ಬ್ರೇಕಿಂಗ್ ನ್ಯೂಸ್
11-11-23 07:25 pm HK News Desk ಕರಾವಳಿ
ಪುತ್ತೂರು, ನ.11: ಪುತ್ತೂರಿನಲ್ಲಿ ಸಂಘ ಪರಿವಾರದಲ್ಲಿ ಸೃಷ್ಟಿಯಾಗಿರುವ ಒಡಕು ಮತ್ತಷ್ಟು ಗಟ್ಟಿಗೊಳ್ಳುವ ಸೂಚನೆ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ವಿಚಾರದಲ್ಲಿ ಬಿಜೆಪಿ ಮತ್ತು ಹಿಂದು ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಪ್ರಮುಖರು, ಸಂಘ ಪರಿವಾರದಿಂದ ಬಂಡಾಯ ಸಾರಿರುವ ಅರುಣ್ ಪುತ್ತಿಲ ಕಚೇರಿಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದ್ದಾರೆ. ಘಟನೆ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮುಕ್ರಂಪಾಡಿಯ ಪುತ್ತಿಲ ಪರಿವಾರದ ಕಚೇರಿಗೆ ಆಗಮಿಸಿದ ಹಿಂದು ಜಾಗರಣ ವೇದಿಕೆ ಮುಖಂಡ ದಿನೇಶ್ ಪಂಜಿಗ ನೇತೃತ್ವದ ಯುವಕರು, ಏಕಾಏಕಿ ತಲವಾರು ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಪುತ್ತಿಲ ಪರಿವಾರದ ಕಾರ್ಯಕರ್ತ ಮನೀಶ್ ಎಲ್ಲಿದ್ದಾನೆ ಎಂದು ಕೇಳುತ್ತಾ ಆತನನ್ನು ಬಿಡೋದಿಲ್ಲ ಎಂದು ಹೇಳಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ, ದಿನೇಶ್ ಪಂಜಿಗ ತನ್ನ ಸೊಂಟಕ್ಕೆ ತಲವಾರನ್ನು ಸಿಕ್ಕಿಸಿಕೊಂಡಿರುವುದು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದೇ ವೇಳೆ, ಸ್ಥಳಕ್ಕೆ ಬಂದ ಪೊಲೀಸರು ಎಂಟು ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ(38), ಆತನ ಜೊತೆಗಿದ್ದ ಭವಿತ್(19), ಬೊಳುವಾರು ನಿವಾಸಿ ಮನ್ವಿತ್(19), ಆರ್ಯಾಪು ಗ್ರಾಮದ ಜಯಪ್ರಕಾಶ್(18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಬನ್ನೂರು ಗ್ರಾಮದ ಮನೀಶ್ (23), ಪುತ್ತೂರು ಕಸಬಾದ ವಿನೀತ್ (10) ಮತ್ತು ಇಬ್ಬರು ಅಪ್ರಾಪ್ತ ತರುಣರನ್ನು ವಶಕ್ಕೆ ಪಡೆದಿದ್ದಾರೆ.
ಟಿಕೆಟ್ ಹೆಸರಲ್ಲಿ ವಂಚನೆ- ಜಗಳ ;
ಇತ್ತೀಚೆಗೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಶೇಖರ್ ಎಂಬಾತ ಮತ್ತು ಇನ್ನಿಬ್ಬರು ಸೇರಿಕೊಂಡು ಎರಡು ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ನಡೆಸಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಶೇಖರ್ ಕಳೆದ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪರವಾಗಿ ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಇದೇ ವಿಚಾರದಲ್ಲಿ ಕಾರ್ಯಕರ್ತರ ನಡುವೆ ವಾಟ್ಸಪ್, ಫೇಸ್ಬುಕ್ ಮೀಡಿಯಾದಲ್ಲಿ ಪರಸ್ಪರ ಪೋಸ್ಟ್, ಜಗಳ ತಾರಕಕ್ಕೇರಿತ್ತು. ಪುತ್ತಿಲ ಬೆಂಬಲಿಗರು ಮತ್ತು ಬಿಜೆಪಿ ಬೆಂಬಲಿಗರ ನಡುವೆ ಸೋಶಿಯಲ್ ಮೀಡಿಯಾ ವಾರ್ ನಡೆದು ಇದೀಗ ತಲವಾರು ಝಳಪಿಸುವಂತಾಗಿದೆ.
ವಿಧಾನಸಭೆ ಚುನಾವಣೆಯ ಬಳಿಕ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಕಾರ್ಯಕರ್ತರು ಕತ್ತಿ ಮಸೆಯುತ್ತಲೇ ಬಂದಿದ್ದಾರೆ. ಅರುಣ್ ಪುತ್ತಿಲ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸುವುದಕ್ಕೆ ಪುತ್ತೂರಿನ ಬಿಜೆಪಿ ಪ್ರಮುಖರೇ ವಿರೋಧ ನಿಂತಿದ್ದು ಎರಡೂ ಸಂಘಟನೆಗಳ ನಡುವೆ ಒಡಕಿಗೆ ಕಾರಣವಾಗಿದೆ. ಪುತ್ತಿಲರನ್ನು ಬಿಜೆಪಿಯಲ್ಲಿ ಪ್ರಮುಖ ಜವಾಬ್ದಾರಿ ಕೊಟ್ಟು ಒಡೆದು ನಿಂತ ಪರಿವಾರವನ್ನು ವಿಲೀನಗೊಳಿಸಲು ಆರೆಸ್ಸೆಸ್ ನಾಯಕರು ಪ್ರಯತ್ನ ಪಟ್ಟಿದ್ದಾರೆ. ಆದರೆ, ಪಕ್ಷದ ಜಿಲ್ಲಾಧ್ಯಕ್ಷ ಅಥವಾ ರಾಜ್ಯದಲ್ಲಿ ಪ್ರಮುಖ ಜವಾಬ್ದಾರಿ ಸ್ಥಾನಗಳಿಗೆ ಪುತ್ತಿಲ ಪರಿವಾರ ಪಟ್ಟು ಹಿಡಿದಿರುವುದು, ಅದಕ್ಕೆ ಆರೆಸ್ಸೆಸ್ ನಾಯಕರು ಮತ್ತು ಪುತ್ತೂರಿನ ಬಿಜೆಪಿ ಪ್ರಮುಖರೇ ಒಪ್ಪದೇ ಇರುವುದು ಒಡಕು ಗಟ್ಟಿಗೊಳ್ಳಲು ಕಾರಣವಾಗಿದೆ. ಇದೀಗ ಪಕ್ಷದ ರಾಜ್ಯ ಘಟಕಕ್ಕೆ ಹೊಸ ಸಾರಥಿಯ ನೇಮಕ ಆಗಿರುವುದರಿಂದ ಅರುಣ್ ಪುತ್ತಿಲರನ್ನು ಪರಿಗಣಿಸುತ್ತಾರೆಯೇ ಎಂದು ಕುತೂಹಲ ಉಂಟಾಗಿದೆ.
Sword displayed at Puttur Arun Puthila office, BJP ticket scam reason behind fight. Five persons wielding swords created ruckus in front of Hindu leader Arun Kumar Puthila’s office at Mukrampadi here in broad daylight on Friday.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am