ಬ್ರೇಕಿಂಗ್ ನ್ಯೂಸ್
11-11-23 10:16 pm Mangalore Correspondent ಕರಾವಳಿ
ಮಂಗಳೂರು, ನ.11: ಕಾಸರಗೋಡು ಜಿಲ್ಲೆಯ ಅನಂತಪುರ ದೇವಸ್ಥಾನದಲ್ಲಿ ಮತ್ತೆ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ದೇವಳದ ಕೆರೆಯಲ್ಲಿದ್ದ ಮೊಸಳೆ ಬಬಿಯಾ ಸಾವನ್ನಪ್ಪಿದ ಒಂದು ವರ್ಷದ ಬಳಿಕ ದಿಢೀರ್ ಅನ್ನುವಂತೆ ಮರಿ ಮೊಸಳೆಯೊಂದು ಕಾಣಿಸಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಕುಂಬಳೆ ಸಮೀಪದ ನಾಯ್ಕಾಪು ಗ್ರಾಮದ ಅನಂತಪದ್ಮನಾಭ ಕ್ಷೇತ್ರ ಸರೋವರ ಕ್ಷೇತ್ರ ಎಂದೇ ಪ್ರಸಿದ್ಧಿ. ಈ ಹಿಂದೆ 70 ವರ್ಷಗಳಿಂದಲೂ ದೇವಳದ ಕೆರೆಯಲ್ಲಿ ಬದುಕಿತ್ತು ಎನ್ನಲಾಗಿದ್ದ ಬಬಿಯಾ ಮೊಸಳೆ, ದಿನವೂ ಅರ್ಚಕರು ನೀಡುತ್ತಿದ್ದ ನೈವೇದ್ಯ ಕಾರಣದಿಂದಲೇ ಪ್ರಸಿದ್ಧಿ ಪಡೆದಿತ್ತು. ದಿನವೂ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಭಕ್ತರಿಗೂ ದರ್ಶನ ನೀಡುತ್ತಿತ್ತು. ಉಳಿದಂತೆ ಕೆರೆಯ ಸುರಂಗದಲ್ಲಿಯೇ ತನ್ನಷ್ಟಕ್ಕೆ ಮಲಗಿಕೊಂಡಿರುತ್ತಿತ್ತು. ಆ ಮೊಸಳೆ ಎಷ್ಟು ಸಾಧುವಾಗಿತ್ತು ಎಂದರೆ, ಕೆಲವೊಮ್ಮೆ ದೇವಸ್ಥಾನದ ಅಂಗಣಕ್ಕೂ ಬಂದು ಮಲಗಿಕೊಂಡಿರುತ್ತಿತ್ತು. ಇದನ್ನು ನೋಡಿದವರು ಕ್ರೂರ ಪ್ರಾಣಿಯಾದ ಮೊಸಳೆ ಸಾಧುವಾಗಿದ್ದು ಹೇಗೆ ಮತ್ತು ಸಸ್ಯಾಹಾರಿ ಆಗಿದ್ದು ಹೇಗೆ ಎಂದು ಚಕಿತರಾಗಿದ್ದರು.



ಇದೀಗ ಅಂತಹುದೇ ರೀತಿಯ ಮೊಸಳೆ ದೇವಸ್ಥಾನದ ಕೆರೆಯಲ್ಲಿ ಪ್ರತ್ಯಕ್ಷವಾಗಿದೆ. ಕೆಲವು ದಿನಗಳ ಹಿಂದೆ ಕಾಞಂಗಾಡಿನಿಂದ ಬಂದಿದ್ದ ಕುಟುಂಬಕ್ಕೆ ಆ ಮೊಸಳೆ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಆನಂತರ, ಕೆರೆಯ ಮೂಲೆಯಲ್ಲಿ ಅರ್ಚಕರಿಗೂ ಕಂಡುಬಂದಿದೆ ಎನ್ನಲಾಗುತ್ತಿದ್ದು, ಇದರ ಫೋಟೋ, ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಅನಂತಪುರ ದೇವಸ್ಥಾನ ಕೆರೆಯ ಮಧ್ಯದಲ್ಲಿದ್ದು, ಸುತ್ತ ನೀರು ಆವರಿಸಿಕೊಂಡಿದೆ. ಕೆರಯಲ್ಲಿ ಸಾಕಷ್ಟು ಮೀನುಗಳು ತುಂಬಿಕೊಂಡಿದ್ದು, ಬಬಿಯಾ ಮೊಸಳೆ ನೀರಿನಲ್ಲಿದ್ದರೂ ಅವನ್ನು ತಿನ್ನದೆ ತನ್ನಷ್ಟಕ್ಕೆ ಇದ್ದುದು ಅಚ್ಚರಿಗೂ ಕಾರಣವಾಗಿತ್ತು. ಅರ್ಚಕರು ಬಬಿಯಾ ಎಂದು ಕರೆದರೆ, ಸುರಂಗದಿಂದ ಎದ್ದು ಬರುತ್ತಿತ್ತು. ಇದೀಗ ಮತ್ತೊಂದು ಮೊಸಳೆ ಪ್ರತ್ಯಕ್ಷ ಆಗಿದ್ದು, ಮೀನುಗಳನ್ನು ತಿಂದು ಹಾಕುತ್ತಾ, ಭಕ್ತರ ಪಾಲಿಗೆ ಪವಾಡ ಸೃಷ್ಟಿಸುತ್ತಾ ಅನ್ನುವ ಕುತೂಹಲ ಕೆರಳಿಸಿದೆ.
ಬಬಿಯಾ ಮೊಸಳೆ 2022ರ ಅಕ್ಟೋಬರ್ 10ರಂದು ಸಾವನ್ನಪ್ಪಿತ್ತು. ದೇವರ ಮೊಸಳೆ ಎಂದೇ ಹೆಸರಾಗಿದ್ದ ಬಬಿಯಾಗೆ ವಿಶೇಷ ಕ್ರಿಯಾದಿಗಳನ್ನು ನೆರವೇರಿಸುವ ಮೂಲಕ ಅಂತ್ಯಕ್ರಿಯೆ ನಡೆಸಲಾಗಿತ್ತು. ದೇಗುಲದ ಆಕರ್ಷಣೆಯಾಗಿದ್ದ ಮೊಸಳೆಯ ಸಾವು ಭಕ್ತರಿಗೂ ನಿರಾಸೆ ಉಂಟುಮಾಡಿತ್ತು. ಇದೀಗ ಮತ್ತೆ ಅಂತಹುದೇ ಮೊಸಳೆ ಕಾಣಿಸಿದ್ದು ಜನರನ್ನು ಆಕರ್ಷಿಸಿದೆ.
13 months of Babiyas death, another crocodile seen at Ananthapura Lake Temple in Kasargod. Thirteen months after the death of crocodile Babiya, another crocodile has been spotted at at Ananthapura Lake Temple here. This is a cause of surprise among the devotees. Babiya had a history in the temple and worshiped for 75 years. However, it died on October 9, 2022.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm