ಬ್ರೇಕಿಂಗ್ ನ್ಯೂಸ್
10-11-23 04:57 pm Mangalore Correspondent ಕರಾವಳಿ
ಪುತ್ತೂರು, ನ.10: ಬಿಜೆಪಿ ಮತ್ತು ಹಿಂದು ಜಾಗರಣ ವೇದಿಕೆಯ ಮುಖಂಡನೊಬ್ಬ ತಲವಾರು ಹಿಡಿದು ಪುತ್ತಿಲ ಪರಿವಾರದ ಕಚೇರಿಗೆ ನುಗ್ಗಲು ಯತ್ನಿಸಿದ್ದಲ್ಲದೆ, ಪರಿವಾರದ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಪುತ್ತಿಲ ಪರಿವಾರದ ಮುಕ್ರಂಪಾಡಿಯ ಕಚೇರಿಗೆ ಜಾಗರಣ ವೇದಿಕೆಯ ದಿನೇಶ್ ಪಂಜಿಗ ಎಂಬಾತ ತನ್ನ ಗುಂಪಿನೊಂದಿಗೆ ತಲವಾರನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬಂದು ಗಲಾಟೆ ನಡೆಸಿದ್ದಾನೆ. ತಲವಾರು ಹಿಡಿದು ಮನೀಶ್ ಕುಲಾಲ್ ಇಲ್ಲವೇ.. ಆತನನ್ನು ಬಿಡೋದಿಲ್ಲ ಎಂದು ಹೇಳಿ ದಾಂಧಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು ದಿನೇಶ್ ಸೇರಿ ಐವರನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದಾರೆ. ಕೃತ್ಯದ ಸಂದರ್ಭದಲ್ಲಿ ಮನೀಶ್ ಕುಲಾಲ್ ಸ್ಥಳದಲ್ಲಿ ಇರಲಿಲ್ಲ. ಇತರ ಪ್ರಮುಖರು ಸ್ಥಳದಲ್ಲಿದ್ದು ತಲವಾರು ಹಿಡಿದು ಬಂದಿದ್ದವರನ್ನು ಸಮಾಧಾನ ಪಡಿಸಿದ್ದಾರೆ.


ತಲವಾರನ್ನು ಬೆನ್ನಿಗೆ ಕಟ್ಟಿಕೊಂಡು ಬೆದರಿಕೆ ಹಾಕುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುತ್ತಿಲ ಪರಿವಾರದ ಪ್ರಮುಖ ಮನೀಶ್ ಕುಲಾಲ್ ಗುರಿಯಾಗಿಸಿ ತಲವಾರು ದಾಳಿಗೆ ಮುಂದಾಗಿದ್ದರು ಎನ್ನಲಾಗುತ್ತಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆ ಎದುರಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮುಖಂಡರು ಜಮಾಯಿಸಿದ್ದಾರೆ. ಪರಿವಾರದ ಮುಖಂಡ ಅರುಣ್ ಪುತ್ತಿಲ ಪ್ರತಿಕ್ರಿಯಿಸಿ, ರೌಡಿಸಂ ರೀತಿಯಲ್ಲಿ ಇನ್ನೊಬ್ಬ ಕಾರ್ಯಕರ್ತನನ್ನು ಕೊಲ್ಲುವ ಜಾಯಮಾನ ಪುತ್ತೂರಿನಲ್ಲಿ ಬಂದಿದೆ. ಇದನ್ನು ಪುತ್ತೂರಿನ ಜನತೆ ಸಹಿಸುವುದಿಲ್ಲ. ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆ ಚುನಾವಣೆ ಬಳಿಕ ಸಂಘ ಪರಿವಾರದಲ್ಲೇ ವಿಭಜನೆಯಾಗಿದ್ದು ಬಿಜೆಪಿ, ಹಿಂದು ಜಾಗರಣ ವೇದಿಕೆ ಇನ್ನಿತರ ಸಂಘಟನೆಗಳ ವಿರುದ್ಧ ಅರುಣ್ ಪುತ್ತಿಲ ಪರ್ಯಾಯವಾಗಿ ಪುತ್ತಿಲ ಪರಿವಾರ ಎನ್ನುವ ಸಂಘಟನೆ ಕಟ್ಟಿದ್ದಾರೆ. ಇದೇ ವಿಚಾರದಲ್ಲಿ ಕಾರ್ಯಕರ್ತರ ನಡುವೆ ವೈಷಮ್ಯ, ಕಿತ್ತಾಟ ನಡೀತಾನೆ ಬಂದಿದೆ. ಈಗ ಜಾಲತಾಣದಲ್ಲಿ ಏನೋ ಪೋಸ್ಟ್ ಹಾಕಿದ್ದಾರೆ, ಮಾತಿಗೆ ಮಾತಾಗಿದೆ ಎನ್ನುವ ನೆಪದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದವರು ಪುತ್ತಿಲ ಪರಿವಾರದ ಕಚೇರಿಗೆ ನುಗ್ಗಿ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾರೆ.
5 BJP members arrested for showing talwar sword at Arun Puthila office in Puttur. Five persons wielding swords created ruckus in front of Hindu leader Arun Kumar Puthila’s office at Mukrampadi here in broad daylight on Friday.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm