದು ಒಟ್ಟು ವ್ಯವಸ್ಥೆ ಗೊಂದಲಕ್ಕೀಡು ಮಾಡಿದೆ.

Mangalore city corporation grants permission for setup of cracker stalls at Nehru Maidan amid court order.